ಕಡಬ :- ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ ಯನ್ನು ಸರಸ್ವತಿ ವಿದ್ಯಾಲಯ ಶಾಲೆ ಕಡಬ ಇಲ್ಲಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಲ್, ಶಿವಪ್ರಸಾದ್ ನೂಚಿಲ ಸಂಘಟನಾ ಕಾರ್ಯದರ್ಶಿ ಕೇಂದ್ರ ಸಮಿತಿ ಮಂಗಳೂರು, ಕೃಷ್ಣಪ್ಪ ಅಮೈ ಕಾರ್ಯದರ್ಶಿ, ಮತ್ತು ಶಾಲೆಯ ಮುಖ್ಯಗುರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗುರುಗಳ ತತ್ವವನ್ನು ಘಟಕದ ಅಧ್ಯಕ್ಷರು, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಕ್ಕಳಿಗೆ ತಿಳಿಸಿಕೊಟ್ಟರು, ಶಾಲೆಯಲ್ಲಿ ಸೇರಿದ ಎಲ್ಲ ಮಕ್ಕಳಿಗೆ ನಮ್ಮ ಘಟಕದ ವತಿಯಿಂದ ಗುರುಗಳ ಜನ್ಮದಿನಾಚರಣೆ ಪ್ರಯುಕ್ತ ಸಿಹಿತಿಂಡಿ ವಿತರಿಸಲಾಯಿತು, ಈ ಸಂದರ್ಭದಲ್ಲಿ ಘಟಕದ ಜೊತೆ ಕಾರ್ಯದರ್ಶಿಯಾದ ಸರಿತಾ ಉಂಡಿಲ, ಸದಸ್ಯರಾದ ಪ್ರಶಾಂತ್ ಎನ್ ಎಸ್, ನಿಶ್ಮಿತ ಅಮೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಗುರುಗಳು ಘಟಕಕ್ಕೆ ಧನ್ಯವಾದ ಸಮರ್ಪಿಸಿದರು.