ಕಟಪಾಡಿ : ಯುವವಾಹಿನಿ(ರಿ) ಕಟಪಾಡಿ ಘಟಕ, ಜೇಸಿಐ ಕಟಪಾಡಿ, ವಜ್ರ ಜಿಮ್ ಕಟಪಾಡಿ ಮತ್ತು ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಹಾಗೂ ಉಡುಪಿ ಜಿಲ್ಲಾಸ್ಪತ್ರೆ ಇವರ ಸಹಯೋಗದಲ್ಲಿ ದಿನಾಂಕ ಜ.13ರಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬೃಹತ್ ರಕ್ತದಾನ ಶಿಬಿರವು ಜರಗಿತು.
ಶ್ರೀ ಕ್ಷೇತ್ರದ ಗೌರವ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಸ್ಪತ್ರೆಯ ರಕ್ತದಾನ ವಿಭಾಗದ ಮುಖ್ಯಸ್ಥೆ ವೀಣಾ ಕುಮಾರಿ, ಯುವವಾಹಿನಿ ಕೇಂದ್ರ ಸಮಿತಿಯ ರಮೇಶ್ ಕೋಟ್ಯಾನ್, ಶ್ರೀ ಕ್ಷೇತ್ರದ ನಿಯೋಜಿತ ಗೌರವ ಪ್ರಧಾನ ಕಾರ್ಯದರ್ಶಿಯು. ಶಿವಾನಂದ, ಹಿರಿಯರಾದ ದೇವಪ್ಪ ಅಮೀನ್, ನಿಯೋಜಿತ ಕೋಶಾಧಿಕಾರಿಯಾದ ವೀರೇಶ್ ಸುವರ್ಣ, ಮಹೇಶ್ ಅಂಚನ್ ಉಪಸ್ಥಿತರಿದ್ದರು.
ಯುವವಾಹಿನಿ ಕಟಪಾಡಿ ಘಟಕದ ಅಧ್ಯಕ್ಷ ರಿತೇಶ್ ಕೋಟ್ಯಾನ್ ಸ್ವಾಗತಿಸಿದರು. ಜೇಸಿಐ ಕಟಪಾಡಿ ಘಟಕದ ಅಧ್ಯಕ್ಷ ಗಂಗಾಧರ ಕಾಂಚನ್ ವಂದಿಸಿದರು, ಜೇಸಿಐ ಕಟಪಾಡಿ ಘಟಕದ ಕಾರ್ಯದರ್ಶಿ ಸುರೇಶ್ ಟಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು
ಸಮಾಜಮುಖಿ ಕಾರ್ಯಕ್ರಮ..