ಕ್ರೀಡಾ ಪಟುಗಳ ವಿಶ್ವದ ಅತ್ಯುನ್ನತ ವೇದಿಕೆ- ಒಲಿಂಪಿಕ್ಸ್ ಇದರಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯನ್ನು ಗಳಿಸುವುದೇ ಅತ್ಯಂತ ಕಷ್ಟಕರ ಪ್ರಯಾಸಕರ ಸವಾಲು. ಕ್ರೀಡೆಯ ತನ್ನ ಆಸಕ್ತಿಗಳನ್ನು ಮಾರ್ಗದರ್ಶಕರಾದ ಶ್ರೀಯುತ ಅಬ್ಬಾಸ್ ಹಾಗೂ ಲಚ್ಚೇಂದ್ರ ರಿಂದ ಪೋಷಿಸಿಕೊಂಡು ನಂಬಲಸಾಧ್ಯ ಸಾಧನೆ- ಒಲಿಂಪಿಕ್‌ಗೆ ಆಯ್ಕೆಯ ಕನಸನ್ನು ನೆನಸಾಗಿಸಿದ ಕರ್ನಾಟಕದ ಹೆಮ್ಮೆಯ ಶ್ರೀ ಮನೀಷ್ ಪೂಜಾರಿ ಒಬ್ಬ ಧ್ರುವತಾರೆ.
ಕರ್ನಾಟಕದ ಉಸೈನ್ ಬೋಲ್ಟ್ ಎಂದು ಕರೆಯಲ್ಪಡಲು ಅರ್ಹ ರಾಷ್ಟ್ರೀಯ ದಾಖಲೆಯುತ್ತ ಸಾಗುವ ಪ್ರಥಮಹಂತ, ರಾಜ್ಯ ದಾಖಲೆಯ 100ಮೀ. ಓಟದಲ್ಲಿ 10.5 ಸೆಕೆಂಡುಗಳಲ್ಲಿ ಹಾಗೂ 21.5 ಸೆ.ನಲ್ಲಿ 200 ಮೀ ಓಟ ಪೂರ್ತಿಗೊಳಿಸಿ 4×100 ಮೀ ರಿಲೇ ಓಟದಲ್ಲಿ ಚಿನ್ನದ ಪದಕ ಸಹಿತ ಅತುನ್ನತ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಮನೀಷ್ ನಮ್ಮ ಸಮಾಜ ಹಮ್ಮೆ ಪಡುವ ಸಾಧನೆ ಮಾಡಿದ್ದಾರೆ.
2016 ಮೇ 26 ರಿಂದ 28 ರವರೆಗೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಛಾಂಪಿಯನ್ ಶಿಪ್‌ನಲ್ಲಿ 200 ಮೀ ಓಟದಲ್ಲಿ ಚಿನ್ನದ ಪದಕ ಗಳಿಸಿ 100×4 ಮೀ ರಿಲೇ ಓಟದಲ್ಲಿ ಕಂಚಿನ ಪದಕ ಗಳಿಸಿ 2020 ರಲ್ಲಿ ಜಪಾನ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿರುವ ಅದ್ವಿತೀಯ ಸಾಧನೆ ಮೈನವರೇಳಿಸುವಂಥದ್ದು. ಮನೀಷ್ ನೀವು ನಮ್ಮ ಹೆಮ್ಮೆಯ ಪ್ರತಿಭೆ ನಿಸ್ಸಂಶಯ.
ಪ್ರತಿಭಾನ್ವೇಷಣೆ ಪೋಷಣೆಯಲ್ಲಿ ತೊಡಗಿರುವ ಯುವವಾಹಿನಿ ಮನೀಷ್ ಪೂಜಾರಿಯವರಿಗೆ ಅಂತಾರಾಷ್ಟ್ರೀಯ/ಒಲಿಂಪಿಕ್ಸ್ ಅರ್ಹತೆಯಿಂದ ಜಿಲ್ಲೆಯ ಮಣ್ಣಿಗೆ, ಬಿಲ್ಲವ ಜನತೆಗೆ ಗೌರವ ತರಲಿದ್ದಾರೆ ಎಂಬ ಅಭಿಮಾನದಿಂದ ಗೌರವಿಸಲು ಸಂತೋಷ ಪಡುತ್ತಿದೆ.