ಕಡಬ: ಕಡಬ ಘಟಕ ಇದರ ಭಜನಾ ತಂಡದ ವತಿಯಿಂದ ದಿನಾಂಕ 29-06-2024 ನೇ ಶನಿವಾರ ಸಂಜೆ 6.30 ರಿಂದ ಮನೆಮನೆ ಭಜನೆ ಎಂಬ ಕಾರ್ಯಕ್ರಮವನ್ನು ಬೇರಿಕೆ-ಬಲ್ಯ ಸಮಾಜ ಬಾಂಧವರ 6 ಮನೆಗಳಲ್ಲಿ ಆರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 6 ಜನ ಭಜಕರು ಭಾಗಿಯಾಗಿ, ಬಿಲ್ಲವ ಗ್ರಾಮ ಸಮಿತಿ ಬಲ್ಯ ಇದರ ಅಧ್ಯಕ್ಷರಾದ ಹರೀಶ್ ಡಿ. ಎಚ್ ಹಾಗೂ ಬೇರಿಕೆ-ಬಲ್ಯದ ಸಮಾಜ ಬಾಂಧವರ ಸಂಪೂರ್ಣ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿದೆ, ಇವರಿಗೆ ಯುವವಾಹಿನಿ ಭಜನಾ ತಂಡದ ವತಿಯಿಂದ ತುಂಬು ಹೃದಯದ ಧನ್ಯವಾದಗಳು, ಮುಂದೆಯೂ ಇದೇ ರೀತಿ ಸಹಕರಿಸಿ ಭಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.