ದಿನಾಂಕ : 07-04-2024 ರಂದು ಯುವವಾಹಿನಿ (ರಿ.) ಪುತ್ತೂರು ಘಟಕದ ವತಿಯಿಂದ ಒಂದು ದಿನದ ಕಿರು ಪ್ರವಾಸವನ್ನು ಬ್ರಹ್ಮಾವರದ ಉಪ್ಪಿನಕೊಟೆಯ” Relax Leisure Park” ಗೆ ಹಮ್ಮಿಕೊಂಡಿದ್ದರು. ಮುಂಜಾನೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ ಪ್ರವಾಸವನ್ನು ಪ್ರಾರಂಭಿಸಿದರು. ಬಸ್ಸಿನಲ್ಲಿ ಎಲ್ಲರೂ ಪರಿಚಯ ಮಾಡಿಕೊಂಡು Relax Liesure ಪಾರ್ಕ್ ತಲುಪಿ ಉಪಹಾರ ಮಾಡಿ ಬೋಟಿನ ಮೂಲಕ ಸಾಗಿದಾಗ ಮುಖ್ಯಸ್ಥರು ಮಾಹಿತಿಯನ್ನು ನೀಡಿದರು.
ಸದಸ್ಯರು ಎರಡು ತಂಡಗಳನ್ನು ಮಾಡಿ ವಾಲಿಬಾಲ್, ಹಗ್ಗಜಗ್ಗಾಟ ಆಡುವುದರ ಮುಖಾಂತರ ಪರಸ್ಪರ ಮನರಂಜಿಸಿದರು. ಮದ್ಯಾಹ್ನದ ಭೋಜನವನ್ನು ಸವಿದು ಸ್ವಲ್ಪ ವಿರಾಮವನ್ನು ಪಡೆದು ನದಿ ನೀರಿನಲ್ಲಿ ಬೋಟಿಂಗ್ ಆಟ ಆಡಿದರು. ಸಂಜೆಯ ಚಾ /ತಿಂಡಿ ಮುಗಿಸಿ ಬೋಟಿನ ಮೂಲಕ ಮರಳಿ , ಬಸ್ಸಿನಲ್ಲಿ ಬಂದು ಪಣಂಬೂರು ಬೀಚ್ ಹೋಗಿ, ರಾತ್ರಿಯ ಉಟೋಪಚಾರವನ್ನು ಮುಗಿಸಿ ಪುತ್ತೂರು ತಲುಪಿದರು. ಪ್ರವಾಸದಲ್ಲಿ ಪುತ್ತೂರು ಘಟಕದ ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರು, ಮಾಜಿ ಅಧ್ಯಕ್ಷರುಗಳು ಪಾಲ್ಗೊಂಡು ಜೊತೆಯಾಗಿ ಪ್ರವಾಸದ ಸವಿಯನ್ನು ಆನಂದಿಸಿದರು.