1987-88 |
ವಿಜಯದಶಮಿಯ ಶುಭದಿನದಂದು ಸಂಘಟನೆಯ ಉದಯ (02-10-1987) |
1988-89 |
ಸಂಘಟನೆಯ ಮುಖವಾಣಿಯಾಗಿ ‘ಯುವವಾಹಿನಿ’ ಪತ್ರಿಕೆ ಆರಂಭ |
|
1989ರಲ್ಲಿ ಕರ್ನಾಟಕ ಸಂಘಗಳ ನೋಂದಾವಣೆ ಅಧಿನಿಯಮ 1960ರಂತೆ ‘ಯುವವಾಹಿನಿ’ ನೋಂದಾವಣೆ (26-4-1989) |
1990-91 |
ಯುವವಾಹಿನಿ ಮಾಸಿಕ ಪತ್ರಿಕೆಯಾಗಿ ನಿರಂತರ ಪ್ರಕಟನೆ ಆರಂಭ. |
1991-92 |
ಬಿಲ್ಲವ ಸಮಾಜದ ಜನಾಂಗೀಯ ಅಧ್ಯಯನ ಆರಂಭ. |
1992-93 |
ಯುವವಾಹಿನಿ ‘ವಿದ್ಯಾನಿಧಿ’ ಸ್ಥಾಪನೆ, ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಶಿಬಿರ ಆಯೋಜನೆ. |
1993-94 |
ಅಂತರ್ ಘಟಕ ಕ್ರಿಕೆಟ್ ಪಂದ್ಯಾಟ, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ |
1994-95 |
ಮಂಗಳೂರಿನ ಕುದ್ರೋಳಿಯಿಂದ ಉಡುಪಿಯ ಬನ್ನಂಜೆಯವರೆಗೆ ‘ಗುರು ಸಂದೇಶ ಯಾತ್ರೆ’ |
1995-96 |
ಕಂಕನಾಡಿಯಿಂದ, ಉಡುಪಿಯ ಬನ್ನಂಜೆಯಿಂದ, ಕಾರ್ಕಳ ಮೂಡಬಿದ್ರೆಯಿಂದ ಏಕಕಾಲದಲ್ಲಿ ಗುರು ಸಂದೇಶ ಯಾತ್ರೆ ಹೊರಟು ಮೂಲ್ಕಿಯಲ್ಲಿ ಸಂಗಮ. |
1996-97 |
‘ಉದ್ಯೋಗಸ್ಥ ಸಮಾಜ ಬಾಂಧವರ ಸಮಾವೇಶ’ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ, ದಮಾನೋತ್ಸವ ವರ್ಷಾಚರಣೆ, ಮಂಗಳೂರಿನ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ‘ಯುವ ಸಮಾವೇಶ’ |
1997-98 |
ಮಂಗಳೂರಿನ ಕಂಕನಾಡಿ ಸರ್ವಮಂಗಳ ಸಭಾಂಗಣದಲ್ಲಿ ‘ಉದ್ಯಮಿಗಳ ಸಮಾವೇಶ’, ಸ್ವ-ಉದ್ಯೋಗ ಮಾಹಿತಿ ಶಿಬಿರ. |
1998-89 |
‘ಶಿಕ್ಷಕರ ಸಮಾವೇಶ’ |
1999-2000 |
ವಿದ್ಯಾಶಿಬಿರ, ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿಯಲ್ಲಿ (25-10-1999ರಿಂದ 27-10-1999) |
1999-2000 |
ಜಿಲ್ಲೆಯ 8 ಕಡೆಗಳಿಂದ ಹೊರಟ ಐತಿಹಾಸಿಕ ಗುರು ಸಂದೇಶ ಯಾತ್ರೆ ಬಂಟ್ವಾಳದ ಬಿ.ಸಿ. ರೋಡಿನಲ್ಲಿ ಸಮಾವೇಶ (29-8-1999) |
2000-01 |
ಮೂಲ್ಕಿ ರುಕ್ಕರಾಮ ಸಾಲಿಯಾನ್ ಸಭಾಂಗಣದಲ್ಲಿ ಐತಿಹಾಸಿಕ ‘ಶಾಂತಿಗಳ ಸಮಾವೇಶ’ |
2001-02 |
ವಕೀಲರು, ವೈದ್ಯರು ಮತ್ತು ಇಂಜಿನಿಯರುಗಳ ಸಮಾವೇಶ, ಕುದ್ರೋಳಿ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ. |
2002-03 |
