ಬಂಟ್ವಾಳ : ದಿನಾಂಕ 24 ಡಿಸೆಂಬರ್ 2023 ರಂದು ಬೆಂಜನಪದವು ಶುಭಲಕ್ಷ್ಮೀ ಅಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಸುಸಂದರ್ಭದಲ್ಲಿ ಸಜಿಪ ಮುನ್ನೂರು ಮೂರ್ತೆದಾರ ಸೇವಾ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2023 ಮಡಿಲೇರಿಸುವ ಶುಭ ಘಳಿಗೆ ಓದಗಿಬಂತು.
![](http://yuvavahini.in/wp-content/uploads/2024/01/WhatsApp-Image-2024-01-11-at-7.53.54-AM-682x1024.jpg)
ಹಿಂದುಳಿದ ವರ್ಗಗಳ ಹಾಗೂ ಮೂರ್ತೆದಾರರ ಆರ್ಥಿಕ ಬೆಳವಣಿಗೆ, ಮಹಿಳಾ ಸಬಲೀಕರಣ ಹಾಗೂ ಸಮಾಜದ ಅಶಕ್ತ ಕುಟುಂಬಗಳನ್ನು ಗುರುತಿಸಿ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ವಿದ್ಯಾ ನಿಧಿ ದತ್ತುಸ್ವೀಕಾರ, ಹೀಗೆ ಹತ್ತು ಹಲವು ಮಜಲುಗಳ ನಿರಂತರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಗೌರವಿಸಿ ಯುವವಾಹಿನಿ ಸಂಸ್ಥೆಯು “ಯುವವಾಹಿನಿ ಸಾಧನಾ ಶ್ರೇಷ್ಠ 2023” ಪ್ರಶಸ್ತಿಗೆ ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
![](http://yuvavahini.in/wp-content/uploads/2024/01/WhatsApp-Image-2024-01-11-at-7.54.25-AM-1024x682.jpg)
ಈ ಸಂದರ್ಭದಲ್ಲಿ ಸಮಾರಂಭದ ಉದ್ಘಾಟಕರಾದ ಪದ್ಮರಾಜ್.ಆರ್, ಕೇಂದ್ರ ಸಮಿತಿ ಅಧ್ಯಕ್ಷರು ರಾಜೇಶ್.ಬಿ, ನಾರ್ದನ್ ಸ್ಲೈ ನಿರ್ದೇಶಕರಾದ ಕೃತೀನ್ ಅಮೀನ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರು ಡಾ।ತುಕಾರಾಮ ಪೂಜಾರಿ, ಉದ್ಯಮಿಗಳಾದ ನಿರ್ಮಲ್ ಜಗನ್ನಾಥ ಬಂಗೇರ, ನಟೇಶ್ ಪೂಜಾರಿ, ಲೋಕೇಶ್ ಪೂಜಾರಿ ಕಲ್ಲಡ್ಕ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ವಾರ್ಷಿಕ ಸಮಾವೇಶದ ನಿರ್ದೇಶಕರಾದ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ,ನೂತನ ಅಧ್ಯಕ್ಷರಾದ ಹರೀಶ್.ಕೆ.ಪೂಜಾರಿ, ನೂತನ ಪ್ರಧಾನ ಕಾರ್ಯದರ್ಶಿ ಜಗದೀಶ್‌ಚಂದ್ರ ಡಿ.ಕೆ ಹಾಗೂ ಯುವವಾಹಿನಿಯ 33 ಘಟಕಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ಕೊಂಬು ವಾದ್ಯಗಳ ಹಿಮ್ಮೇಳದ ಸ್ವಾಗತದೊಂದಿಗೆ ವೇದಿಕೆಗೆ ಬರಮಾಡಿಕೊಂಡು, ಸಂಸ್ಥೆಯು ನಡೆದ ಬಂದ ಹಾದಿಯ ರೂಪುರೇಷೆ ಸಾಧನಾ ಪರಿಚಯವನ್ನು ಸಾಕ್ಷ್ಯ ಚಿತ್ರದ ಮೂಲಕ, ಮೈಸೂರು ಪೇಟ,ಜರಿತಾರಿ ಶಾಲು,ಅತ್ಯಾಕರ್ಷಕ ಸ್ಮರಣಿಕೆ ಹಾಗೂ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ 2023 ಪತ್ರ ನೀಡಿ ಗೌರವ ಆದರಗಳಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
![](http://yuvavahini.in/wp-content/uploads/2023/12/WhatsApp-Image-2024-01-11-at-7.53.14-AM-1024x682.jpg)
ಸಂಘದ ಅಧ್ಯಕ್ಷರು ಮಾನ್ಯ ಸಂಜೀವ ಪೂಜಾರಿಯವರಿಗೆ ಹಾರ್ಧಿಕ ಅಭಿನಂದನೆಗಳು