ಯುವವಾಹಿನಿ (ರಿ) ಮೂಲ್ಕಿ ಘಟಕ

ಮೂಲ್ಕಿ ಯುವವಾಹಿನಿಯ ಪದಗ್ರಹಣ,ಪ್ರತಿಭಾ ಪುರಸ್ಕಾರ

 

ಯುವವಾಹಿನಿಯು ತನ್ಬದೇ ಆದ ಘನತೆ ಗೌರವವನ್ನು ಉಳಸಿಕೊಂಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತಾನು ಪ್ರಶಸ್ತಿ ಗಳಿಸಿದಾಗ ಪ್ರಪ್ರಥಮವಾಗಿ ಮೂಲ್ಕಿಯ ಇದೇ ವೇದಿಕೆಯಲ್ಲಿ ತನ್ನನ್ನು ಅಭಿನಂದಿಸಿದ ಮೂಲ್ಕಿ ಯುವವಾಹಿನಿಗೆ ಮಂಗಳೂರು ಮಹಾನಗರ ಪಾಲಿಕಾ ಮೇಯರ್ ಶ್ರೀಮತಿ ಕವಿತಾ ಸನಿಲ್ ಕೃತಜ್ಞತೆ ತಿಳಿಸಿದರು

ಅವರುಅವರು ದಿನಾಂಕ 14.06.2017 ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಯುವವಾಹಿನಿ ಮೂಲ್ಕಿ ಘಟಕದ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮೂಲ್ಕಿ ಯುವವಾಹಿನಿಯ ಮಾಜಿ ಅಧ್ಯಕ್ಷರಾದ ಮೋಹನ್ ಸುವರ್ಣ 2017-18,ನೇ ಸಾಲಿನ ಪದಾಧಿಕಾರಿಗಳ ಆಯ್ಕೆ
ಪ್ರಕಟಿಸಿದರು.
ನಿರ್ಗಮನ ಅಧ್ಯಕ್ಷ ಚೇತನ್ ಕುಮಾರ್ ಸಹಕಾರ ನೀಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಚೇತನ್ ಕುಮಾರ್ ನೂತನ ಅಧ್ಯಕ್ಷೆ ಶ್ರೀಮತಿ ರಕ್ಷಿತಾ ಯೋಗೀಶ್ ಕೋಟ್ಯಾನ್ ಇವರಿಗೆ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರ ಮಾಡಿದರು.
ಮೂಲ್ಕಿ ಯುವವಾಹಿನಿಯ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ರಕ್ಷಿತಾ ಕೋಟ್ಯಾನ್ ಮಾತನಾಡಿ ಎಲ್ಲಾ ಮಾಜಿ ಅದ್ಯಕ್ಷರ ಸಲಹೆ ಸೂಚನೆ ಮಾರ್ಗದರ್ಶನ ಪಡೆದು ಮೂಲ್ಕಿ ಯುವವಾಹಿನಿಯನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ತಿಳಿಸಿದರು.
ನೂತನ ಏಳು ಸದಸ್ಯರನ್ನು ಕೇಂದ್ರ ಸಮಿತಿಯ ಅದ್ಯಕ್ಷರು ಹೂ ನೀಡಿ ಸ್ವಾಗತಿಸಿದರು.
ಕಳದ 14 ವರ್ಷಗಳಿಂದ ಮೂಲ್ಕಿ ಯುವವಾಹಿನಿಯು ಅನನ್ಯ ಸಾದನೆ ಮಾಡಿದೆ.ತುಳುನಾಡ ವೈಭವದ ಮೂಲಕ ದೇಶ ವಿದೇಶಗಳಲ್ಲಿ ಯುವವಾಹಿನಿಯ ಹೆಸರನ್ನು ಪಸರಿಸಿದ ಮೂಲ್ಕಿ ಯುವವಾಹಿನಿಯ ಸಾಧನೆ ಶ್ಲಾಘನೀಯ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಗೋಪಿನಾಥ ಪಡಂಗ ತಿಳಿಸಿದರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಮೂಲ್ಕಿ ಯುವವಾಹಿನಿ ಯ ಸಲಹೆಗಾರರಾದ ಕೆ.ವಿಶ್ವನಾಥ್ ಶುಭ ಹಾರೈಕೆ ಮಾಡಿದರು.SSLC ಹಾಗೂ PUC ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಕಾರ್ಯದರ್ಶಿ ಸತೀಶ್ ಕಿಲ್ಪಾಡಿ 2016-17 ನೇ ಸಾಲಿನ ವಾರ್ಷಿಕ
ವರದಿ ಸಭೆಯ ಮುಂದಿಟ್ಟರು.
ಮೂಲ್ಕಿ ಯುವವಾಹಿನಿಯ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಪ್ರಸ್ತಾವನೆ ಮಾಡಿದರು.ಚೇತನ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಕುಲ್ಪಾಡಿ ಧನ್ಯವಾದ ನೀಡಿದರು. ಉದಯ ಅಮೀನ್ ಮಟ್ಟು ಹಾಗೂ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

2 thoughts on “ಮೂಲ್ಕಿ ಯುವವಾಹಿನಿಯ ಪದಗ್ರಹಣ,ಪ್ರತಿಭಾ ಪುರಸ್ಕಾರ

Leave a Reply

Your email address will not be published. Required fields are marked *

error: Content is protected !!