ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಭಜನಾ ಸಂಕೀರ್ತಣೆಯು ಬಜಪೆ ದೊಡ್ಡಿಕಟ್ಟ ಸ್ವಯಂ ಭೂಲಿಂಗೇಶ್ವರ ದೇವಸ್ಥಾನ ದಲ್ಲಿ ದಿನಾಂಕ 8-03-2024 ರಂದು ಸಾಯಂಕಾಲ 5:00 ರಿಂದ 7:30 ಗಂಟೆಯವರೆಗೆ ಅರ್ಥ ಪೂರ್ಣವಾಗಿ ನಡೆಯಿತು.
ದೊಡ್ಡಿಕಟ್ಟ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲು ಹಾಕಿ, ಪ್ರಸಾದ ವಿತರಣೆ ಮಾಡಿ ಗೌರವಿಸಿದರು.
ಘಟಕದ ಅಧ್ಯಕ್ಷರಾದ ಮಾಧವ ಸಾಲಿಯಾನ್, ಉಪಾಧ್ಯಕ್ಷರಾದ ರೇಣುಕಾ ಶೇಖರ್, ಮಾಜಿ ಅಧ್ಯಕ್ಷರುಗಳಾದ ದೇವರಾಜ್ ಅಮೀನ್, ಸಂಧ್ಯಾ ಕುಳಾಯಿ, ಚಂದ್ರಶೇಖರ್, ಯೋಗೀಶ್ ಪೂಜಾರಿ, ಉಷಾ ಸುವರ್ಣ, ಕಾರ್ಯದರ್ಶಿ ರೋಹಿಣಿ, ಬಿ.ಎಸ್. ಆನಂದ್, ರೋಹಿತ್, ಚಿತ್ತರಂಜನ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.