ಮಂಗಳೂರು : ಯುವವಾಹಿನಿ (ರಿ) ಬಜಪೆ ಘಟಕ ಹಾಗೂ ಜೈ ತುಲುನಾಡ್ (ರಿ) ಮಂಗಳೂರು ಘಟಕದ ವತಿಯಿಂದ ಜೂನ್ 16 ರ ಭಾನುವಾರದಂದು ಬಜಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನದಲ್ಲಿ “ಬಲೆ ದೈ ನಡ್ಕ” ಎಂಬ ಕಾರ್ಯಕ್ರಮವು ನಡೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಬಜ್ಪೆ ಇಲ್ಲಿನ ವೈದ್ಯಾಧಿಕಾರಿ ಡಾ. ಶಂಕರ್ ನಾಗ್ ಹಾಗೂ ಜೈ ತುಲುನಾಡ್ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ಮತ್ತು ಯುವವಾಹಿನಿ (ರಿ) ಬಜಪೆ ಘಟಕದ ಅಧ್ಯಕ್ಷರಾದ ನಿರಂಜನ್ ಕರ್ಕೇರರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೂಲ್ಕಿ- ಮೂಡಬಿದ್ರೆ ಮಂಡಲ ರೈತ ಮೋರ್ಚಾದ ಅಧ್ಯಕ್ಷರಾದ ರಾಜೇಶ್ ಅಮೀನ್, ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರು ಲೋಕೇಶ್ ಅಮೀನ್, ಕಾರ್ಯದರ್ಶಿ ದಿನಕರ್ ಅಮೀನ್ ಸದಸ್ಯರು ವಿಜಯ ಅಮೀನ್, ಯುವವಾಹಿನಿ (ರಿ) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾದ ಪ್ರಸಾದ್ ಪಾಲನ್, ಜೈ ತುಳುನಾಡ್ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಪೂಂಜ ಸ್ಥಾಪಕ ಸದಸ್ಯರಾದ ಕಿರಣ್ ತುಲುವೆ ರಕ್ಷಿತ್ ಕೋಟ್ಯಾನ್, ಜೈ ತುಲುನಾಡ್ (ರಿ) ಕುಡ್ಲ ಘಟಕದ ಉಪಾಧ್ಯಕ್ಷರಾದ ಮನೀಶ್ ಅಂಚನ್ ಕಾರ್ಯದರ್ಶಿಯಾದ ಚೇತನ್ ಅಂಚನ್, ಜೊತೆ ಕಾರ್ಯದರ್ಶಿಯಾದ ಪುನೀತ್ ಬೋಳೂರು ಸದಸ್ಯರಾದ ಚಿರಾಗ್ ಪೊರ್ಕೋಡಿ, ಪವಿತ್ರ ಸುರತ್ಕಲ್ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಸ್ಥಾಪಕಧ್ಯಕ್ಷರಾದ ಅರುಣ್ ಕುಮಾರ್, ಯುವವಾಹಿನಿ (ರಿ) ಬಜ್ಪೆ ಘಟಕದ ಸ್ಥಾಪಕಧ್ಯಕ್ಷರಾದ ವಿನೋಧರ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ರಾಜೇಶ್ , ದೇವರಾಜ್ ಅಮೀನ್, ಚಂದ್ರಶೇಖರ್ ಪೂಜಾರಿ, ಯೋಗೀಶ್ ಪೂಜಾರಿ ಕೆಂಜಾರು, ನಿಕಟಪೂರ್ವ ಅಧ್ಯಕ್ಷರಾದ ಮಾಧವ ಸಾಲಿಯನ್, ಉಪಾಧ್ಯಕ್ಷರಾದ ರೇಣುಕಾ ಶೇಖರ್, ನಿಶಾಲ್ ಪೂಜಾರಿ, ಪದಾಧಿಕಾರಿಗಳಾದ ಚಿತ್ತರಂಜನ್ ಸಾಲಿಯನ್, ಭಾಸ್ಕರ ಪೂಜಾರಿ, ಶರ್ಮಿಳಾ ಚಂದ್ರಶೇಖರ್, ಸಂಧ್ಯಾ ಸುನಿಲ್, ಲೀಲಾವತಿ ತಾರಿಕಂಬಳ, ಸದಸ್ಯರುಗಳಾದ ಆನಂದ ಪೂಜಾರಿ, ಸುಚಿತಾ ದೇವರಾಜ್, ಶಿಲ್ಪಾ ದಿನೇಶ್, ಜಯಶ್ರೀ ನಾಗೇಶ್, ವಿಜಯ, ಪುರುಷೋತ್ತಮ್ ಕೊಟ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜ್ಪೆ ಕರಂಬಾರು ಇದರ ಕಾರ್ಯದರ್ಶಿಯಾದ ಸಂದೀಪ್, ವಿನೀಶ್, ದಿನೇಶ್ ಕುಮಾರ್, ಗಂಗಾಧರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ ಎರಡು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದರು.