ಮೂಲ್ಕಿ: ಯುವವಾಹಿನಿ(ರಿ.) ಮೂಲ್ಕಿ ಘಟಕದ 2024-25 ರ ಸಾಲಿನ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ 14-06-2024 ರಂದು ಮೂಲ್ಕಿ ಬಿಲ್ಲವ ಸಂಘದಲ್ಲಿ ಜರಗಿತು.
ಮೂಲ್ಕಿ ಯುವವಾಹಿನಿ(ರಿ.) ಘಟಕದ ನೂತನ ಅಧ್ಯಕ್ಷರು ರಿತೇಶ್ ಅಂಚನ್ ಅವರ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ, ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಮೂಲ್ಕಿ ಘಟಕವು ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ಒತ್ತು ನೀಡುತ್ತಿರುವುದು ಶ್ಲಾಘನಿಯ ಎಂದು ಪದಗ್ರಹಣದಲ್ಲಿ ಮಾತನಾಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರು ಡಾ. ಹರಿಶ್ಚಂದ್ರ. ಪಿ. ಸಾಲ್ಯಾನ್, ಬಿರುವೆರ ಕುಡ್ಲ (ರಿ) ಮೂಲ್ಕಿ ಘಟಕದ ಅಧ್ಯಕ್ಷ ಕಿಶೋರ್. ಜೆ . ಸಾಲ್ಯಾನ್ ಬಪ್ಪನಾಡು,
ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷರು ಪ್ರಕಾಶ್ ಸುವರ್ಣ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್ ಹಾಗೂ ಘಟಕದ ಕಾರ್ಯದರ್ಶಿ ವಿನಯ ವಿಶ್ವನಾಥ್ ಉಪಸ್ಥಿತರಿದ್ದರು.
ಘಟಕಧ್ಯಕ್ಷ ಮಾಧವ ಪೂಜಾರಿ ಕಿಲ್ಪಾಡಿ ಕಾರ್ಯಕ್ರಮದದ ಅಧ್ಯಕ್ಷತೆ ವಹಿಸಿದ್ದರು. ನಿಕಟ ಪೂರ್ವಧ್ಯಕ್ಷೆ ಭಾರತಿ ಭಾಸ್ಕರ್ ನೂತನ ಕಾರ್ಯಕಾರಿ ಸಮಿತಿಯನ್ನು ಪರಿಚಯಿಸಿದರು. ನೂತನ ಅಧ್ಯಕ್ಷರು ರಿತೇಶ್ ಮಾತನಾಡಿ ಈವರೆಗಿನ ಅಧ್ಯಕ್ಷರುಗಳಿಗೆ ನೀಡಿದ ಸಹಕಾರ ಮುಂದೆಯೂ ನೀಡಿ ಎಂದು ಎಲ್ಲರ ಸಹಕಾರ ಯಾಚಿಸಿದರು.
ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್ .ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಾಜಿ ಅಧ್ಯಕ್ಷರು ಯೋಗೀಶ್ ಕೋಟ್ಯಾನ್ ರವರ ಪ್ರಾಯೋಜಕತ್ವದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕರಾದ ಡಾ. ಹರೀಶ್ಚಂದ್ರ ಪಿ. ಸಾಲ್ಯಾನ್ ರನ್ನು ಅವರ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಕಾರ್ಯವನ್ನು ಗುರುತಿಸಿ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆ ಸಂಚಾಲಕರಾಗಿ ಆಯ್ಕೆ ಗೊಂಡ ಘಟಕದ ಮಾಜಿ ಅಧ್ಯಕ್ಷರು ಹರಿಂದ್ರ ಸುವರ್ಣ ರನ್ನು ಗೌರವಿಸಲಾಯಿತು.
ಅಧ್ಯಕ್ಷರಾದ ಮಾಧವ ಪೂಜಾರಿಯವರಿಗೆ ಮಾಜಿ ಅಧ್ಯಕ್ಷರು ಸೇರಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಮಾಧವ ಪೂಜಾರಿಯವರು ತಮ್ಮ ಒಂದು ವರ್ಷದ ಅಧ್ಯಕ್ಷ ಅವಧಿಯಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ತಿಳಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕೇಂದ್ರ ಸಮಿತಿ ಪ್ರದಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಘಟಕದ ಅಧ್ಯಕ್ಷರ ನೂತನ ತಂಡಕ್ಕೆ ಶುಭ ಹಾರೈಸಿದರು
ಪ್ರೇರಣಾ ಪ್ರಾರ್ಥನೆಗೈದರು, ಅಧ್ಯಕ್ಷರು ಮಾಧವ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ವಿನಯ ವಿಶ್ವನಾಥ್ ವಾರ್ಷಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷರು ಉದಯ್ ಅಮೀನ್ ಮಟ್ಟು ನಿರೂಪಣೆಗೈದರು. ನೂತನ ಕಾರ್ಯದರ್ಶಿ ಲತೀಶ್ ಕಾರ್ನಾಡ್ ಧನ್ಯವಾದ ಸಲ್ಲಿಸಿದರು.