ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಮಂದಿರದ 16ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಅತಿಕಾಯ ಕಾಳಗ ತಾಳಮದ್ದಲೆ ಕಾರ್ಯಕ್ರಮವು ದಿನಾಂಕ 26/03/ 2022 ರಂದು ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಸಭಾಭವನ ಪುತ್ತೂರು ಇಲ್ಲಿ ನಡೆಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ಬಾಬು ಪೂಜಾರಿ ಇದ್ಪಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ(ರಿ.) ಪುತ್ತೂರು ಘಟಕದ ಅಧ್ಯಕ್ಷ ಅನುಪ್ ಕುಮಾರ್ ಎಸ್ ತಾಳಮದ್ದಲೆಯ ಕಲಾವಿದರನ್ನು ಶಾಲು ಹಾಕಿ ಗೌರವಿಸಿದರು.