ಯುವವಾಹಿನಿ (ರಿ.) ಯಡ್ತಾಡಿ ಘಟಕದ ವಿಕಸನ - 2022

ಮುಗ್ಧ ಮನಸ್ಸುಗಳಿಗೆ ಚೈತನ್ಯ ತುಂಬುವ ಕೆಲಸ ಶ್ಲಾಘನೀಯ – ಪ್ರಮೋದ್ ಮಂದಾರ್ತಿ

ಭಾರತ ಪುಣ್ಯಭೂಮಿ, ವಿಶ್ವ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ ಪಡೆದಕೊಂಡ ಈ ನಾಡಿನ ಅಂತರ್‌ಶಕ್ತಿ ವಿಶಿಷ್ಟವಾದುದು. ಇಂತಹ ಪುಣ್ಯ ಭೂಮಿಯಲ್ಲಿ ಮುಗ್ಧ ಮನಸ್ಸುಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಕೆಲಸವಾಗಬೇಕು, ಈ ನಿಟ್ಟಿನಲ್ಲಿ ಯುವವಾಹಿನಿ ಯಡ್ತಾಡಿ ಘಟಕ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜನೆ ಮೂಲಕ ಮಕ್ಕಳ ಭೌತಿಕ ವಿಕಸನದ ಮೂಲಕ ಸಂಸ್ಕಾರಯುತ ಶಿಕ್ಷಣಕ್ಕೆ ಅಡಿಪಾಯವಾಗುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ನವಭಾರತ್ ಸಹಕಾರಿ ಸಂಘ ಮೈರ್ಕೊಮೆ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಹೇಳಿದರು.ಅವರು ಯುವವಾಹಿನಿ(ರಿ) ಯಡ್ತಾಡಿ ಘಟಕ ಸಾರಥ್ಯದಲ್ಲಿ ಸ.ಹಿ.ಪ್ರಾ.ಶಾಲೆ ಯಡ್ತಾಡಿ, ಸಮರ್ಪಣ(ರಿ) ಕೋಟ, ರೋಟರಿ ಕ್ಲಬ್ ಬಾರ್ಕೂರು, ಸ್ವಾಗತ್ ವಿವಿಧೋದ್ದೇಶ ಸಹಕಾರಿ ಸಂಘ ಶಿವಗಿರಿ ಕ್ಷೇತ್ರ ಬಾರ್ಕೂರು, ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಶಿರಿಯಾರ, ಸೌಜನ್ಯ ಯುವಕ ಮಂಡಲ(ರಿ) ಯಡ್ಡಾಡಿ, ಶ್ರೀ ವಿನಾಯಕ ಯುವಕ ಮಂಡಲ(ರಿ) ಸ್ಯಾಬ್ರಕಟ್ಟೆ ಯಡ್ತಾಡಿ ಇವರ ಸಹಯೋಗದಲ್ಲಿ ನರೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2022(ತಿರುವಿನ ನಂದಾದೀಪ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ಸಹಶಿಕ್ಷಕರ ಸಂಘ(ರಿ) ಉಡುಪಿ ಜಿಲ್ಲಾ ಅಧ್ಯಕ್ಷ ಕೆ ಕಿರಣ್ ಹೆಗ್ಡೆ ಮಾತನಾಡಿ ಬದುಕಿನಲ್ಲಿ ಶಿಕ್ಷಣ ಎನ್ನುವುದು ಯಶಸ್ಸಿನ ಮೊದಲ ಘಟ್ಟ, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ಇಂತಹ ಶಿಬಿರಗಳು ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದರ ಜೊತೆಗೆ ಸಮಾಜದಲ್ಲಿ ಶಿಸ್ತಿನ ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ ಎಂದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಯುವವಾಹಿನಿ(ರಿ) ಯಡ್ತಾಡಿ ಘಟಕದ ಅಧ್ಯಕ್ಷ ಸೋಮಪ್ಪ ಪೂಜಾರಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಜೈ ಗಣೇಶ್ ಕೆಡಿಟ್ ಸಹಕಾರಿ ಬ್ಯಾಂಕ್ ಶಿರಿಯಾರ ಅಧ್ಯಕ್ಷರಾದ ಅಶೋಕ್ ಪ್ರಭು, ಸ.ಹಿ.ಪ್ರಾ.ಶಾಲೆ ಯಡ್ತಾಡಿ ಎ ಸ್ ಡಿ ಎಂ ಸಿ ಅಧ್ಯಕ್ಷ ನರಸಿಂಹ ನಾಯ್ಕ, ಸಹಶಿಕ್ಷಕಿ ಶಾಂತ ಪೈ, ಸ್ವಾಗತ್ ವಿವಿಧೋದ್ದೇಶ ಸಂಘ ಬಾರ್ಕೂರು ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ರೋಟರಿ ಕ್ಲಬ್ ಬಾರ್ಕೂರು ಅಧ್ಯಕ್ಷ ಚರಣ್ ಬಿ ಶೆಟ್ಟಿ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಶಿರಿಯಾರ ಅಧ್ಯಕ್ಷ ವಿನಯ ಪೂಜಾರಿ, ಶ್ರೀ ವಿನಾಯಕ ಯುವಕ ಮಂಡಲ(ರಿ) ಸ್ಯಾಬ್ರಕಟ್ಟೆ -ಯಡ್ತಾಡಿ ಅಧ್ಯಕ್ಷ ರಾಜೇಶ್ ದೇವಾಡಿಗ, ಶಿಬಿರದ ಸಂಪನ್ಮೂಲ ವ್ಯಕ್ತಿ ಕುಮಾರ್ ಸಾಲಿಗ್ರಾಮ ಉಪಸ್ಥಿತರಿದ್ದರು. ಅಜಿತ್ ಕುಮಾರ್ ನಿರೂಪಿಸಿ, ಸುಶಾಂತ್ ಪೂಜಾರಿ ಸ್ವಾಗತಿಸಿ, ಅಣ್ಣಪ್ಪ ಪೂಜಾರಿ ವಂದಿಸಿದರು.  ಯುವವಾಹಿನಿ ಯಡ್ತಾಡಿ ಘಟಕದ ಸದಸ್ಯರು ಸಹಕರಿಸಿದರು

Leave a Reply

Your email address will not be published. Required fields are marked *

error: Content is protected !!