ಬೆಳ್ತಂಗಡಿ : ಯುವವಾಹಿನ (ರಿ) ಬೆಳ್ತಂಗಡಿ ಘಟಕದ ಮಹಿಳಾ ಸದಸ್ಯರಿಗೆ ಮತ್ತು ಘಟಕದ ಕಾರ್ಯಕರ್ತರಿಗಾಗಿ ಪ್ರೇರಣಾ ನಮ್ಮಿಂದ ನಮಗಾಗಿ ಎಂಬ ಕಾರ್ಯಕ್ರಮವನ್ನು ದಿನಾಂಕ:23/06/2019 ರಂದು ಮಧ್ಯಾಹ್ನ ಗಂಟೆ 2.30 ಕ್ಕೆ ಸುವರ್ಣ ಆರ್ಕೇಡ್ ಬೆಳ್ತಂಗಡಿಯಲ್ಲಿ ನಡೆಯಿತು.ಮಹಿಳಾ ಸಮಿತಿಯ ಪ್ರಧಾನ ಸಂಚಾಲಕರು ಸುಜತಾ ಅಣ್ಣಿ ಪೂಜಾರಿ ಅವರ ಸ್ವಾಗತ ಭಾಷಣದೊಂದಿಗೆ ಪ್ರೇರಣೆಯ ಉದ್ಘಾಟನೆಯನ್ನು ಶ್ರೀಮತಿ ಸೇವಂತಿ (ಸಮೂಹ ಸಂಪನ್ಮೂಲ ವ್ಯಕ್ತಿ C R P ಪರೊಡಿತ್ತಾಯ ಕಟ್ಟೆ ಬಜಿರೆ )ಇವರು ದೀಪ ಬೆಳಗಿಸಿ ಹೆಣ್ಣು ಸಮಾಜದ ಪ್ರೇರಣಾ ಶಕ್ತಿಯಾಗಿ ಮೂಡಿ ಬರಬೇಕು. ಯಾವ ಕಾಲಕ್ಕೂ ತನ್ನೊಳಗಿನ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಸಮಾಜ ಕಟ್ಟುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಉತ್ತಮ ಪ್ರೇರಣೆ ನೀಡಿದರು. ನಂತರ ಯುವವಾಹಿನಿಯ ಸಲಹೆಗಾರರೂ ಆಗಿರುವ ಸಂಪತ್ ಸುವರ್ಣ ಅವರು ಮಾತನಾಡಿ ನಮ್ಮ ದೇಶದಲ್ಲಿ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಬಗ್ಗೆ ತಿಳಿಸಿ ಇದೇ ರೀತಿ ನಮ್ಮ ಸಮಾಜದ ಮಹಿಳೆಯರು ಕೂಡ ಬೆಳೆಯಬೇಕೆಂದು ಪ್ರೇರಣೆ ನೀಡಿದರು.ಪ್ರೇರಣಾ ಶಕ್ತಿಯಾಗಿ ಘಟಕದ ಸಲಹೆಗಾರರು ಗುರುದೇವವಿವಿಧೋದ್ದೇಶ ಸಹಕಾರಿ ಸಂಘ ನಿ ಬೆಳ್ತಂಗಡಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಅಶ್ವಥ್ ಕುಮಾರ್ ಒಗ್ಗಟ್ಟು ಸಮಾಜದ ಬಹುದೊಡ್ಡ ಶಕ್ತಿ ಮಹಿಳೆಯರಲ್ಲಿ ಸಾಂಘಿಕ ಮನಸ್ಸಿದ್ದಾಗ ಶೋಷಣೆ ದೂರವಾಗಲು ಸಾಧ್ಯ.ಪ್ರಶ್ನಿಸುವ ಮತ್ತು ಹೋರಾಟದ ಮನೋಭಾವವನ್ನು ಮಹಿಳೆಯರು ರೂಢಿಸಿಕೊಳ್ಳಬೇಕು ಎಂದರು.ಘಟಕದ ಅಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ ಅಧ್ಯಕ್ಷತೆ ವಹಿಸಿದ್ದರು ಕಾರ್ಯದರ್ಶಿ ವಿಜಯ ಕುಮಾರ್ ಶಿರ್ಲಾಲ್ ಉಪಸ್ಥಿತರಿದ್ದರು.ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ನಿರ್ದೇಶಕಿ ವನಿತಾ ಜನಾರ್ದನ ವಂದಿಸಿದರು.ಸಭೆಯಲ್ಲಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮುಂಡೂರು ಸದಾನಂದ ಉಂಗಿಲಬೈಲು ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಪ್ರಶಾಂತ್ ಮಚ್ಚಿನ ಉಪಸ್ಥಿತರಿದ್ದರು.
ಉತ್ತಮ ಕಾರ್ಯಕ್ರಮ..
ಅಭಿನಂದನೆಗಳು ಬೆಳ್ತಂಗಡಿ ಘಟಕ