ಮಾಣಿ : ಚೈತನ್ಯ 2022 ತರಬೇತಿ ಕಾರ್ಯಾಗಾರವು ಯುವವಾಹಿನಿ ಸಂಘಟನೆಯು ಇನ್ನಷ್ಟು ಬಲಗೊಳ್ಳಲು ಸಹಕಾರಿಯಾಗಲಿದೆ ಹಾಗೂ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಯುವವಾಹಿನಿ ಮಾಣಿ ಘಟಕದ ಅಚ್ಚುಕಟ್ಟುತನದ ಆತಿಥ್ಯ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ತಿಳಿಸಿದರು.
ಅವರು ದಿನಾಂಕ 10.04.2022 ರಂದು ಯುವವಾಹಿನಿ ರಿ.ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ರಿ.ಮಾಣಿ ಘಟಕದ ಆತಿಥ್ಯದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರು, ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕರಿಗೆ ಮಾಣಿ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಚೈತನ್ಯ-2022 ತರಬೇತಿ ಕಾರ್ಯಾಗಾರದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚೈತನ್ಯ-2022 ರ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ,ಇಂತಹ ತರಬೇತಿಗಳು ಸಂಘಟನಾ ಬದುಕಿಗೆ ಮತ್ತಷ್ಟು ಸ್ಪೂರ್ತಿ ನೀಡಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ರಿ ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯರವರು ನುಡಿದರು . ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಈ ಸಾಲಿನ,ಘಟಕದ ಕಾರ್ಯಕ್ರಮ, ಸಭೆಗಳ ವಿವರ ಮತ್ತು ಘಟಕದ ಸದಸ್ಯರ ಬರಹಗಳನ್ನು ಒಳಗೊಂಡ “ಯುವ ಸಿಂಚನ” ಸಂಚಿಕೆಯ ಮೊದಲ ಪ್ರತಿಯನ್ನು ಈ ಕಾರ್ಯಕ್ರಮದಲ್ಲಿ ಅತಿಥಿಗಳು ಬಿಡುಗಡೆಗೊಳಿಸಿದರು . ಸಮಾರಂಭದಲ್ಲಿ ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು,ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸತೀಶ್ ಕಿಲ್ಪಾಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಲ ಹಾಗೂ ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚಿನ್ ಎಂ. ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಮೇಶ್ ಪೂಜಾರಿ ಮುಜಲ ರವರು ಸ್ವಾಗತಿಸಿದರು,ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸಚಿನ್ ಎಂ ವಂದಿಸಿದರು, ಘಟಕದ ಸದಸ್ಯೆ ಜಯಶ್ರೀ ರವರು ಪ್ರಾರ್ಥಿಸಿದರು,ಘಟಕದ ಕಾರ್ಯದರ್ಶಿ ರೇಣುಕಾ ಕಣಿಯೂರುರವರು ಕಾರ್ಯಕ್ರಮ ನಿರೂಪಿಸಿದರು.