ಮಾಣಿ :- ಯುವವಾಹಿನಿ(ರಿ.) ಮಾಣಿ ಘಟಕದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 06ನವೆಂಬರ್ 2022 ರಂದು ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನ,ಮಾಣಿ ಇಲ್ಲಿ ಜರುಗಿತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ರವರು ಉದ್ಘಾಟಿಸಿದರು. ತದನಂತರ ಅವರು ನೂತನ ತಂಡಕ್ಕೆ ಶುಭ ಹಾರೈಸಿದರು. ಕಾರ್ಯದರ್ಶಿ ರೇಣುಕಾ ಕಣಿಯೂರುರವರು ವಾರ್ಷಿಕ ವರದಿಯನ್ನು ದೃಶ್ಯ – ಶ್ರವ್ಯ ಪರದೆಯ ಮೂಲಕ ಮಂಡಿಸಿದರು. ಘಟಕದ ಪ್ರತಿಷ್ಠಿತ ಸಂಚಿಕೆಯಾದ “ಮಾಣಿಕ್ಯ” ವನ್ನು ಕಾಮಧೇನು ಮಹಿಳಾ ಸಹಕಾರಿ ಸಂಘ(ನಿ.) ನೆಲ್ಯಾಡಿ ಇದರ ಅಧ್ಯಕ್ಷರಾದ ಉಷಾ ಅಂಚನ್ ರವರು ಬಿಡುಗಡೆಗೊಳಿಸಿದರು. ಸಂಚಿಕೆಯ ಸಂಪಾದಕರಾರ ಶಿವರಾಜ್ ಪಿ ಆರ್ ರವರು ಸಂಪಾದಕರ ನೆಲೆಯಲ್ಲಿ ಮಾತನಾಡಿದರು ಮತ್ತು ಇವರನ್ನು ಅಭಿನಂದಿಸಲಾಯಿತು .ಶೈಕ್ಷಣಿಕ, ಸಾಂಸ್ಕೃತಿಕ, ಸಮಾಜ ಸೇವೆ,ವೈದ್ಯಕೀಯ ಹಾಗೂ ಕ್ರೀಡಾ ಕ್ಷೇತ್ರವು ಸೇರಿ ಒಟ್ಟು ಐದು ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು.
ಘಟಕದ ವತಿಯಿಂದ ಮಾಡಲಾದ 2023ನೇ ಇಸವಿಯ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಮಾತಾನಾಡಿದ ಅಕ್ಷಯ ಗ್ರೂಪ್ ಪುತ್ತೂರು ಇದರ ಅಧ್ಯಕ್ಷರಾದ ಜಯಂತ ನಡುಬೈಲುರವರು, ಯುವವಾಹಿನಿ ಕೇಂದ್ರ ಸಮಿತಿಯ ಘಟಕಗಳಲ್ಲಿ ಮಾಣಿ ಘಟಕವು ಮುಂಚೂಣಿಯಲ್ಲಿದೆ. ಎಲ್ಲಾ ಕ್ಷೇತ್ರದಲ್ಲೂ ಘಟಕವು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ಹೇಳುತ್ತಾ, ನೂತನ ತಂಡಕ್ಕೆ ಶುಭಾಶಯವನ್ನು ಕೋರಿದರು . ಘಟಕದ ವತಿಯಿಂದ ನೇರಳಕಟ್ಟೆ ವ್ಯವಸಾಯಿಕ ಸಹಕಾರಿ ಸಂಘದಲ್ಲಿ 39 ಸೇವೆ ಸಲ್ಲಿಸಿ ನಿವೃತ್ತಿ ಗೊಂಡ ಸಂಜೀವ ಪೂಜಾರಿ ಇಡೆಮುಂಡೇವು, ಹಲವು ವರುಷಗಳಿಂದ ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಮಾಣಿ ಇದರ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ,ಸಂಘದ ಮತ್ತು ಘಟಕದ ಸಕ್ರಿಯ ಸದಸ್ಯರಾಗಿರುವ ಜನಾರ್ದನ ಕೊಡಂಗೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ದಿಶಾ ಕೆ ಪೂಜಾರಿ ರವರನ್ನು ಅಭಿನಂದಿಸಲಾಯಿತು. ಬಡ ಕುಟುಂಬದ ಹೆಣ್ಣು ಮಗಳಾದ ಕುಮಾರಿ ಹರ್ಷಿಣಿ ಕಡೆಶೀವಾಲಯಯವರ ವಿದ್ಯಾಭ್ಯಾಸಕ್ಕೆ ಘಟಕದ ವಿಧ್ಯಾನಿಧಿ ಯಿಂದ ರೂ.10,000/- ಸಹಾಯಧನ ನೀಡಲಾಯಿತು ಮತ್ತು ಘಟಕದ ವ್ಯಾಪ್ತಿಯಲ್ಲಿ ಇರುವ ಸಂತೋಷ್ ಪೂಜಾರಿಯವರು ಅಪಘಾತಕ್ಕೊಳಗಾಗಿದ್ದು ವೈದ್ಯಕೀಯ ವೆಚ್ಚಕ್ಕಾಗಿ ಸ್ಪಂದನ ಯೋಜನೆಯಡಿ ರೂ.5000/- ಸಹಾಯಧನ ನೀಡಲಾಯಿತು. ಈ ಸಾಲಿನ ಚುನಾವಣಾ ಅಧಿಕಾರಿಯಾದ ಪ್ರಶಾಂತ್ ಅನಂತಾಡಿ ರವರು ಮುಂದಿನ ಸಾಲಿನ ನೂತನ ಪದಾಧಿಕಾರಿಗಳನ್ನು ವೇದಿಕೆಗೆ ಬರಮಾಡಿಕೊಂಡರು ಮತ್ತು ಯುವವಾಹಿನಿ(ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ರವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ನೂತನ ತಂಡಕ್ಕೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಯಂತ ಬರಿಮಾರು ಒಂದು ವರ್ಷದಲ್ಲಿ ಸಹಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ,ಸದಸ್ಯರಿಗೆ ಮತ್ತು ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ, ನೂತನ ತಂಡಕ್ಕೆ ಶುಭ ಹಾರೈಸಿದರು . ಘಟಕದ ವತಿಯಿಂದ ಜಯಂತ್ ಬರಿಮಾರು ಅವರನ್ನು ಸನ್ಮಾನಿಸಲಾಯಿತು. ನೂತನ ಸಾಲಿನ ಅಧ್ಯಕ್ಷರಾಗಿ ರವಿಚಂದ್ರ ಬಾಬಣಕಟ್ಟೆ, ಕಾರ್ಯದರ್ಶಿಯಾಗಿ ಸಚಿನ್ ಪೆರಾಜೆ, ಉಪಾಧ್ಯಕ್ಷರಾಗಿ ನಾಗೇಶ್ ಕೊಂಕಣಪದವು ಮತ್ತು ಶಿವರಾಜ್ ಪಿ ಆರ್, ಕೋಶಾಧಿಕಾರಿಯಾಗಿ ಸುಜಿತ್ ಅಂಚನ್, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕೋಡಾಜೆ ರವರು ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರಾದ ರವಿಚಂದ್ರ ಬಾಬಣಕಟ್ಟೆ ರವರು ಮುಂದಿನ ದಿನಗಳಲ್ಲಿ ಘಟಕದ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಕುಮಾರಿ ಜಯಶ್ರೀ ಮತ್ತು ಪ್ರಜ್ಞಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ರೇಣುಕಾ ಕಣಿಯೂರುರವರು ಸ್ವಾಗತಿಸಿ, ದಿನಕರ್ ಅಂಚನ್ ಮತ್ತು ಮಮತ ಏನಾಜೆ ರವರು ಕಾರ್ಯಕ್ರಮವನ್ನು ನಿರೂಪಿಸಿದರು.