ಮೂಲ್ಕಿ ಹರಿಶ್ಚಂದ್ರ ಪಿ. ಸಾಲ್ಯಾನ್ - ರಜತ ರಶ್ಮಿ -2012

ಯುವವಾಹಿನಿಯ ಯಶಸ್ವೀ ಶತಧ್ವಜ ಪಾದಯಾತ್ರೆ

ಪ್ರಕೃತಿಯು ಯಾರ ಸೊತ್ತೂ ಅಲ್ಲ. ಮನುಷ್ಯನ ನಿಜವಾದ ನೋವು ಪ್ರಕೃತಿಗೆ ತಿಳಿದಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರು ಮಹಾ ಗುರು ಒಬ್ಬನನ್ನು ಅವತಾರ ಪುರುಷನನ್ನಾಗಿಯೋ, ಮಹಾತ್ನನನ್ನಾಗಿಯೋ ಭೂಮಿಗೆ ಕಳುಹಿಸುತ್ತಾನೆ. ಇಂತಹವರು ಧರ್ಮದ ಪರಿಪಾಲನೆಗಾಗಿ ಬಹಳ ಶ್ರಮಿಸುತ್ತಿರುವುದರಿಂದ ಮನುಷ್ಯನು ಸುಖವನ್ನು ಕಾಣುತ್ತಾನೆ. ತನ್ನಂತೆ ಎಲ್ಲಾ ಮಾನವ ಜೀವಿಗಳಲ್ಲಿ ಭಗವಂತನನ್ನು ಕಂಡು ಎಲ್ಲರಿಗೂ ಬದುಕುವ ದಾರಿಯನ್ನು ತೋರಿಸುತ್ತಾನೆ. ನೂರ ಐವತ್ತೇಳು ವರ್ಷಗಳ ಹಿಂದೆ ಅಸ್ಪೃಶ್ಯತೆಯ ಕರಿ ನೆರಳು ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರಿದಾಗ ದೇವರು ನಾರಾಯಣ ಗುರುಗಳನ್ನು ಅವತಾರ ಪುರುಷರನ್ನಾಗಿ ಭೂಮಿಯ ಮೇಲೆ ಜನ್ಮಕ್ಕೆ ತಂದರು. ನಾರಾಯಣ ಗುರುಗಳು ಸಮಾಜದಲ್ಲಿ ಪರಿವರ್ತನೆ ಮಾಡಿ ’ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು’ ಎಂಬ ಮಂತ್ರವನ್ನು ಲೋಕಕ್ಕೆ ನೀಡಿದ್ದಾರೆ. ತನ್ನ ಜೀವನದ ಉದ್ದಕ್ಕೂ ದಿನಂಪ್ರತಿ ಕೆಲವು ಕಿಲೋ ಮೀಟರ್ ಪಾದ ಯಾತ್ರೆ ಮಾಡಿ ತನ್ನ ಉದ್ದೇಶವನ್ನು ಏನೇ ಕಷ್ಟ ಬಂದರೂ ಸಾಧಿಸಿ ತೋರಿಸಿದ್ದಾರೆ. ಪಾದೆಯಾತ್ರೆಯಿಂದ ಊರು ಊರುಗಳಿಗೆ ಹೋಗಿ ಅಲ್ಲಿ ಅಸ್ಪೃಶ್ಯತೆಯೇ ಇಲ್ಲವೆಂದು ತೋರಿಸಲು ಕೆಳ ಜಾತಿಯ ಜನರಿಗೆ ಮುಕ್ತವಾಗಿ ದೇವಸ್ಥಾನ ಪ್ರವೇಶ ಮಾಡಲು ದೇವಸ್ಥಾನಗಳನ್ನು ನಿರ್ಮಿಸಿದರು. ಅದರಂತೆ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ನಾರಾಯಣ ಗುರುಗಳು ಪಾದಯಾತ್ರೆ ಮಾಡಿಕೊಂಡು ೧೦೦ ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ್ದಕ್ಕೆ ಇತಿಹಾಸ ಇದೆ. ಇದು ಬಿಲ್ಲವ ಸಮಾಜದ ಹಾಗೂ ಹಿಂದುಳಿದ ವರ್ಗದ ಜನರಿಗೆ ಮುಕ್ತವಾಗಿ ಪ್ರವೇಶ ಮಾಡಲು ಸ್ಥಾಪಿಸಿದಂತಹ ದೇವಸ್ಥಾನ. 100 ವರ್ಷಗಳ ಹಿಂದೆ ಪ್ರತಿಷ್ಠಾಪಿಸಿದ ಈ ದೇವಸ್ಥಾನವು ದಿನದಿಂದ ದಿನಕ್ಕೆ ಪ್ರಗತಿಯನ್ನು ಕಂಡು, ಶ್ರೀ ಜನಾರ್ದನ ಪೂಜಾರಿಯವರ ಮುಂದಾಳತ್ವದಿಂದ ನವೀಕರಣಗೊಂಡು ಜನರನ್ನು ಆಕರ್ಷಿಸುವ ಭವ್ಯವಾದ, ಸುಂದರವಾದ ದೇವಸ್ಥಾನವಾಗಿ ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧ ದೇವಸ್ಥಾನವಾಗಿ ದೂರ ದೂರದ ಊರಿನ ಭಕ್ತರ ಕಣ್ಮನ ಸೆಳೆದು ಪ್ರೇಕ್ಷಣೀಯ ಪುಣ್ಯ ಪಾವನ ಕ್ಷೇತ್ರವಾಗಿದೆ.

ನೂರು ವರ್ಷದ ಮೊದಲು ಅವತಾರ ಪುರುಷರಾದ ನಾರಾಯಣ ಗುರುಗಳ ದಿವ್ಯ ಹಸ್ತದಿಂದ ಪ್ರತಿಷ್ಟಾಪಿಸಲ್ಪಟ್ಟ ಸಮಯದಲ್ಲಿ ನಾವು ಜನನಕ್ಕೆ ಬರಲಿಲ್ಲ. ಇದನ್ನು ನೋಡಿದವರು ಈಗ ಜೀವಂತವಾಗಿ ಯಾರೂ ಇರಲಿಕ್ಕಿಲ್ಲ. ಆದರೆ ನೂರು ವರ್ಷದ ಸಂಭ್ರಮದ ಈ ವೈಭವದ ಉತ್ಸವವನ್ನು ನೋಡಲು ನಾವು ಇದ್ದೇವೆ. ಇದೊಂದು ನಮ್ಮೆಲ್ಲರ ಯೋಗವೆಂದು ಹೇಳಬಹುದು. ಇಂತಹ ಸಂದರ್ಭದಲ್ಲಿ ಬಿಲ್ಲವ ಸಮಾಜದ ನಾವು ಏನಾದರೂ ಒಂದು ಕಾರ್ಯಕ್ರಮವನ್ನು ಮಾಡಿ ಇದು ಒಂದು ದಾಖಲೆಯಾಗಬೇಕೆಂದು ಮೂಲ್ಕಿಯ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಶ್ರೀ ಯೋಗೀಶ್ ಕೋಟ್ಯಾನ್‌ರವರ ಪರಿಕಲ್ಪನೆಗೆ ಸ್ಥಾಪಕ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಸುವರ್ಣರು ರೂಪುರೇಖೆ ನೀಡಿ ಯುವವಾಹಿನಿ ಘಟಕದ ಎಲ್ಲಾ ಸದಸ್ಯರ ಅಭಿಪ್ರಾಯ ಕೇಳಿದರು. ನೂರು ವರ್ಷದ ವೈಭವದ ಆಚರಣೆಗೆ 100 ಧ್ವಜವನ್ನು ಹಿಡಿದುಕೊಂಡು ಮೂಲ್ಕಿ ಬಿಲ್ಲವ ಸಂಘದಿಂದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುವ ನಿರ್ಧಾರಕ್ಕೆ ಬಂದರು. ಆದರೆ ಇದಕ್ಕೆ ಜನರ ಬೆಂಬಲ ಸಿಗುತ್ತದೆಯೋ ಎಂಬ ಸಂಶಯ ಇತ್ತು. ಮೂಲ್ಕಿಯಿಂದ ಮಂಗಳೂರಿನವರೆಗಿನ ಎಲ್ಲಾ ಸಂಸ್ಥೆಯ ಮುಖಂಡರನ್ನು ಭೇಟಿಯಾಗಿ ತಮ್ಮ ಉದ್ದೇಶವನ್ನು ಮುಂದಿಟ್ಟರು. ಇದಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ ತಾವು ಪಾದಯಾತ್ರೆ ಮಾಡುವವರಿಗೆ ಉತ್ತೇಜನ ನೀಡುವೆವು ಎಂದೂ, ಇದಕ್ಕೆ ಬೇಕಾಗುವ ಖರ್ಚು ವೆಚ್ಚವನ್ನು ಕೂಡ ಭರಿಸುವುದಾಗಿ ಹೇಳಿದರು. ಸಂಘ ಸಂಸ್ಥೆಗಳ ಬೆಂಬಲ ಸಿಕ್ಕಿದಾಗ ಮೂಲ್ಕಿ ಯುವವಾಹಿನಿಯ ಸದಸ್ಯರು ಕಾರ್ಯ ಪ್ರವೃತ್ತರಾದರು. ಯುವವಾಹಿನಿ ಮತ್ತು ಎಲ್ಲಾ ಬಿಲ್ಲವ ಸಂಘಟನೆಯ ಸಂಘ ಸಂಸ್ಥೆಯನ್ನು ಖುದ್ದಾಗಿ ಭೇಟಿ ಮಾಡಿ, ಪಾದ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಳಿಕೊಂಡರು. ಇದಕ್ಕೆ ಎಲ್ಲಾ ಸಂಘಟನೆಗಳ ಬೆಂಬಲ ಸಿಕ್ಕಿತು. ಪ್ರತಿಯೊಂದು ಸಂಘಟನೆಯ ಮುಖಂಡರು ತಮ್ಮ ತಮ್ಮ ಸಂಘಟನೆಯವರನ್ನು ಕರೆದು ಸಭೆ ನಡೆಸಿ ನಿಶ್ಚಿತ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸುವ ಗುರಿಯನ್ನು ಇಟ್ಟುಕೊಂಡರು.

ಅಕ್ಟೋಬರ್ 7 ರಂದು ಬೆಳಿಗ್ಗೆ 9 ಗಂಟೆಗೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಿಂದ 100 ಮಂದಿ ಹಳದಿ ಧ್ವಜವನ್ನು ಹಿಡಿದುಕೊಂಡು ಪಾದಯಾತ್ರೆ ಮಾಡಿ 32 ಕಿ.ಮೀ. ದೂರದ ಕುದ್ರೋಳಿ ದೇವಸ್ಥಾನಕ್ಕೆ ಹೋಗುವ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಾಯಿತು. ಬೆಳಿಗ್ಗೆ 8.30 ಕ್ಕೆ ವಿವಿಧ ಸಂಘಟನೆಯ ಪ್ರತಿನಿಧಿಗಳು ಬರಲು ಆರಂಭಿಸಿ ಬಿಲ್ಲವ ಸಂಘದಲ್ಲಿ ಸೇರಿದರು. ಬಿಲ್ಲವ ಮಹಾ ಮಂಡಲದ ವಕ್ತಾರ ಹರಿಕೃಷ್ಣ ಬಂಟ್ವಾಳ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮೂಲ್ಕಿ ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್, ಯುವವಾಹಿನಿಯ ಸ್ಥಾಪಕ ಅಧ್ಯಕ್ಷರಾದ ಚಂದ್ರಶೇಖರ ಸುವರ್ಣ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳ ಸಮಕ್ಷಮದಲ್ಲಿ ಹಳದಿ ಧ್ವಜವನ್ನು ಆಯಾ ಸಂಘಟನೆಯ ಕಾರ್ಯಕರ್ತರಿಗೆ ನೀಡಲಾಯಿತು. ಬಿಲ್ಲವ ಸಂಘದಿಂದ ಹಳದಿ ಧ್ವಜವನ್ನು ಹಿಡಿದು ಹೊರಟ ಇವರು ರಾಷ್ಟ್ರೀಯ ಹೆದ್ದಾರಿ ಮೂಲಕ ಚಲಿಸಿದರು. ಸುಮಾರು ಮುಕ್ಕಾಲು ಕಿಲೋ ಮೀಟರ್ ಉದ್ದದ ಸಾಲಿನಲ್ಲಿ ಹಳದಿ ಧ್ವಜವನ್ನು ಹಿಡಿದು ನಿಂತ ನಾವು ಯಾವುದೋ ಒಂದು ಸಾಧನೆ ಮಾಡಿದ್ದೇವೆ ಎಂದು ಅನಿಸಿತು. ಬಹಳ ಸುಂದರವಾಗಿ ಕಾಣುತ್ತಿದ್ದ ಧ್ವಜದ ಸಾಲು ಬೆಳಿಗ್ಗೆ ಗಂಟೆ ೯.೪೫ ಕ್ಕೆ ತನ್ನ ಒಂದೊಂದೇ ಹೆಜ್ಜೆಯನ್ನು ಹಾಕಲು ಆರಂಭಿಸಿತು. ಈ ಹೆಜ್ಜೆಯು ಬಿಲ್ಲವರ ಬಲಿಷ್ಢ ಸಂಘಟನೆಯ ನಾಂದಿ ಆಗಬಹುದೆಂದು ಕೆಲವರ ಅನಿಸಿಕೆ. ಧ್ವಜದ ಸಾಲು ಮುಂದೆ ಮುಂದೆ ಸಾಗುತ್ತಾ ಹೋದಾಗ, ಬಿಲ್ಲವ ಸಮಾಜ ಬಾಂಧವರು ಸಾಲಿನಲ್ಲಿ ಸೇರಿಕೊಂಡು ಸಾಲು ಉದ್ದ ಉದ್ದಕ್ಕೂ ಬೆಳೆಯುತ್ತಾ ಹೋಯಿತು. ಪಡು ಪಣಂಬೂರು, ಹಳೆಯಂಗಡಿ, ಮುಕ್ಕ, ಸಸಿಹಿತ್ಲು ಬಿಲ್ಲವ ಸಂಘಟನೆಯವರು ಜನರ ಆಯಾಸ, ಬಾಯಾರಿಕೆ ತಣಿಸಲು ನೀರು, ಶರಬತ್ತು, ಪಾನೀಯಗಳನ್ನು ನೀಡಿ ಉತ್ತೇಜನ ನೀಡಿದರು. ಪಾದಯಾತ್ರೆಯು ಮುಂದೆ ಸುರತ್ಕಲ್ ತಲುಪಿದಾಗ ಮಧ್ಯಾಹ್ನ 1.15 ಗಂಟೆಯಾಯಿತು. ಸುರತ್ಕಲ್‌ನ ’ಗುರು ಚಾರಿಟೇಬಲ್ ಟ್ರಸ್ಟ್’ನ ಸದಸ್ಯರು ಭಾರೀ ಪ್ರೀತಿಯಿಂದ ಸ್ವಾಗತಿಸಿ ಜನರ ಆಯಾಸವನ್ನು ಪರಿಹರಿಸಲು ಪಾನೀಯಗಳನ್ನು ನೀಡಿ, ಸುಮಾರು 1000 ಜನರಿಗೆ ಗೋವಿಂದಾಸ್ ಕಾಲೇಜ್‌ನ ಆವರಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಿ, ಎಲ್ಲರೂ ಸಾವಕಾಶವಾಗಿ ಊಟವನ್ನು ಮಾಡುವಂತೆ ಸಹಕರಿಸಿ, ಹಸಿವನ್ನು ತಣಿಸಿದ ಇವರ ವ್ಯವಸ್ಥೆಯನ್ನು ಎಲ್ಲರೂ ಮೆಚ್ಚಲೇಬೇಕು. ಗುರು ಚಾರಿಟೇಬಲ್ ಟ್ರಸ್ಟ್‌ನವರು ಪ್ರತಿ ವರ್ಷ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಧನ ಸಹಾಯವನ್ನು ನೀಡುತ್ತಾ ಸಮಾಜ ಸೇವೆಯನ್ನು ಮಾಡುತ್ತಿರುವುದನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಮಧ್ಯಾಹ್ನದ ಊಟದ ನಂತರ 2 ಗಂಟೆಗೆ ಪಾದ ಯಾತ್ರೆಯು ಮತ್ತೆ ಮುಂದುವರಿಯಿತು. ಮುಂದೆ ಮುಂದೆ ಹೋದಂತೆ ಸಾಲಿಗೆ ಮತ್ತಷ್ಟು ಬಿಲ್ಲವ ಬಾಂಧವರು ಸೇರಿಕೊಂಡರು. ಪ್ರತೀ ಊರಿನ ಸಂಘಟನೆಗಳು ಆಯಾಸ ಪರಿಹರಿಸಲು ನೀರು, ಪಾನೀಯಗಳನ್ನು ನೀಡಿ ಉತ್ತೇಜನ ಕೊಡುತ್ತಾ ಇದ್ದರು. ಲೇಡಿಹಿಲ್‌ನಲ್ಲಿ ಉರ್ವ ಬಿಲ್ಲವ ಸಂಘದ ವರು ಅವಲಕ್ಕಿ ನೀಡಿದರು. ಕೂಳೂರಿನ ಬಿಲ್ಲವ ಸಂಘಟನೆಯ ವರು ಡೋಲು ಬಡಿಯುವ (ನಾಸಿಕ್ ಬ್ಯಾಂಡ್) ವ್ಯವಸ್ಥೆ ಮಾಡಿ ಆಯಾಸಗೊಂಡವರನ್ನು ಹುರಿದುಂಬಿಸಿದರು. ಮಾತ್ರವ ಲ್ಲದೆ ಆ ಬಳಿಕ ಯಾತ್ರೆಯುದ್ದಕ್ಕೂ ಭಾಗವಹಿಸಿ ಉತ್ತೇಜನ ನೀಡಿದರು. ಯಾತ್ರೆಯು ಸಾಗುತ್ತಾ ಸಂಜೆ 6 ಗಂಟೆಗೆ ಕುದ್ರೋಳಿ ದೇವಸ್ಥಾನ ತಲುಪಿತು. ಈ ಸಂದರ್ಭದಲ್ಲಿ ಜನಾರ್ದನ ಪೂಜಾರಿಯವರು ಸಾಗಿ ಬಂದ ಎಲ್ಲಾ ಬಾಂಧವರನ್ನು ಸ್ವಾಗತಿಸಿದರು. ಹಳದಿ ಧ್ವಜವನ್ನು ಪಡೆದುಕೊಂಡು ದೇವಸ್ಥಾನದ ಒಳಗೆ ಹೋಗಿ ದೇವರಿಗೆ ಪೂಜೆ ಮಾಡಿಸಿದರು. ಎಲ್ಲಾ ಜನರಿಗೆ ಫಲಾಹಾರದ ವ್ಯವಸ್ಥೆ ಮಾಡಿಸಿದರು. ಶತಧ್ವಜ ಪಾದಯಾತ್ರೆಯು ಇತಿಹಾಸದಲ್ಲಿ ದಾಖಲೆಯಾಯಿತು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!