ಮಂಗಳೂರು: ಮಹಿಳೆ ಅಬಲೆಯಲ್ಲ ಅವಳೂ ಕೂಡಾ ಸಬಲಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದು ಸಮಾಜ ಸೇವಕಿ ವೃಂದಾ ಎಸ್ ಹೆಗ್ಡೆ ಹೇಳಿದರು. ದಿನಾಂಕ 30-03-2024ರಂದು ಉರ್ವಸ್ಟೋರಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಜರುಗಿದ ಸ್ತ್ರೀ ಐಸಿರಿ ಸುಸ್ತಿರತೆಯ ಹಾದಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಯತ್ರನಾರ್ಯಸ್ತು ಪೂಜ್ಯತೆ ರಮಂತೆ ತತ್ರ ದೇವತಾ: ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆಯೋ ಅಲ್ಲಿ ದೇವತೆಗಳು ನಲೆಸಿರುತ್ತಾರೆ. ಭಾರತ ದೇಶದಲ್ಲಿ ಮಹಿಳೆಯರಿಗೆ ದೇವರ ಸ್ಥಾನದಲ್ಲಿ ಗೌರವಿಸುವ ಸಂಸ್ಕøತಿ ನಮ್ಮದಾಗಿದೆ. ಸಮಾನತೆ ಎಲ್ಲಿರುತ್ತದೋ ಅದೇ ಬಲವಾದ ದೇಶ, ಮಹಿಳೆ ಒಂದು ಕುಟುಂಬದ ನಿರ್ವಹಣೆಯಲ್ಲಿ ಪುರುಷರಷ್ಠೇ ಪ್ರಮುಖ ಪಾತ್ರವಹಿಸಿದ್ದಾಳೆ ಎಂದರು. ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಮಹಿಳಾ ಸಂಘಟನ ನಿರ್ದೇಶಕರಾದ ನಯನಾ ಸುರೇಶ್, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಉಷಾ ಸುವರ್ಣ ಮುಖ್ಯ ಅತಿಥಿಯಾಗಿದ್ದರು.
ವೇದಿಕೆಯಲ್ಲಿ ಯುವವಾಹಿನಿ(ರಿ.) ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಶಕೀಲಾ ದಾಮೋದರ್ ಉಪಸ್ಥಿತರಿದ್ದರು. ಯುವವಾಹಿನಿ(ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಶುಭಾ ರಾಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಯಲಕ್ಷ್ಮಿ, ರಮಣಿ ಹಾಗೂ ಚಿತ್ರಾಕ್ಷಿ ಪ್ರಾರ್ಥಿಸಿದರು. ಶಕೀಲಾ ವಂದಿಸಿದರು.
ಮಹಿಳೆಯರಿಗಾಗಿ ಲಾಸ್ಯ ಐಸಿರಿ, ಸಮೂಹ ನ್ರತ್ಯ ಸ್ಪರ್ಧೆ ಗಾನ ಐಸಿರಿ, ಸಮೂಹ ಗಾನ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹಲವಾರು ಸ್ಪರ್ಧಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ಬಳಿಕ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಅರಿವಿನ ಪಯಣ ಲಿಂಗ ಸಮಾನತೆಗೆ ಸಂಬಂಧಿಸಿದ ಜಾಗೃತಿ ಗೀತೆಗಳನ್ನು ಹಾಡಲಾಯಿತು. ಮಾತುಗಳ ಐಸಿರಿ ಸಂವಾದ ಕಾರ್ಯಕ್ರಮ ಡಾ ರಾಜಲಕ್ಷ್ಮಿ N. K. ಸರಹದ್ದುಗಳ ದಾಟಿ ಸಹಜೀವನದ ಕಡೆಗೆ ಎಂಬ ವಿಷಯದ ಬಗ್ಗೆ, ಫಾತಿಮ ರಲಿಯ ಮಹಿಳೆ ಮತ್ತು ಶಿಕ್ಷಣ ವಿಷಯದ ಬಗ್ಗೆ, ಡಾ. ಸಬಿತಾ ಕೊರಗ ತಳ ಸಮುದಾಯದಲ್ಲಿ ಮಹಿಳಾ ಪ್ರಾತಿನಿದ್ಯ ಆಶಯ ಮತ್ತು ವಾಸ್ತವ ಡಾ. ಪ್ರೀತಿ ಕೀರ್ತಿ ಡಿಸೋಜ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು.
