ಯುವವಾಹಿನಿ(ರಿ) ಕೇಂದ್ರ ಸಮಿತಿ,ಮಂಗಳೂರು

ಮುದ್ದು ಮೂಡು ಬೆಳ್ಳೆ ಇವರಿಗೆ ವಿಶುಕುಮಾರ್ ಪ್ರಶಸ್ತಿ-2014

ಮುದ್ದು ಮೂಡು ಬೆಳ್ಳೆ ವಿಶುಕುಮಾರ್ ಪ್ರಶಸ್ತಿ -2014 ಪುರಸ್ಕ್ರತರು

1968 ರಲ್ಲಿ ತನ್ನ ಪ್ರಥಮ ಕಥೆ ಮತ್ತು ಕವನವನ್ನು ಪ್ರಕಟಿಸಿದ್ದ ಬಹುಭಾಷಾ ಕಥೆಗಾರ, ಕವಿ, ಗಾಯಕ, ನಟ, ನಿರ್ದೇಶಕ ಜಾನಪದ ಇತಿಹಾಸಕಾರ, ಅಧ್ಯಯನಕಾರ, ವಿಮರ್ಶಕ ಮುದ್ದು ಮೂಡುಬೆಳ್ಳೆ ಕಳೆದ 45 ವರುಷದಿಂದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆಯನ್ನು ಮಾಡುತ್ತಾ ಬರುತ್ತಿದ್ದಾರೆ.
ನಾಡು ನುಡಿಯಿದೊಂದು ಬಗೆ, ಕಾಂತಬಾರೆ-ಬುಧಬಾರೆ, ತುಳುನಾಡಿನ ಜಾನಪದ ವಾದ್ಯಗಳು, ತುಳು ರಂಗಭೂಮಿ ಮುಂತಾದವುಗಳು ಮುದ್ದು ಮೂಡುಬೆಳ್ಳೆ ಅವರ ಪ್ರಮುಖ ಅಧ್ಯಯನ ಕೃತಿಗಳು. ಕನ್ನಡ ಮಾತ್ರವಲ್ಲದೆ ತುಳು, ಕೊಂಕಣಿ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಕೃತಿ ರಚನೆಯನ್ನು ಮಾಡಿರುವ ಶ್ರೀಯುತರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದಾರೆ.
1953 ನೇ ಮೇ 7 ರಂದು ಜನಿಸಿರುವ ಮುದ್ದು ಮೂಡುಬೆಳ್ಳೆ ಮೂಲತಃ ಉಡುಪಿ ತಾಲೂಕಿನ ಮೂಡುಬೆಳ್ಳೆಯವರಾದರೂ ಪ್ರಸ್ತುತ ಮಂಗಳೂರು ನಿವಾಸಿ. ಕನ್ನಡ ಮತ್ತು ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದವರು ಕೊಂಕಣಿ ಭಾಷೆಯಲ್ಲಿ ಸ್ನಾತಕೋತರ ಡಿಪ್ಲೊಮಾ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದವರು. 1976 ರಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇವಾ ವೃತ್ತಿಯನ್ನು ಆರಂಭಿಸಿದ ಶ್ರೀಯುತರು 1985ರವರೆಗೆ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿದ್ದರು. ತದನಂತರದ ದಿನದಲ್ಲಿ ಮಂಗಳೂರು ಆಕಾಶವಾಣಿಗೆ ಸೇರ್ಪಡೆಗೊಂಡು ಅಲ್ಲಿ ಹಿರಿಯ ಕಾರ್ಯಕ್ರಮ ಉದ್ಘೋಷಕರಾಗಿ ಸೇವೆ ಸಲ್ಲಿಸಿ ಇತ್ತಿಚೆಗಷ್ಟೇ ನಿವೃತ್ತಿಯನ್ನು ಪಡೆದುಕೊಂಡರು.


1976-96 ರ ನಡುವೆ ಮಾಸ್ತಿ ಕಥಾ ಪುರಸ್ಕಾರ ಸೇರಿದಂತೆ 9 ಬಾರಿ ತನ್ನ ಕಥೆಗಳಿಗೆ ಬಹುಮಾನವನ್ನು ಪಡೆದುಕೊಂಡಿದ್ದಾರೆ. 1978 ರಲ್ಲಿ ಚೇತನಾ ಸಾಹಿತ್ಯೋತ್ಸವ ಕಾವ್ಯ ಪ್ರಶಸ್ತಿ, 2004 ರಲ್ಲಿ ಗೋರೂರು ಪ್ರಶಸ್ತಿ, 1994 ರಲ್ಲಿ ಒಸಯೋ ತುಳು ಕಥಾ ಸಂಕಲನ, 1999 ರಲ್ಲಿ ಪೂವರಿ ಜಾನಪದ ಕೃತಿ, 2009 ರಲ್ಲಿ ಕನ್ನೆಗ ತುಳು ಕವನ ಸಂಕಲನ ಇವೆಲ್ಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಸಿವೆ. 2004 ರಲ್ಲಿ ಸತ್ಯದ ಸುರಿಯ ಸಾಯದ ಪಗರಿ ತುಳು ಕಾದಂಬರಿಗೆ ಪಣಿಯಾಡಿ ಪ್ರಶಸ್ತಿಯೂ ಲಭಿಸಿದೆ. ಇದಲ್ಲದೆ 2012 ರಲ್ಲಿ ಕಾಂತಾಬಾರೆ -ಬೂದಬಾರೆ ಜಾನಪದ ಅಧ್ಯಯನ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿಯನ್ನೂ ಪಡೆದಿರುವರು. 2009ರಲ್ಲಿ ಆಕಾಶವಾಣಿಯ ರಾಜ್ಯ ಮಟ್ಟದ ಪ್ರಶಸ್ತಿ, 2012ರಲ್ಲಿ ಆಕಾಶವಾಣಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತರು. ಇವರ ಮೂರು ಕೃತಿಗಳು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಗೆ ಪಠ್ಯವಾಗಿದೆ, ಆತ್ಮಶಕ್ತಿಯ ತ್ರೈ ಮಾಸಿಕದ ಉಪ ಸಂಪಾದಕ, ಕೋಟಿ ಚೆನ್ನಯ ಪಾಡ್ದನ ಸಂಪುಟದ ಸಂಪಾದಕೀಯ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ 2009 ರಿಂದ ಬಿಲ್ಲವರ ಗುತ್ತು/ಗುರಿಕಾರ ಮನೆತನಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ತಂಡದ ಸದಸ್ಯರೂ ಆಗಿ ಜಾನಪದ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ತನ್ನ ಹನ್ನೆರಡನೇ ವರುಷದಲ್ಲೇ ಬರವಣಿಗೆಯತ್ತ ಆಕರ್ಷಿತರಾದ ಶ್ರೀಯುತರು ಕಥೆ, ಕವನ, ನಾಟಕ, ಸಂಶೋಧನೆಗೆ ಸಂಬಂಧಿಸಿ ಈವರೆಗೆ 30 ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಚೆರಾನ್ ರಹಸ್ಯ ಪತ್ತೆದಾರಿ ಕಾದಂಬರಿ, ನಮನ ಕವನ ಸಂಕಲನ, ಓದುತ್ತೀರಾ ನನ್ನ ಕಥೆ, ಮೆಟ್ಟಿಲುಗಳು, ಗೂಢ ಮತ್ತು ಇತರ ಕಥೆಗಳು, ಸುಖ ದ್ವನಿ, ಮೂಡುಬೆಳ್ಳೆ ಕಥೆಗಳು ಇವೆಲ್ಲ ಕಥಾ ಸಂಕಲನಗಳು, ಇದಲ್ಲದೆ ಉದಿಪು, ಒಸಯೋ ತುಳು ಕೃತಿಗಳು ವಿ.ವಿ ಪಠ್ಯವಾಗಿದೆ, ನೇತಾಜಿ ಸುಭಾಷ್ ಚಂದ್ರ ಬೋಸ್, ವ್ಯಕ್ತಿ ಪರಿಚಯ, ಜಾನಪದ ಇನೆ ರೂಪಕೊಲು, ನಮ ಎಡ್ಡೆನಾ ಊರೆಡ್ಡೆ ನಾಟಕ, ಕಾಂತಾಬಾರೆ ಬೂದಬಾರೆ ಸಂಶೋಧನಾ ಕೃತಿ, ಪೂವರಿ ಅಧ್ಯಯನ ಲೇಖನ, ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ.
