ಯುವವಾಹಿನಿ (ರಿ) ವೇಣೂರು ಘಟಕ ಇದರ ವತಿಯಿಂದ ಸ್ಪೂರ್ತಿ ಭಿನ್ನಚೇತನಾ ಶಾಲೆ ಮೂಡಬಿದಿರೆಯಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ ವಹಿಸದ್ದರು .ಮಕ್ಕಳಿ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು .ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿತೀಶ್ ಎಚ್, ಘಟಕದ ಸಲಹೆಗಾರರಾದ ಹರೀಶ್ ಪೋಕ್ಕಿ, ಘಟಕದ ಕೋಶಧಿಕಾರಿ ಹರೀಶ್ ಪಿ ಎಸ್, ಉಪಾಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು, ನಿರ್ದೇಶಕರಾದ ಸತೀಶ್ ಪಿ ಎನ್, ಲಯನ್ಸ್ ಕ್ಲಬ್ ವೇಣೂರು ಇದರ ಕಾರ್ಯದರ್ಶಿಯಾದ ಸುಧೀರ್ ಭಂಡಾರಿ , ಕೋಶಧಿಕಾರಿಯಾದ ಸತೀಶ್ ಪೂಜಾರಿ ಚಿಗುರು ಉಪಸ್ಥಿತರಿದ್ದರು