ಸಿಂಚನ ವಿಶೇಷಾಂಕ-2013 : ಗುಣವತಿ ರಮೇಶ್

ಯುವಜನತೆಯ ಮೇಲೆ ಮಾಧ್ಯಮದ ಪ್ರಭಾವ

ಯಾವುದೇ ಒಂದು ವಿಷಯವನ್ನು ವ್ಯಷ್ಠಿಯಾಗಿ ಅಥವಾ ಸಮಷ್ಠಿಯಾಗಿ ಜನಮಾನಸಕ್ಕೆ ತಲುಪಿಸುವ ಸೇತುವೆಯೇ ಮಾಧ್ಯಮ. ಹಿಂದಣ ದಿನಗಳಲ್ಲಿ ಪುರಾಣ ಕತೆಗಳನ್ನೋ ಮಹಾಕಾವ್ಯಗಳನ್ನೋ ಜನರಿಗೆ ತಲುಪಿಸಲು ಗಮಕ, ಪ್ರವಚನ, ಹರಿಕಥೆ, ಯಕ್ಷಗಾನ, ಬಯಲು ನಾಟಕ ಇತ್ಯಾದಿ ಪ್ರಕಾರಗಳು ಮಾಧ್ಯಮವಾಗಿ ಬಳಕೆಯಾಗುತ್ತಿದ್ದರೆ, ಒಂದೂರಿಂದ ಇನ್ನೊಂದೂರಿಗೆ ಸುದ್ದಿಗಳು ತಲುಪಬೇಕಾದರೆ ಬಹು ನಿಧಾನವಾಗಿ, ಎಷ್ಟೋ ಕಾಲದ ತರುವಾಯ ಬಹು ವಿಳಂಬಿತ ವ್ಯವಸ್ಥೆಯಿತ್ತು. ಹಲವಾರು ಸುದ್ದಿಗಳು ಗತಕಾಲದ ಇತಿಹಾಸವಾದ ನಂತರ ಕೆಲವರಿಗೆ ತಲುಪುತಿತ್ತು.

ಬ್ರಿಟಿಷರ ಆಗಮನದ ತರುವಾಯ ನಮ್ಮ ದೇಶದಲ್ಲಿ ಅಂಚೆ ವ್ಯವಸ್ಥೆ ವ್ಯಾಪಕವಾಗಿ ಹರಡಿತು. ಹಿಂದೆ ಪುರಾಣ ಕಾಲದಲ್ಲಿಯೂ ಅಂಚೆ ವ್ಯವಸ್ಥೆ ರಾಜಾಧಿರಾಜರ ಕಾಲದಲ್ಲಿ ಅಸ್ತಿತ್ವದಲ್ಲಿತ್ತೆಂದು ಹಲವು ಉದಾಹರಣೆಗಳು ಸಿಗುತ್ತವೆ. ’ಅಂಚೆ’ ಅಂದರೆ ಹಂಸ ಎಂಬುದಾಗಿ ಅರ್ಥ. ಹಂಸದ ಕೊರಳಿಗೆ ತಾಳೆ ಓಲೆಯೋ ಅಥವಾ ಇನ್ನಿತರ ಸಂಜ್ಞೆಗಳನ್ನು ಕಟ್ಟಿ ಯಾರಲ್ಲಿಗೆ ತಲುಪಬೇಕೋ ಅಲ್ಲಿಗೆ ಕಳುಹಿಸುವ ತಂತ್ರವೂ ಕೂಡಾ ಚಾಲ್ತಿಯಲ್ಲಿತ್ತು. ಆದರೆ ಇವೆಲ್ಲವೂ ಬಹು ಸೀಮಿತವಾದ ಮಾಧ್ಯಮ ವ್ಯವಸ್ಥೆಯಾಗಿತ್ತು. ಯಾವಾಗ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆಗಳ ಗಾಳಿ ಬೀಸಿತೋ ಅಂದಿನಿಂದ ಅಂಚೆ ಕಛೇರಿಯ ಮೂಲಕ ಮಾಧ್ಯಮ ವ್ಯವಸ್ಥೆ ಅದ್ಭುತ ಕ್ರಾಂತಿಯನ್ನು ಕಾಣತೊಡಗಿತು.

ಆದರೂ ಕೂಡ ಅಂಚೆ ವ್ಯವಸ್ಥೆಯಲ್ಲಿ ಹಲವಾರು ನ್ಯೂನತೆಗಳು ಇದ್ದೇ ಇತ್ತು. ಮುಂದಕ್ಕೆ ಟೆಲಿಗ್ರಾಫ್ ನವ ತಂತ್ರಜ್ಞಾನದತ್ತ ಮಾಧ್ಯಮ ಮುನ್ನಡೆಯನ್ನು ಸಾಧಿಸಿತು. ಆದರೆ ಅದಕ್ಕೂ ಕೂಡಾ ಇತಿ-ಮಿತಿಗಳು ಇದ್ದುವು.

ಟೆಲಿಫೋನ್ ಸುಧಾರಣೆ ಕಂಡ ನಂತರ ಸಂಪರ್ಕ ಸಾಧನಗಳಲ್ಲಿ ಇನ್ನೇನೂ ಉಳಿದಿಲ್ಲ ಎನ್ನವ ಭಾವ ಜನರಲ್ಲಿ ಮೂಡಿದ್ದು ಅಸಹಜವಲ್ಲ.

ಇನ್ನೊಂದೆಡೆಯಲ್ಲಿ ಮುದ್ರಣ ವ್ಯವಸ್ಥೆಯ ಕೊಡುಗೆಯನ್ನೂ ಮರೆಯುವಂತಿಲ್ಲ. ಮುದ್ರಿತ ಪತ್ರಿಕೆಗಳು, ಸಂಪರ್ಕ ಸಾರಿಗೆ ವ್ಯವಸ್ಥೆಯ ಮೂಲಕ ಊರಿಂದೂರಿಗೆ ತಲುಪಿ, ಒಂದೂರಿನ ಸುದ್ದಿ ಇನ್ನೊಂದೂರಿಗೆ ಚಲಿಸತೊಡಗಿತು. ಮುಖ್ಯವಾಗಿ ಪತ್ರಿಕೆಗಳು ಜನರಲ್ಲಿ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ನವ ಸಮಾಜ ನಿರ್ಮಾಣದ, ಸಮಾಜ ಪರಿವರ್ತನಾ ಕೈಂಕರ್ಯಗಳಿಗೆ ಇಂಬು ಕೊಡತೊಡಗಿತು. ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನನಾಯಕರಿಂದ ಸಿಗುವ ಸಂದೇಶಗಳನ್ನು ಹೊತ್ತ ಪತ್ರಿಕೆಗಳು ದೇಶದಾದ್ಯಂತ ಸಂಚರಿಸಿ ಹೋರಾಟದ ಸ್ಪಷ್ಟ ರೂಪುರೇಶೆಯನ್ನು ಕಟ್ಟುವುದರ ಮುಖೇನ ಜನಮಾನಸದಲ್ಲಿ ನವಜಾಗ್ರತಿಯ ಹೊಸ ಹೊನಲನ್ನು ಹರಿಸಿದುದು ಉಲ್ಲೇಖನೀಯ.

ನಂತರ ಮಾಧ್ಯಮಗಳಲ್ಲಿ ನವಸಂಚಲನ ಮೂಡಿಸಿದ ದೃಶ್ಯ-ಶ್ರಾವ್ಯ ಮಾಧ್ಯಮ ಟೆಲಿವಿಶನ್. ಇತ್ತೀಚಿನ ಮೂವತ್ತು ವರ್ಷಗಳ ಹಿಂದಿನಿಂದ ಟೆಲಿವಿಶನ್ ಅದ್ಭುತವಾದ ಕ್ರಾಂತಿಕಾರಕ ಹೆಜ್ಜೆಗಳನ್ನಿರಿಸ ತೊಡಗಿತು. ಯಾವತ್ತು ಉಪಗ್ರಹಗಳ ಜಾಲಕ್ಕೆ ಈ ಟೆಲಿವಿಶನ್ ಹೊಂದಿಕೊಂಡಿತೋ ಅಂದಿನಿಂದ ಜಗತ್ತಿನ ಯಾವುದೇ ಮೂಲೆಯ ಸುದ್ದಿಗಳು ಕ್ಷಣಮಾತ್ರದಲ್ಲಿ ಬಿತ್ತರಗೊಂಡು ದೃಶ್ಯಗಳ ಮೂಲಕ ಜನರ ಕಣ್ಣಬಿಂಬವನ್ನು ಪ್ರವೇಶಿಸತೊಡಗಿತೋ, ಜಗತ್ತು ಅತ್ಯಂತ ಕಿರಿದಾಯಿತು. ಮಾಧ್ಯಮ ತನ್ನ ಕಬಂಧ ಬಾಹುಗಳಲ್ಲಿ ಇಡೀ ಜಗತ್ತನ್ನು ಸುತ್ತುವರಿದು ಜನರಿಗೆ ನೇರಾನೇರ ಸಂಬಂಧದ ನವಬೆಸುಗೆಯನ್ನು ಬೆಸೆಯತೊಡಗಿತು. ದೂರದ ಅಮೇರಿಕಾದಲ್ಲಿ ನಡೆದ WTO ಮೇಲಿನ ಧಾಳಿಯಾಗಲೀ, ಕಾಶ್ಮೀರದಲ್ಲಿ ಉಗ್ರರ ಜೊತೆಗಿನ ಕಾರ್ಯಾಚರಣೆಯಾಗಲೀ ಅಥವಾ ಇತ್ತೀಚೆಗೆ ಉತ್ತರಾಂಚಲದಲ್ಲಿ ಮುನಿದ ಪ್ರಕೃತಿಯ ಆಟಾಟೋಪವನ್ನು ನಮ್ಮ ಮನೆಯೊಳಗೆ ಕುಳಿತು ನೋಡುವ ಪರಿಯನ್ನು ಕಲ್ಪಿಸಿದ ಟಿ.ವಿಯ ಅನೇಕ ಚಾನೆಲ್‌ಗಳು ಭ್ರಷ್ಟಾಚಾರದ ವಿರುದ್ಧ ನಡೆಸಿದ ಕುಟುಕು ಕಾರ್ಯಾಚರಣೆಯಾಗಲೀ, ಪ್ರಪಂಚದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಕ್ರೀಡೆಗಳ ನೇರ ಪ್ರಸಾರ, ರಾಜಕೀಯ ವಿಶ್ಲೇಷಣೆ, ಅನೇಕ ವಿದ್ಯಮಾನಗಳ ನೈಜ ಚಿತ್ರಣ, ಆಕಾಶ ಕಾಯಗಳ ಬಗ್ಗೆ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ, ಜಲಚರ ಜೀವಿಗಳ ಜೀವ ವೈವಿಧ್ಯ, ಬದುಕಿನ ಕ್ರಮಗಳ ಬಗ್ಗೆ ತಿಳಿಸಿ ಕೊಡುವ ಒಂದು ಅದ್ಭುತ ಪೆಟ್ಟಿಯಾಗಿರುವ ಟಿ.ವಿ. ಒಂದು ವಿಧದಲ್ಲಿ ಆಧುನಿಕ ವರದಾನವೆನ್ನದೆ ವಿಧಿಯಿಲ್ಲ.

ಇನ್ನೊಂದು ಕಡೆ ಇಂದಿನ ಯುವ ಜನಾಂಗ ಈ ವರದಾನಗಳ ಜೊತೆಜೊತೆಯಲ್ಲೇ ಒಂದಷ್ಟು ನೇತ್ಯಾತ್ಮಕವಾದ ಭಾವದಿಂದ ನರಳುವುದನ್ನು ಕೂಡಾ ದುರ್ವಿಧಿ ಎನ್ನದೆ ವಿಧಿಯಿಲ್ಲ.

ಹಲವು ಪತ್ರಿಕೆಗಳು ಕೂಡಾ ಎಗ್ಗಿಲ್ಲದಂತೆ ಹಿಂಸೆಯನ್ನು ವೈಭವೀಕರಿಸುವ ಜಾಯಮಾನವನ್ನು ಬೆಳೆಸಿದ ಪರಿಯನ್ನು ಕಂಡರೆ ಇದನ್ನೋದುವ ಜನರ ಮನಸಿನ ಮೇಲೆ ಅದೆಂತಹ ಕ್ರೌರ್ಯಭಾವ ಮೂಡೀತು ಅನ್ನುವುದನ್ನು ಊಹಿಸುವುದೂ ಅಸಾಧ್ಯ.

ದೂರದರ್ಶನಗಳು ಕೂಡಾ ಪ್ರಸಾರಿಸುವ ಅನೇಕ ಧಾರಾವಾಹಿಗಳು, ಹಿಂಸಾಚಾರದ ದೃಶ್ಯ, ಮಹಿಳೆಯರ ಮೇಲೆ ನಡೆದ ಅತ್ಯಾಚಾರವಾಗಲಿ, ಕೋಮು ಗಲಭೆಗಳಾಗಲೀ, ನೋಡುವ ನೋಟಕನ ಮನದಲ್ಲಿ ಎಲ್ಲೋ ಒಂದು ಕಡೆ ಖಂಡಿತಾ ದುಷ್ಪರಿಣಾಮ ಮೂಡಿಸುವುದರಲ್ಲಿ ಸಂದೇಹವಿಲ್ಲ. ಬಾರಿಬಾರಿಗೂ ಅದನ್ನು ಮರು ಪ್ರಸಾರಿಸುತ್ತಾ ತಮ್ಮ ಖಿಖP ಹೆಚ್ಚಿಸಿಕೊಳ್ಳುವ ಅನೇಕ ಚಾನೆಲ್‌ಗಳು ಕೂಡಾ ಇವೆ.

