ಅವಿಷ್ಕಾರಗಳ ಹಿಂದೆ ಹೋದ ಎಲ್ಲರೂ ಯಶಸ್ವಿ ವಿಜ್ಞಾನಿಗಳಾಗಲು ಅಸಾಧ್ಯ. ಇದಕ್ಕೆ ಇತ್ಯಾತ್ಮಕ ಮನೋಭಾವ, ಸಂಶೋಧನಾ ಪ್ರವೃತ್ತಿ, ಕಾರ್ಯ ಸಾಧನೆಯ ಛಲ, ಅಸಾಧಾರಣ ಮನೋಬಲ ಇವೆಲ್ಲಕ್ಕೂ ಮಿಗಿಲಾಗಿ ಕಠಿಣ ಪರಿಶ್ರಮ ಮನೋದೃಷ್ಟಿ ಅತಿ ಮುಖ್ಯ. ಇವೆಲ್ಲ ಗುಣಗಳನ್ನು ಎಳವೆಯಿಂದಲೇ ಮೈಗೂಡಿಸಿಕೊಂಡು ತನ್ನ ಬುದ್ಧಿಮತ್ತೆಯಿಂದ ಸಂಶೋಧನಾ ಕ್ಷೇತ್ರದ ಭೌತಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಗಳಿಸಿದ ಡಾ| ಪ್ರವೀಣ ಎಸ್.ಡಿ.ಯವರು ಎಲ್ಲರ ಗಮನ ಸೆಳೆದಿದ್ದಾರೆ.
ಪ್ರಸ್ತುತ ಸುಳ್ಯದ ಕೆ.ವಿ.ಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಶ್ರೀಯುತರು ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ ಉಪನ್ಯಾಸಕರಾಗಿ ದುಡಿದಿರುತ್ತಾರೆ. 2004 ರಲ್ಲಿ ಮಂಗಳೂರು ವಿಶ್ವ ವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎಸ್‌ಸಿ ಸ್ನಾತಕೋತ್ತರ ಪದವಿ ಗಳಿಸಿದ ಇವರು Nuclear Physics ನಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಯವರಿಂದ ಪ್ರಶಸ್ತಿ ಗಳಿಸಿದ ಶ್ರೇಷ್ಠ ಸಾಧಕರಾಗಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯ ಸಂಶೋಧನಾ ವಿಭಾಗಕ್ಕೆ ಇವರು ಮಂಡಿಸಿದ ಡೋಪೆಂಟ್ ಇಂಡ್ಯೂಸ್‌ಡ್ ಮೈಕ್ರೋಸ್ಟ್ರಕ್ಚರಲ್ ಸ್ಟಡಿ ಆಫ್ ಪಾಲಿಮರ್‍ಸ್ ಎಂಬ ಮಹಾ ಪ್ರಬಂಧಕ್ಕೆ ವಿಶ್ವ ವಿದ್ಯಾನಿಲಯ ಪಿ.ಹೆಚ್‌ಡಿ ಪದವಿ ನೀಡಿ ಗೌರವಿಸಿದೆ (2015). ತನ್ನ ಸಂಶೋಧನಾ ಅವಧಿಯಲ್ಲಿ ದೇಶದ ಪ್ರತಿಷ್ಠಿತ ಬಾಬಾ ಅಟೋಮಿಕ್ ರೀಸರ್ಚ್ ಸೆಂಟರ್ (BARC), ಮುಂಬೈ, ಮೈಸೂರು, ಧಾರವಾಡ ಹಾಗೂ ಕೊಚ್ಚಿನ್ ವಿಶ್ವ ವಿದ್ಯಾಲಯಗಳ ಪ್ರಯೋಗ ಶಾಲೆಗಳಲ್ಲಿ ತನ್ನ ಸಂಶೋಧನೆಗಳನ್ನು ನಡೆಸಿರುತ್ತಾರೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತ ಕಾಲಿಕಗಳಲ್ಲಿ ಪ್ರಕಟವಾಗಿರುತ್ತದೆ.
ಕೃಷಿಕ ಶ್ರೀ ಎಲ್ಲಣ್ಣ ಪೂಜಾರಿ. ಶ್ರೀಮತಿ ಯಶೋಧ ದಂಪತಿಗಳ ಸುಪುತ್ರರಾದ ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ವೆ ಭಕ್ತಕೋಡಿಯಲ್ಲಿ ಮುಗಿಸಿ ಪದವಿ ಶಿಕ್ಷಣವನ್ನು ವಿಜ್ಞಾನದಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಡೆದಿರುತ್ತಾರೆ.
ತನ್ನ ಸಕಾರಾತ್ಮಕ, ಸಂಶೋಧನಾ ಪ್ರವೃತ್ತಿಯಿಂದ ಶ್ರೇಷ್ಠ ಸಾಧನೆಗೈದ ಡಾ| ಪ್ರವೀಣ್ ಎಸ್.ಡಿ ಯವರು ಬಿಲ್ಲವ ಸಮುದಾಯದ ಹೆಮ್ಮೆಯ ಸಾಧಕ. ಅವರಿಗೆ ಯುವವಾಹಿನಿಯ ಹೃತ್ಪೂರ್ವಕ ಅಭಿನಂದನೆಗಳು.
Congrts praveen and great work from yuvavahini.