ಕೆಂಜಾರು ಕರಂಬಾರು : ಯುವವಾಹಿನಿ ಕೆಂಜಾರು ಕರಂಬಾರು ಘಟಕದಿಂದ ಶ್ರೀದೇವಿ ಭಜನಾ ಮಂದಿರದ ವಠಾರದಲ್ಲಿ ಬಾಲಕೃಷ್ಣ ,ಮುದ್ದು ಕೃಷ್ಣ, ಹಾಗೂ ಕಿಶೋರ ಕೃಷ್ಣ ವೇಷ ಸ್ಪರ್ದೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಯಶವಂತ ಬಿ ರವರು ವಹಿಸಿದರು ಹಾಗೂ ಉದ್ಘಾಟನೆಯನ್ನು ವಿಶ್ವಾನಂದ ಶೆಟ್ಟಿ , ಗೌರವ ಅಧ್ಯಕ್ಷರು ಶ್ರೀ ದೇವಿ ಭಜನಾ ಮಂದಿರ ಕೆಂಜಾರು ಕರಂಬಾರುರವರು ನೆರವೇರಿಸಿದರರು. ಮುಖ್ಯ ಅತಿಥಿಯಾಗಿ ಪದ್ಮನಾಭ ಮರೋಲಿ, ಸಲಹೆಗಾರರು,ಯುವವಾಹಿನಿ ಕೆಂಜಾರು ಕರಂಬಾರು ಘಟಕ, ಸೇಸಪ್ಪ ಅಮೀನ್, ಅಧ್ಯಕ್ಷರು ಶ್ರೀದೇವಿ ಭಜನಾ ಮಂದಿರ ಕೆಂಜಾರು ಕರಂಬಾರು, ಮಳವೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವನಜ ಬಿ ಶೆಟ್ಟಿ ಹಾಗೂ ಸತೀಶ್ ದೇವಾಡಿಗ ಅಧ್ಯಕ್ಷರು ಹಳೇ ವಿದ್ಯಾರ್ಥಿ ಸಂಘ ಕರಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪಸ್ಥಿತರಿದ್ದರು ಕೇಂದ್ರ ಸಮಿತಿಯಲ್ಲಿ 2019-20 ನೇ ಸಾಲಿನ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಣೇಶ್ ಅರ್ಭಿಯವರನ್ನು ಪುಷ್ಪ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಘಟಕದ ಅಧ್ಯಕ್ಷರು ಸ್ವಾಗತಿಸಿದರು ಹಾಗೂ ಕಾರ್ಯಕ್ರಮದ ವಿಷಯವಾಗಿ ಪ್ರಸ್ತಾವಿಕವಾಗಿ ನುಡಿದರು.
ಸಭಾ ಕಾರ್ಯಕ್ರಮವನ್ನು ಕು.ನಯನ, ನಿರ್ದೇಶಕರು ಕಲೆ ಮತ್ತು ಸಾಹಿತ್ಯ ಧನ್ಯವಾದದ ಮೂಲಕ ಕೊನೆಗೊಳಿಸಿದರು. ಗಣೇಶ ಅರ್ಬಿ ಕಾರ್ಯಕ್ರಮ ನಿರೂಪಿಸಿದರು. ಘಟಕದ ಸದಸ್ಯರು ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮ ಅಂದಗಾಣಿಸಿದರು.