ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ
ಮಂಗಳೂರು : ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 10.10.2018 ರಿಂದ 19.10.2018 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡಬಿದ್ರೆ, ಕೆಂಜಾರು-ಕರಂಬಾರು, ಶಕ್ತಿನಗರ, ಕುಪ್ಪೆಪದವು, ಕಡಬ, ಬೆಂಗಳೂರು ಘಟಕಗಳ ಒಟ್ಟು 626 ಸದಸ್ಯರು ಹತ್ತು ದಿನಗಳಲ್ಲಿ ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡ ಘಟಕಗಳನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲು, ಪ್ರಚಾರ ನಿರ್ದೇಶಕ ಹರೀಶ್. ಕೆ. ಪೂಜಾರಿ, ಪದ್ಮನಾಭ ಸಾಲಿಯಾನ್ ಅಭಿನಂದಿಸಿದರು
ಉತ್ತಮ ಸಾಮಾಜಿಕ ಕಳ ಕಳಿ ಹೊಂದಿರುವ ಯುವವಾಹಿನಿ ಸಂಸ್ಥೆಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