ಸಿಂಚನ ವಿಶೇಷಾಂಕ : 2017 : ಮುದ್ದು ಮೂಡು ಬೆಳ್ಳೆ,

ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ

ಬ್ರಹ್ಮಶ್ರೀ ನಾರಾಯಣಗುರುಗಳು ಹತ್ತೊಂಭತ್ತನೇಯ ಶತಮಾನದ ಕೇರಳದ ಮಹಾನ್ ಸಂತ ಹಾಗೂ ಸಮಾಜ ಸುಧಾರಕರು. ಅದ್ವೈತ ಪ್ರತಿಪಾದನೆ, ‘ಮಾನವರೆಲ್ಲ ಒಂದೇ ಜಾತಿ, ಒಂದೇ ಮತ, ಎಲ್ಲರಿಗೂ ದೇವರೊಬ್ಬನೇ’ ಎನ್ನುವ ಸರಳ ಸಂದೇಶಗಳೊಂದಿಗೆ ಕೇರಳ, ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ ಕರಾವಳಿ ಜಿಲ್ಲೆಗಳನ್ನೂ ಪ್ರಭಾವಿಸಿ ಸಾಮಾಜಿಕ ಪರಿವರ್ತನೆ ಸಾಧಿಸಿದವರು. ದಾರ್ಶನಿಕತೆ, ಪ್ರಖರ ಚಿಂತನೆ, ಪಾಂಡಿತ್ಯದ ಅವರ ಸರಳ ಉದ್ಭೋದಕ ಕೃತಿಗಳು ಸಮಾಜ ಸುಧಾರಣಾ ಕಾರ್ಯಗಳು ಹಿಂದುಳಿದ ಸಮಾಜದ ಆತ್ಮಸ್ಥೈರ್ಯ ಮತ್ತು ಸಂಘರ್ಷರಹಿತ ಸಮಾಜ ನಿರ್ಮಾಣಕ್ಕಾಗಿ ಸಮಕಾಲೀನವಾಗಿಯೂ ಅತ್ಯಂತ ಪ್ರಸ್ತುತವಾಗಿವೆ. ಇಂತಹ ಮಹೋನ್ನತ ವ್ಯಕ್ತಿತ್ವದ ಬ್ರಹ್ಮಶ್ರೀ ನಾರಾಯಣಗುರುಗಳ ಕೃತಿಗಳು, ಕಾರ್ಯ ವಿಧಾನ, ಸಾಮಾಜಿಕ ಸುಧಾರಣಾ ತತ್ವಗಳನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ವಿಸ್ತರಿಸುವ ಸದುದ್ದೇಶದಿಂದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಸ್ಥಾಪನೆಗೊಂಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ದಿನಾಂಕ 19-01-2017ರಂದು ಉದ್ಘಾಟಿಸಿರುತ್ತಾರೆ. ಕರ್ನಾಟಕ ಸರ್ಕಾರವು ಈ ಪೀಠಕ್ಕೆ ಪ್ರಾರಂಭಿಕವಾಗಿ ರೂ. ಒಂದು ಕೋಟಿ ಮೂಲ ನಿಧಿಯನ್ನು ಒದಗಿಸಿರುತ್ತದೆ. ಇದರಿಂದ ಬರುವ ಬಡ್ಡಿಯ ಮೊತ್ತದಿಂದ ಪೀಠವು ಕಾರ್ಯನಿರ್ವಹಿಸಲು ಆರಂಭಿಸಿದೆ.
ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ:
ಧ್ಯೇಯೋದ್ದೇಶಗಳು:
1. ಶ್ರೀ ನಾರಾಯಣಗುರುಗಳ ಉನ್ನತ ಧ್ಯೇಯ, ಆದರ್ಶ, ತತ್ವಗಳನ್ನು ಸಮಾಜದಲ್ಲಿ ಪಸರಿಸುವುದು ಹಾಗೂ ಜನಪ್ರಿಯಗೊಳಿಸುವುದು.