ಟಿ.ವಿ.ಯ ಪ್ರಭಾವದಿಂದ ಓದುವ ಹವ್ಯಾಸವಂತೂ ಗಣನೀಯವಾಗಿ ಕಡಿಮೆಯಾಗಿ ಹೋಗಿದೆ. ಮನೆಯಲ್ಲಿ ಕುಳಿತವರೂ ಟಿ.ವಿ. ನೋಡುವುದು, ಬಂದವರೂ ಟಿ.ವಿ. ನೋಡುವುದು. ಇಂತರಹ ಪ್ರಕ್ರಿಯೆಗಳಿಂದ ಮಾನವ ಮಾನವ ಸಂಬಂಧದ ಕೊಂಡಿ ಕಳಚಿಕೊಂಡಿದೆ. ಹಲವರಂತೂ ಸಮಾಜಕ್ಕೆ ತೆರೆದುಕೊಳ್ಳದೆ ತಾನಾಯಿತು, ತನ್ನ ಮನೆಯಾಯಿತು ಅನ್ನುವ ತೆರದಲ್ಲಿ ಸ್ವಾರ್ಥ ಸರದಾರರಾಗಿರುವುದು ಸಮಾಜದ ಹಿತದೃಷ್ಟಿಯಲ್ಲಿ ಬಹು ಮಾರಕವಾದದ್ದು.

ಈ ರೀತಿಯಾಗಿಯೇ ಮುಂದುವರಿಯುತ್ತಾ ಹೋದಲ್ಲಿ ಒಂದಾನೊಂದು ದಿನ ನಮ್ಮ ಸುತ್ತಮುತ್ತಲ ಪರಿಸರವೇ ನಮಗೆ ಅಪರಿಚಿತವಾಗಿ ಹೋಗಿ ಜೀವಚ್ಛವಗಳಂತೆ ಬದುಕು ಮಾಡುವ ದೀನ ಪರಿಸ್ಥಿತಿ ಖಂಡಿತಾ ಬಂದೊದಗಬಹುದು.

ಜೀವಂತ ಕಲೆಗಳಾದ ನಾಟಕ, ಸಂಗೀತ, ನೃತ್ಯ, ಯಕ್ಷಗಾನ ಇವೆಲ್ಲಾ ಅವನತಿಗೆ ಸಂದು ಸಾಂಸ್ಕೃತಿಕ ಕೇಡುಗಾಲ ಬರುವ ಸಮಯ ಬಹುದೂರವಿಲ್ಲ.

ಅದರಲ್ಲೂ ದೂರದರ್ಶನವನ್ನು ಕುಲದೇವರೆಂದು ನಂಬಿದ ಗೃಹಿಣಿಯರ ಪಾಡಂತೂ ಹೇಳತೀರದು. ಒಂದು ಬೆಳಿಗ್ಗೆ ಟಿ.ವಿ. ಚಾಲಿತಗೊಂಡರೆ ಸರಿಸುಮಾರು ತಡರಾತ್ರಿವರೆವಿಗೂ ಅದರಿದಿರು ಕುಳಿತುಕೊಳ್ಳುವ ಹಲಮಂದಿ ಸಹೋದರಿಯರು ಕಣ್‌ದೃಷ್ಠಿಯೊಂದಿಗೆ ಮಾನಸಿಕ ಕುರುಡುತನಕ್ಕೂ ಬಲಿಯಾಗಿರುವುದು ನಮ್ಮ ದುರಂತ.

ನಿತ್ಯದೂಟಕ್ಕೂ, ತಿಂಡಿಗೂ ವ್ಯಂಜನವಾಗಿ ಮುಂದುಗಡೆ ದೂರದರ್ಶನ ಬೇಕೇಬೇಕು. ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ಸಹಜ. ಮಕ್ಕಳು ಕೂಡಾ ಓದುವ ಅಮೂಲ್ಯ ಸಮಯವನ್ನು ಟಿ.ವಿ. ವೀಕ್ಷಣೆಗೆ ತೊಡಗಿಸಿ ತಮ್ಮ ಭವಿಷ್ಯದ ಮೇಲೆ ಬರೆ ಎಳೆದುಕೊಂಡಿರುವುದು ಕೂಡ ಹಿತವಲ್ಲ. ಒಟ್ಟಿನಲ್ಲಿ ಮಾಧ್ಯಮಗಳು ಎಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲವೋ ಅಷ್ಟೇ ಪ್ರತಿಕೂಲವಾಗಿಯೂ ವರ್ತಿಸಬಲ್ಲವು. ಅದು ನಾವು ಬಳಸುವ ರೀತಿಯಿಂದ ಅಥವಾ ಸ್ವೀಕರಿಸುವುದಕ್ಕನುಗುಣವಾಗಿ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!