ಯುವವಾಹಿನಿ (ರಿ) ಪಡುಬಿದ್ರೆ ಘಟಕ

ಯುವಕರನ್ನು ಒಗ್ಗೂಡಿಸುವ ಕಾರ್ಯ ಯುವವಾಹಿನಿಯಿಂದ ಮಾತ್ರ ಸಾಧ್ಯ :- ಸುಧೀರ್ ಕುಮಾರ್

ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಪದಗ್ರಹಣ ಸಮಾರಂಭ ಉದ್ಘಾಟಿಸುತ್ತಿರುವುದು

ಕ್ರ್ರೀಯಾಶೀಲ ಯುವಕರ ತಂಡ ಪಡುಬಿದ್ರೆ ಯುವವಾಹಿನಿಯು ಈ ಪರಿಸರದಲ್ಲಿ ನಿರಂತರ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ.
ಯುವಕರನ್ನು ಒಗ್ಗೂಡಿಸುವ ಕಾರ್ಯ ಅದು ಯುವವಾಹಿನಿಯಿಂದ ಮಾತ್ರ ಸಾಧ್ಯ ಎಂದು ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ತಿಳಿಸಿದರು.
ಅವರು ದಿನಾಂಕ 18.06.2017 ರಂದು ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಯುವವಾಹಿನಿ (ರಿ) ಪಡುಬಿದ್ರೆ ಘಟಕದ 2017-18 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಪಡುಬಿದ್ರೆ ಘಟಕದ ಮಾಜಿ ಅಧ್ಯಕ್ಷರಾದ ಸುಜಿತ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವವಾಹಿನಿ ಪಡುಬಿದ್ರೆ ಘಟಕದ ಕಾರ್ಯದರ್ಶಿ ಕುಮಾರಿ ಯಶೋಧ 2016-17 ನೇ ಸಾಲಿನ ಕಾರ್ಯಕ್ರಮಗಳ ವಾರ್ಷಿಕ ವರದಿ ಮಂಡಿಸಿದರು.

ಪ್ರತಿಭಾ ಪುರಸ್ಕಾರ: SSLC ಹಾಗೂ PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಧಿಗಳನ್ನು ಗುರುತಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ
SSLC ಹಾಗೂ PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಈ ಕೆಳಗಿನ ವಿದ್ಯಾರ್ಧಿಗಳನ್ನು ಗುರುತಿಸಿ  ಗೌರವಿಸಲಾಯಿತು.
ಶಿವಾನಿ : SSLC -98%
ಅನ್ವಿತಾ ಎಚ್.ಕೋಟ್ಯಾನ್ ; SSLC -95%
ಶ್ರಾವ್ಯ : SSLC -93%
ಎಮ್.ಭವಿಷ್ ಸಾಲ್ಯಾನ್ : SSLC – 91.68%
ನವ್ಯಶ್ರೀ : SSLC -88.32%
ಸುಶ್ಮಿತಾ ಪೂಜಾರಿ : SSLC-85.76%
ನಿಧಿ : PUC -91.66%
ತೃಪ್ತಿ : PUC 91%
ನಿಖಿಲ್ : PUC88.33%
ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ನೀಡಿ ಪ್ರೊತ್ಸಾಹಿಸಲಾಯಿತು.
ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ಮಹಿಳೆಯರಿಗೆ ನೀಡುತ್ತಿರುವ ಆದ್ಯತೆ ಇವೆರಡೂ ಪಡುಬಿದ್ರೆ ಯುವವಾಹಿನಿಯ ಸಾಧನೆಯ ಹಿಂದಿರುವ ಶಕ್ತಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ ಅಭಿಪ್ರಾಯ ಪಟ್ಟರು.
ಯುವವಾಹಿನಿ ಪಡುಬಿದ್ರೆ ಘಟಕದ ಮಾಜಿ ಅಧ್ಯಕ್ಷ ಪ್ರಸಾದ್ ವೈ ಕೋಟ್ಯಾನ್ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.
ಯುವವಾಹಿನಿ ಪಡುಬಿದ್ರೆ ಘಟಕವು ಪ್ರತಿಷ್ಟಿತ ಘಟಕವಾಗಿ ಹೊರಹೊಮ್ಮಿದೆ.
ಅನೇಕ ಪ್ರಬುದ್ದ ಕ್ರಿಯಾಶೀಲ ನಾಯಕರ ಶ್ರಮ ಇದರಲ್ಲಿ ಅಡಗಿದೆ ಎಂದು ಪ್ರತಿಜ್ಷಾ ವಿಧಿ ಬೋಧಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ತಿಳಿಸಿದರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕಿಶೋರ್. ಕೆ.ಬಿಜೈ ಹಾಗೂ ಪಡುಬಿದ್ರೆ ಬಿಲ್ಲವ ಮಹಿಳಾ ಮಂಡಳಿಯ ಅದ್ಯಕ್ಷೆ ಸರೋಜಿನಿ ಸಿ.ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಕೆ ಮಾಡಿದರು.
ಯುವವಾಹಿನಿ ಪಡುಬಿದ್ರೆ ಘಟಕದ ಅಧ್ಯಕ್ಷ ವಿರೇಂದ್ರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂತೋಷ್ ಕುಮಾರ್ ಎಲ್ಲರ ಸಲಹೆ ಸೂಚನೆ ಮಾರ್ಗದರ್ಶನ ದಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು. ಮಾಜಿ ಅಧ್ಯಕ್ಷರಾದ ಅಶೋಕ್ ಪೂಜಾರಿ
ಸ್ವಾಗತಿಸಿದರು.ಶ್ರೀಮತಿ ಚೈತ್ರಾ ಧನ್ಯವಾದ ನೀಡಿದರು.ಸುಜಾತ ಪಿ.ಕೋಟ್ಯಾನ್ ಹಾಗೂ ನಿಶ್ಮಿತಾ ಪಿ. ಎಚ್  ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಜ್ಷಾ ವಿಧಿ ಬೋಧಿಸುತ್ತಿರುವ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ

Leave a Reply

Your email address will not be published. Required fields are marked *

error: Content is protected !!