2. ಆಧುನಿಕ ಭಾರತದ ಸಂಕ್ರಮಣ ಕಾಲಘಟ್ಟದಲ್ಲಿ ನಾರಾಯಣ ಗುರುಗಳು ಕೈಗೆತ್ತಿಕೊಂಡು ನಿರ್ವಹಿಸಿದ ಸಾಮಾಜಿಕ, ಧಾರ್ಮಿಕ, ನೈತಿಕ ನೆಲೆಗಳು, ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಟದ ಕುರಿತು ಯುವ ತಲೆಮಾರಿಗೆ ಅರಿವು ನೀಡಿ, ಸಮಾನತೆಗಾಗಿ ಚಳುವಳಿಯನ್ನು ಮುಂದುವರಿಸುವ ಜಾಗೃತಿ ಹುಟ್ಟಿಸುವುದು.
3. ಸಾಮಾಜಿಕ ಸೌಹಾರ್ದ ಹಾಗೂ ಶಾಂತಿಯುತ ಸಹಬಾಳ್ವೆಗಾಗಿ ಶ್ರೀ ನಾರಾಯಣಗುರುಗಳ ‘ಒಂದೇ ಜಾತಿ, ಒಬ್ಬನೇ ದೇವರು’ ಎನ್ನುವ ಧಾರ್ಮಿಕ ಮೌಲ್ಯಗಳತ್ತ ಗಮನ ಸೆಳೆಯುವುದು.
4. ನಾರಾಯಣ ಗುರುಗಳ ಬೋಧನೆಗಳ ಕುರಿತಾದ ಸಾಹಿತ್ಯ, ಮಾಹಿತಿಗಳನ್ನು ಜನಸಾಮಾನ್ಯರಿಗೆ ಸರಳ, ಸುಲಭ ಗ್ರಾಹ್ಯವೆನಿಸುವ ಭಾಷೆಯಲ್ಲಿ ಪ್ರಕಟಪಡಿಸುವುದು.
5. ನಾರಾಯಣ ಗುರುಗಳ ಜೀವನ, ಸಾಧನೆ ಚಳುವಳಿಗಳ ದಾಖಲೀಕರಣ ನಡೆಸಿ, ಅಂತರಾಷ್ಟ್ರೀಯ ಗುಣಮಟ್ಟದ ವಸ್ತು ಸಂಗ್ರಹಾಲಯ, ಪತ್ರಗಾರ (ಆರ್ಕೈವ್) ನಿರ್ಮಿಸುವ ಮೂಲಕ ಅತ್ಯುಪಯುಕ್ತ ಮಾಹಿತಿಗಳು ಲಭ್ಯವಿರುವಂತೆ ಮಾಡುವುದು.
6. ಯುವ ಸಮುದಾಯವು ಸಾಮಾಜಿಕ ಧಾರ್ಮಿಕ ಸಂಘರ್ಷಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗುವಂತೆ ನಾರಾಯಣ ಗುರುಗಳ ಪ್ರಮುಖ ಅನುಯಾಯಿಗಳು, ಸಮಕಾಲೀನ ಮಹನೀಯರು, ಮಹಿಳೆಯರ ಬಗ್ಗೆ ವ್ಯಾಪಕ ಅಧ್ಯಯನ, ಪ್ರಸರಣ        ಕೈಗೊಳ್ಳುವುದು.
7. ಮಾನವ ಜನಾಂಗವನ್ನು ನಿರಂತರ ಬಾಧಿಸುವ ಸಾಮಾಜಿಕ, ರಾಜಕೀಯ ಘಟನೆಗಳಿಗೆ ಆರೋಗ್ಯಕರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಚಾರಸಂಕಿರಣ, ಸಮ್ಮೇಳನ, ಕಾರ್ಯಾಗಾರಗಳು, ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ, ಸಾರ್ವಜನಿಕರು ಮುಖ್ಯವಾಗಿ      ಯುವ ಸಮುದಾಯ ನಾರಾಯಣ ಗುರುಗಳ ತಾತ್ವಿಕ ನಿಲುವುಗಳನ್ನು ಪರಿಚಯಿಸಿಕೊಳ್ಳುವಂತೆ ಮಾಡುವುದು.
8. ಶೋಷಿತ ಮತ್ತು ತಳವರ್ಗದ ಸಮುದಾಯಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ, ಜಾತಿ ಶ್ರೇಣೀಕರಣದ ನೆಲೆಯ ದೌರ್ಜನ್ಯ, ಶೋಷಣೆಯನ್ನು ಮೆಟ್ಟಿ ನಿಲ್ಲುವಂತೆ ಆತ್ಮವಿಶ್ವಾಸವನ್ನು ಪ್ರೇರೇಪಿಸುವುದು.
9. ನಾರಾಯಣ ಗುರುಗಳಿಂದ ಪ್ರೇರಣೆ ಹೊಂದಿದ ಮತ್ತು ಗುರುಗಳ ಮೇಲೆ ಪ್ರಭಾವ ಬೀರಿದ ಸಾಮಾಜಿಕ, ಧಾರ್ಮಿಕ ರಂಗದ ಚಿಂತನಾಶೀಲರ ಕುರಿತಾಗಿ ತೌಲನಿಕ ಅಧ್ಯಯನಕ್ಕೆ ನೆರವು ನೀಡುವುದು.
10. ನಾರಾಯಣ ಗುರುಗಳ ಸಮಾಜಮುಖೀ ಸಾಧನೆಗಳಿಂದ ಪ್ರಗತಿ ಹೊಂದಿದ ಕರ್ನಾಟಕ ಮತ್ತು ಹೊರಗಡೆಯ ಸಮುದಾಯಗಳ ಕುರಿತು ಸಂಶೋಧನೆ ಮತ್ತು ಉನ್ನತ ವ್ಯಾಸಂಗಕ್ಕೆ ಉತ್ತೇಜನ ನೀಡುವುದು.
11. ಶ್ರೀ ನಾರಾಯಣ ಗುರುಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ಕೈಗೆತ್ತಿಕೊಳ್ಳುವ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಹಾಗೂ ಫೆಲೋಶಿಪ್ ಯೋಜನೆ ಆರಂಭಿಸುವುದು.
12. ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ನೋಡಲ್ ಕೇಂದ್ರಗಳಾಗಿ ಗುರುತಿಸಿ, ಶ್ರೀ ನಾರಾಯಣ ಗುರುಗಳ ತತ್ವ, ಸಂದೇಶಗಳ ಅನುಷ್ಠಾನ ನೆಲೆಯಲ್ಲಿ ಯೋಜನೆ ಕೈಗೊಳ್ಳುವುದು ಹಾಗೂ ಯುವ ಜನಾಂಗಕ್ಕೆ ಸ್ಪೂರ್ತಿಯಾಗುವಂತೆ ಶ್ರೀಗುರುಗಳು ಭೇಟಿ ನೀಡಿದ್ದ            ಸ್ಥಳಗಳನ್ನು ಗುರುತಿಸಿ ಸಂರಕ್ಷಣೆಗೊಳಪಡಿಸುವುದು.
13. ಸಾಮೂಹಿಕ ಚಿಂತನಕೂಟ ಮತ್ತಿತರ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸುವುದರ ಮೂಲಕ ಸಾರ್ವಜನಿಕರಲ್ಲಿ ಶಾಂತಿ, ನೆಮ್ಮದಿ ಆಧ್ಯಾತ್ಮಿಕತೆಯ ವಾತಾವರಣ ಕಲ್ಪಿಸಲು ಪ್ರಯತ್ನಿಸುವುದು.
14. ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಶ್ರೀ ನಾರಾಯಣ ಗುರುಗಳ ಜೀವನ, ಸಾಮಾಜಿಕ, ಧಾರ್ಮಿಕ ಕೊಡುಗೆಗಳ ವಿವರವನ್ನು ಪಠ್ಯದಲ್ಲಿ ಅಳವಡಿಸುವಂತೆ ಹಾಗೂ ಆ ಮೂಲಕ ಸಾಮಾಜಿಕ ಏಕತೆಗೆ ನೆಲೆ ಒದಗಿಸುವಂತೆ ಉತ್ತೇಜಿಸುವುದು.
15. ನಾರಾಯಣ ಗುರುಗಳ ಬದುಕು ಸಾಧನೆ ಸಂದೇಶಗಳ ಅಧ್ಯಯನದ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್‍ಗಳನ್ನು ಆರಂಭಿಸುವುದು.