ಮೊಗವೀರ ಪತ್ರಿಕೆಯ ಅತ್ಯತ್ತಮ ಲೇಖಕ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಗೋರೂರು ಸಾಹಿತ್ಯ ಪುರಸ್ಕಾರ, ಭಾರತೀಯ ಜೇಸಿಸ್ ಪ್ರಶಸ್ತಿ, ಏಷ್ಯಾ- ಫೆಸಿಫಿಕ್ ಅಂತರಾಷ್ಟ್ರೀಯ ಪ್ರತಿಭಾಶಾಲಿಗಳ ದಾಖಲೆ ಸೇರ್ಪಡೆ, ಕರ್ನಾಟಕ ಜಾನಪದ ಆಟ ಕೂಟ ಪ್ರಶಸ್ತಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ, ಪುನರೂರು ಸಂಶೋಧನಾ ಪ್ರಶಸ್ತಿ, ಅಖಿಲ ಕರ್ನಾಟಕ ಬಾನುಲಿ ನಾಟಕ ನಿರ್ಮಾಣ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ದತ್ತಿ ನಿಧಿ ಪ್ರಶಸ್ತಿ ಇವೆಲ್ಲ ಇವರ ಸಾಧನಗೆ ಸಂದ ಗೌರವಗಳಾಗಿವೆ.
ಸಾಹಿತ್ಯಕ್ಕೆ ಇವರ ಅನನ್ಯ ಸೇವೆಯನ್ನು ಗುರುತಿಸಿ ಹರೀಶ್ ನಿಂಜೂರು ಅವರು 2012 ರಲ್ಲಿ ಮೈಸೂರಿನ ಭಾಷಾ ಸಂಸ್ಥೆಗಾಗಿ `ಮುದ್ದು ಮೂಡುಬೆಳ್ಳೆ ತುಳು ಭಾಷಾ ಸಾಹಿತ್ಯ ಸೇವೆ ‘ ಎನ್ನುವ ಸಾಕ್ಷ್ಯ ಚಿತ್ರ ನಿರ್ಮಾಣ ಮಾಡಿದ್ದಾರೆ. 1973 ರಲ್ಲಿ ಬಿಡುಗಡೆಯಾದ ಮೊದಲ ಕೋಟಿ ಚೆನ್ನಯ ಸಿನಿಮಾದಲ್ಲಿ ಬಣ್ಣ ಹಚ್ಚಿದ ಬೆಳ್ಳೆ ಅವರು, ಹಲವಾರು ಧ್ವನಿ ಸುರುಳಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ, ಬ್ರಹ್ಮಶ್ರೀ ನಾರಾಯಣ ಗುರು ಸಾಕ್ಷ್ಯ ಚಿತ್ರ, ಕೋಟಿ ಚೆನ್ನಯ ಸಾಕ್ಷ್ಯ ಚಿತ್ರ, ಕಾಂತಾಬಾರೆ ಬೂದಬಾರೆ, ಅಮರ್‍ಬೊಳ್ಳಿಲು ಸಾಕ್ಷ್ಯಚಿತ್ರ, ಕೋಟಿ ಚೆನ್ನಯ ಸುಪ್ರಭಾತ ಇವೆಲ್ಲ ಪ್ರಮುಖವಾದುದು.
