ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕದಿಂದ ಸಹಾಯ ಹಸ್ತ

ಎಕ್ಕಾರು ಪೆರ್ಮುದೆ : ಮನನೊಂದ ಅಶಕ್ತ ಸಮಾಜ ಬಾಂಧವರ ಸಹಾಯಕ್ಕೆ ಸದಾ ಸಿದ್ದ ಎನ್ನುವ ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ  ಘಟಕವು ತನ್ನ ಧ್ಯೇಯ ವಾಕ್ಯದಂತೆ ಮತ್ತೊಂದು ನೊಂದ ಬಡ ಮನಸ್ಸಿಗೆ ತನ್ನ ಸಹಾಯ ಹಸ್ತವನ್ನು ನೀಡಿರುತ್ತದೆ
ಮೂಡಿಗೆರೆಯ ಸುರೇಶ್ ಇವರು ಕಳೆದ ಕೆಲ ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ನಗರದ ಎ.ಜೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಮೂಲತಃ ಬಡ ಕುಟುಂಬದವರಾಗಿದ್ದು, ಅವಿವಾಹಿತರಾಗಿದ್ದು ತನ್ನ ತಂದೆಯನ್ನೂ ಕಳೆದುಕೊಂಡಿರುತ್ತಾರೆ. ಇವರ ಚಿಕಿತ್ಸೆಗೆ ಹಣ ಹೊಂದಿಸಲು ಇವರ ಸಹೋದರಿ ಸುಮ ಇವರು ಕಷ್ಟ ಪಡುತ್ತಿದ್ದು ಬೇರೆ ಬೇರೆ ಸಂಸ್ಥೆಗಳ ಮೊರೆ ಹೋಗಿರುತ್ತಾರೆ. ಇದನ್ನು ಗಮನಿಸಿದ ಯುವವಾಹಿನಿ(ರಿ) ಎಕ್ಕಾರು-ಪೆರ್ಮುದೆ ಘಟಕವು ಯುವವಾಹಿನಿಯ ಇತರ ಘಟಕಗಳ ನೆರವಿನೊಂದಿಗೆ ಸುರೇಶ್ ಇವರ ಚಿಕಿತ್ಸೆಗೆ 17,000/- ರೂಪಾಯಿಗಳ ದೇಣಿಗೆಯನ್ನು ಸುಮ ಇವರಿಗೆ ನೀಡಿರುತ್ತದೆ.
ಯುವವಾಹಿನಿ ಸಂಸ್ಥೆಯು ಸುರೇಶ್ ಇವರ ಮುಂದಿನ ಚಿಕಿತ್ಸೆ ಗೆ ಇನ್ನೂ ಆದಷ್ಟೂ ಸಹಕಾರವನ್ನು ನೀಡುವುದಾಗಿ ಭರವಸೆಯನ್ನು ಕೂಡ ‌ನೀಡಿ ನೊಂದ ಮನಸ್ಸಿಗೆ ಸಾಂತ್ವನ‌ ನೀಡಿರುತ್ತದೆ.

One thought on “ಯುವವಾಹಿನಿ(ರಿ) ಎಕ್ಕಾರು ಪೆರ್ಮುದೆ ಘಟಕದಿಂದ ಸಹಾಯ ಹಸ್ತ

Leave a Reply

Your email address will not be published. Required fields are marked *

error: Content is protected !!