ಸಾಮಾಜಿಕ ಮಾಧ್ಯಮ ಬಳಕೆಯಲ್ಲಿ ಎಚ್ಚರವಿರಲಿ, ವ್ಯೆಯಕ್ತಿಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳದಿರಿ. ಸಾಮಾಜಿಕ ಮಾಧ್ಯಮಗಳ ಖಾತೆಗೆ ಸಂಕೇತಾಕ್ಷರದಿಂದ ಕೂಡಿದ ಪ್ರಬಲ ಪಾಸ್ವಾರ್ಡ್ ರೂಪಿಸಬೇಕೆಂದು ಉರ್ವಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಿತಾ ಸಲಹೆ ನೀಡಿದರು. ಪ್ರೊ. ಅಕ್ಷಯ ಆರ್ ಶೆಟ್ಟಿ ಮುಖ್ಯ ಸಮನ್ವಯಕಾರರಾಗಿದ್ದರು.
ಸಮಾರೋಪ ಸಮಾರಂಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಜಿನೇಂದ್ರ ಕೋಟ್ಯಾನ್ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಪರಿಸರ ಪ್ರೇಮಿ ದಿನೇಶ್ ಹೊಳ್ಳ, ಗೋಕರ್ಣನಾಥ ಕಾಲೇಜಿನ ಸಂಚಾಲಕರಾದ ವಸಂತ್ ಕಾರಂದೂರ್, ಹಿರಿಯ ಸಾಹಿತಿ ಬಿ.ಎಮ್. ರೋಹಿಣಿ ಮುಖ್ಯ ಅತಿಥಿಯಾಗಿದ್ದರು. ಯುವವಾಹಿನಿ(ರಿ.) ಮಹಿಳಾ ಘಟಕದ ಅಧ್ಯಕ್ಷರಾದ ಶುಭಾ ರಾಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ(ರಿ.) ಮಹಿಳಾ ಘಟಕದ ಸಾಂಸ್ಕೃತಿಕ ನಿರ್ದೇಶಕರಾದ ಸೋನಿಯಾ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಗಾನ ಐಸಿರಿ ಮತ್ತು ಲಾಸ್ಯ ಐಸಿರಿಯಲ್ಲಿ ವಿಜೇತರಾದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಲಾಸ್ಯ ಐಸಿರಿ ಬ್ರೈಟ್ ಸ್ಟಾರ್ ಪ್ರಥಮ, ಪ್ರತಿಭಾ ಮತ್ತು ಬಳಗ ದ್ವಿತೀಯ, ಕಿಂಕಿಣಿ ವೃಂದ ತ್ರತೀಯ, ಗಾನ ಐಸಿರಿ ಗೋಕರ್ಣನಾಥೇಶ್ವರ ಕಾಲೇಜು ಪ್ರಥಮ, ಧನ್ಯ ಮತ್ತು ಬಳಗ ದ್ವಿತೀಯ, ಶಿವಗೌರಿ ತಂಡ ತೃತೀಯ
ಬಹುಮಾನ ಪಡೆದುಕೊಂಡರು. ದೇವಿಕಾ ನಾಗೇಶ್ ದೀಕ್ಷಿತಾ ಮತ್ತು ಅಮಿತ್ ತೀರ್ಪುಗಾರರಾಗಿದ್ದರು. ಸೋನಿಯಾ ರಾಜ್ ಸ್ವಾಗತಿಸಿದರು. ಅಮಿತಾ ಗಣೇಶ್ ವಂದಿಸಿದರು. ಸರಸ್ವತಿ ಎಸ್ ಕೂಳೂರು, ಉಮಾ ಶ್ರೀಕಾಂತ್, ಚಿತ್ರಶ್ರೀ ಮನೋಜ್ ಕಾರ್ಯಕ್ರಮ ನಿರೂಪಿಸಿದರು.