ಸಾಹಿತ್ಯ ಸಂಸ್ಕøತಿ ವೇದಿಕೆ ಮೂಡು ಬೆಳ್ಳೆ ಉಡುಪಿ ಇಲ್ಲಿ ಅಧ್ಯಕ್ಷರಾಗಿ, ಆಕಾಶವಾಣಿ ದೂರದರ್ಶನ ಉದ್ಯೋಗಿಗಳ ಸಂಘದಲ್ಲಿ ಅಧ್ಯಕ್ಷರಾಗಿ, ಅಖಿಲ ಭಾರತ ಆಕಾಶವಾಣಿ ಉದ್ಘೋಷಕರ ಸಂಘದ ಕರ್ನಾಟಕ ರಾಜ್ಯ ಶಾಖೆಯಲ್ಲಿ ಕೋಶಾಧಿಕಾರಿಯಾಗಿ, ಕನ್ನಡ ಸಾಹಿತ್ಯ ಪರಿಷತ್, ಸೃಜನ ಉಡುಪಿ, ಬ್ರಹ್ಮ ಬೈದರ್ಕಳ ಸಾಂಸ್ಕøತಿಕ ಅಧ್ಯಯನ ಪ್ರತಿಷ್ಠಾಣ ಆದಿ ಉಡುಪಿ ಇದರ ಗೌರವ ವಿಶ್ವಸ್ಥರಾಗಿ, ನವರಂಗಯುವಕ ಮಂಡಲ, ನಾರಾಯಣ ಗುರು ಕಲಾವೃಂದ, ತುಳು ನಾಟಕ ಕಲಾವಿದರ ಸಂಘ ಮುತಾಂದ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಆತ್ಮಶಕ್ತಿ ತ್ರೈ ಮಾಸಿಕ ಪತ್ರಿಕೆಯ ಗೌರವ ಉಪ ಸಂಪಾದಕರಾಗಿ, ದ.ಕ ಜಿಲ್ಲಾಡಳಿತದ ‘ಮಂಗಳೂರು ದರ್ಶನ’ ಗ್ರಂಥ ಸಂಪುಟ ಯೋಜನೆಯ ಸಹಾಯಕ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಮುದ್ದು ಮೂಡುಬೆಳ್ಳೆ ಅವರ ಸಮಗ್ರ ಸಾಹಿತ್ಯ ಸೇವೆಯನ್ನು ಗುರುತಿಸಿ ಯುವವಾಹಿನಿಯು ವಿಶುಕುಮಾರ್ ದತ್ತಿ ನಿಧಿ ಸಂಚಾಲನ ಸಮಿತಿ ಮೂಲಕ ನೀಡುತ್ತಿರುವ ‘ವಿಶುಕುಮಾರ್ ಪ್ರಶ್ತಸ್ತಿ’ಗೆ ಆಯ್ಕೆ ಮಾಡಿದೆ.

ವಿಶುಕುಮಾರ್ ಪ್ರಶಸ್ತಿ ಪದಾನ ಸಮಾರಂಭ -2014

  • ಅಧ್ಯಕ್ಷತೆ :
    ಡಾ| ಸತ್ಯನಾರಾಯಣ ಮಲ್ಲಿಪಟ್ಣ
    ಪ್ರಾಂಶುಪಾಲರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು
    ಪ್ರಶಸ್ತಿ ಪ್ರದಾನ :
    ಶ್ರೀ ಮಲಾರ್ ಜಯರಾಮ್ ರೈ
    ಪತ್ರಕರ್ತರು ಹಾಗೂ ಸಾಹಿತಿ
    ಮುಖ್ಯ ಅತಿಥಿಗಳು :
    ಶ್ರೀಮತಿ ಜಾನಕಿ ಬ್ರಹ್ಮಾವರ
    ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
    ಶ್ರೀ ಬಿ.ಎ. ಮೊಹಮ್ಮದ್ ಹನೀಫ್
    ಮಾಜಿ ಅಧ್ಯಕ್ಷರು, ಬ್ಯಾರಿ ಸಾಹಿತ್ಯ ಅಕಾಡೆಮಿ
    `ವಿಶುಕುಮಾರ್ ಪ್ರಶಸ್ತಿ’ ಪುರಸ್ಕøತರು :
    ಶ್ರೀ ಮುದ್ದು ಮೂಡುಬೆಳ್ಳೆ
    ಬಹುಭಾಷಾ ಸಾಹಿತಿ, ಸಂಶೋಧಕರು
    ಯುವವಾಹಿನಿ ಯುವ ಸಾಹಿತ್ಯಪ್ರಶಸ್ತಿ – ಪುರಸ್ಕ್ರತರು
    ಶ್ರೀ ಚೇತನ್ ಮುಂಡಾಜೆ
    ಸಾಹಿತ್ಯ ಪ್ರತಿಭೆ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!