‘ವಿಶುಕುಮಾರ್ ಸಂಸ್ಮರಣ’ ಕಾರ್ಯಕ್ರಮ, ವಿವಿಧೆಡೆಗಳಿಂದ ಗುರು ಸಂದೇಶ ಯಾತ್ರೆ ಹೊರಟು ಕಟಪಾಡಿಯಲ್ಲಿ ಸಮಾವೇಶ, ಪ್ರಥಮ ವಿಶುಕುಮಾರ್ ಪ್ರಶಸ್ತಿ ಪ್ರದಾನ ಡಾ| ನಾ. ಮೊಗಸಾಲೆಯವರಿಗೆ (ಪಂಥ ಕಾದಂಬರಿಗಾಗಿ) |
2003-04 |
ವಿಶುಕುಮಾರ್ ದತ್ತಿನಿಧಿ ಸ್ಥಾಪನೆ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸದಸ್ಯತ್ವ ಸ್ವೀಕಾರ (13-7-2003) |
2004-05 |
ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಕ್ಷ್ಯಚಿತ್ರದ ಸಿ.ಡಿ. ಬಿಡುಗಡೆ, ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ (4-9-2005) |
2005-06 |
|
2006-07 |
ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಜರಗಿದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವದ ಹನುಮಾನ್ ರಥೋತ್ಸವದಂದು ಯುವವಾಹಿನಿಯ ಸರ್ವ ಘಟಕಗಳ ಸೇವೆ (ಸ್ವಯಂ ಸೇವಕರಾಗಿ-05-3-2007) |
2007-08 |
ಯುವವಾಹಿನಿ ಸದಸ್ಯರ ಪರಿಚಯ/ವಿಳಾಸದ ‘ಸಂಪರ್ಕ’ ಕೈಪಿಡಿ ಬಿಡುಗಡೆ (23-11-2008), ಬಹುಮುಖಿ ಸಾಹಿತಿ ವಿಶುಕುಮಾರ್ ಬಗ್ಗೆ ಪುಸ್ತಕ (ಕನ್ನಡ ಸಂಘ ಕಾಂತವರ ಇವರ ಪ್ರಕಟನೆ) ಕ್ಕೆ ಪ್ರಾಯೋಜಕತ್ವ ನೀಡಿ ಬಿಡುಗಡೆ, ‘ಶತಾಯುಷಿ’ ಗೇರ್ತಿಲ ದೇವು ಪೂಜಾರಿಯವರಿಗೆ ‘ಶತನಮನ’ ಅಭಿನಂದನಾ ಕಾರ್ಯಕ್ರಮ, ‘ಕಂಬಳ ರತ್ನ’ ಬಿರುದು ಪ್ರದಾನ |
2008-09 |
ಉಡುಪಿಯಲ್ಲಿ ಜರಗಿದ ಬಿಲ್ಲವರ ಮಹಾ ಮಂಡಲದ ‘ಕೋಟಿ-ಚೆನ್ನಯ’ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಹಯೋಗ. |
2009-10 |
‘ಬಿಲ್ಲವ ಸಮಾಜಕ್ಕೊಂದು ಕಾಯಕಲ್ಪ’ ಬಿಲ್ಲವ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಚಿಂತನ-ಮಂಥನ ಕಾರ್ಯಕ್ರಮ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ (9.5.2010) |
2010-11 |
ಯುವವಾಹಿನಿಗೆ ಸ್ವಂತ ಕಛೇರಿಯ ವ್ಯವಸ್ಥೆ. |
2011-12 |
‘ವಿಶುಕುಮಾರ್ ಪ್ರಶಸ್ತಿ’ಯ ದಶಮಾನೋತ್ಸವ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ (3.11.2012), ಯುವ ವಾಹಿನಿಯ ರಜತ ಮಹೋತ್ಸವ ಸಮಾರಂಭ ಕ್ಷೇತ್ರ ಕುದ್ರೋಳಿಯಲ್ಲಿ (4.11.2012) ‘ಮಾನವತಾವಾದಿ ಜಗದ್ಗುರು ಶ್ರೀ ನಾರಾಯಣ’ ಮತ್ತು ‘ಕೀರ್ತಿಶೇಷ ಬಿಲ್ಲವ ಸಾಧಕರು’ ಪುಸ್ತಕಗಳ ಬಿಡುಗಡೆ. |