16. ನಾರಾಯಣ ಗುರುಗಳ ಧ್ಯೇಯಾದರ್ಶಗಳನ್ನು ಪ್ರಚಾರ ಪಡಿಸಿ ಸಮಾಜಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿದವರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ದಾನಿಗಳ ಗುರುಗಳ ಹೆಸರಿನ ಪ್ರಶಸ್ತಿ ಸ್ಥಾಪಿಸುವುದು.
17. ಕರ್ನಾಟಕದ ಒಳಗಿನ ಯಾ ಹೊರಗಿನ ಸಮಾಂತರ ಧ್ಯೇಯದ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಸಹಭಾಗಿತ್ವ (ಎಂ.ಒ.ಯು) ಮೂಲಕ ಪೀಠವು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಪರಿಣಾಮಕಾರಿಯಾಗಿ ಚಟುವಟಿಕೆ ನಡೆಸಲಾಗುವ ಪ್ರಯತ್ನ ಮಾಡುವುದು.
18. ಶ್ರೀನಾರಾಯಣ ಗುರುಗಳ ಭಾವಚಿತ್ರಗಳು, ಕಲಾಕೃತಿಗಳು ಚಲನಚಿತ್ರ ಸಾಕ್ಷ್ಯಚಿತ್ರಗಳುಳ್ಳ ಗ್ಯಾಲರಿ, ವಸ್ತು ಸಂಗ್ರಹಾಲಯ ಸ್ಥಾಪನೆ ಮತ್ತು ನಾರಾಯಣ ಗುರುಗಳ ಬದುಕು, ಸಾಧನೆ ವಿವರ, ಅಧ್ಯಯನ ಪೀಠದ ಚಟುವಟಿಕೆಗಳ ಮಾಹಿತಿಗಳ ವೆಬ್‍ಸೈಟ್                      ಸಿದ್ಧಪಡಿಸುವುದು.
19. ಮಂಗಳೂರು ವಿಶ್ವವಿದ್ಯಾನಿಲಯದ ಆವರಣದೊಳಗೆ ಪೀಠದ ಸ್ವಂತ ಕಟ್ಟಡ ನಿರ್ಮಾಣ ಯೋಜನೆ, ಅದಕ್ಕಾಗಿ ಕಟ್ಟಡದ ನೀಲನಕ್ಷೆ ವ್ಯವಸ್ಥೆಯೊಂದಿಗೆ ದಾನಿಗಳನ್ನು ಸಂಪರ್ಕಿಸಿ ಧನಸಂಚಯಕ್ಕೆ ಪ್ರಯತ್ನ.
20. ಶ್ರೀ ನಾರಾಯಣಗುರುಗಳ ಬೋಧನೆಗಳಿಗೆ ಅನುಗುಣ ವಾದ, ಸಮಕಾಲೀನ ಸಮಾಜಕ್ಕೆ ಸೂಕ್ತವೆನಿಸುವ ಇನ್ನಾವುದೇ ಯೋಜನೆಗಳು. ಮಂಗಳೂರು ವಿಶ್ವವಿದ್ಯಾನಿಲಯವು ಅಧ್ಯಯನ ಪೀಠದ ನಿರ್ದೇಶಕರನ್ನಾಗಿ ಶ್ರೀ ಮುದ್ದು ಮೂಡುಬೆಳ್ಳೆಯವರನ್ನು                           ನಿಯುಕ್ತಿಗೊಳಿಸಿದೆ. ಸಮಾಜದ ಗಣ್ಯರ, ದಾನಿಗಳ ಬೆಂಬಲವನ್ನು ಅಧ್ಯಯನ ಪೀಠದ ಉದ್ದೇಶಿತ ಯೋಜನೆಗಳಿಗೆ ನಿರೀಕ್ಷಿಸಲಾಗಿದೆ.

          ಮುದ್ದು ಮೂಡು ಬೆಳ್ಳೆ, ನಿರ್ದೇಶಕರು -ಬ್ರಹ್ಮಶ್ರೀ ನಾರಾಯಣಗುರು   ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!