ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 03-03-2024 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಿಲ್ಲವ ಭವನದಲ್ಲಿ ನಡೆಯಿತು.
ಪದಗ್ರಹಣ ಯುವವಾಹಿನಿ ಸಮಾರಂಭದಲ್ಲಿ ಹಳೆಯಂಗಡಿ ಘಟಕದ ಅಧ್ಯಕ್ಷರು ಕಿರಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಬಿಲ್ಲವ ಸಮಾಜ ಸೇವಾ ಸಂಘ(ರಿ.) ಹಳೆಯಂಗಡಿ ಅಧ್ಯಕ್ಷರು ಚಂದ್ರಶೇಖರ್ ನಾನಿಲ್ ದೀಪವನ್ನು ಬೆಳಗಿಸುವುದರ ಮೂಲಕ ನೆರವೇರಿಸಿದರು.
2024- 25 ನೇ ಸಾಲಿನ ಅಧ್ಯಕ್ಷರಾಗಿ ಹಿತಾಕ್ಷಿ ನಾರಾಯಣ್, ಕಾರ್ಯದರ್ಶಿ ಪೂರ್ಣಿಮಾ ಹಾಗೂ ನಮಿತಾ ಬೆಳ್ಳಾಯರು ಕೋಶಾಧಿಕಾರಿಯಾಗಿ ಆಯ್ಕೆಯಾಗಿರುವರು.
ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷರು ಹರೀಶ್ .ಕೆ. ಪೂಜಾರಿ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷರು ಗಣೇಶ್ ಜಿ ಬಂಗೇರ, ಬಿಲ್ಲವ ಸಮಾಜ ಸೇವಾ ಸಂಘ ಕಟ್ಟೋಣ ಸಮಿತಿ ಅಧ್ಯಕ್ಷರು ಮೋಹನ್ ಎಸ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸಾಲ್ಯಾನ್, ಪೂಜಾ ಎರೇಂಜರ್ಸ್ & ಕೇಟರರ್ಸ್ ಮಾಲಕರು ಜೈ ಕೃಷ್ಣ ಬಿ ಕೋಟ್ಯಾನ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಸಂಘಟನಾ ಕಾರ್ಯದರ್ಶಿ ರಂಜನ್ ಕುಳಾಯಿ ಉಪಸ್ಥಿತರಿದ್ದರು.
ಸಾಧನಾ ಪ್ರಶಸ್ತಿ
ಸಮಾರಂಭದಲ್ಲಿ ಲಕ್ಷ್ಯ ಇವರ ಕ್ರೀಡಾ ಲೋಕದ ಸಾಧನೆಗಾಗಿ ಹಾಗೂ ಪ್ರಣವಿ ಎನ್.ಸಿ.ಸಿ ಏರ್ ವಿಂಗ್ ಕೆಡೆಟ್ ಆಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಿರುವ ಹೆಮ್ಮೆಗಾಗಿ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ಉಪಸ್ಥಿತರಿದ್ದರು.
ಯುವವಾಹಿನಿ ಹಳೆಯಂಗಡಿ ಘಟಕವು ಇದುವರೆಗೂ ಬಿಲ್ಲವ ಸಂಘದ ನೂತನ ಬಿಲ್ಲವ ಭವನಕ್ಕೆ ಸುಮಾರು 7,50,000/- ಕ್ಕೂ ಮಿಕ್ಕಿ ಧನ ಸಹಕಾರವನ್ನು ನೀಡಿರುವುದಲ್ಲದೆ ಸುಮಾರು 7,50,000/- ವೆಚ್ಚದಲ್ಲಿ ಗುರು ಮಂದಿರಕ್ಕೆ ಪ್ರಸಾದಾಲಯವನ್ನು ನಿರ್ಮಾಣ ಮಾಡಿ ನೀಡಿರುವುದರ ಬಗ್ಗೆ ಪ್ರಸ್ತಾಪಿಸಿದರು. ಯುವವಾಹಿನಿ ಉತ್ತಮ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾ, ಮಾತೃ ಸಂಸ್ಥೆಯಾದ ಬಿಲ್ಲವ ಸಂಘದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವುದು ನಿಜಕ್ಕೂ ಘಟಕಕ್ಕೆ ಹಿರಿಮೆ ಮುಖ್ಯ ಅತಿಥಿಗಳು ಬಾಸ್ಕರ್ ಸಾಲ್ಯಾನ್ ಶ್ಲಾಘಿಸಿದರು.
ಹಳೆಯಂಗಡಿ ಘಟಕವು ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಕೇಂದ್ರ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಉತ್ತಮವಾಗಿ ಸಹಕಾರವನ್ನು ನೀಡುತ್ತಿದೆ ಎಂದು ಕೇಂದ್ರ ಸಮಿತಿಯ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ನುಡಿದರು.
ಉದ್ಘಾಟನೆಯನ್ನು ನೆರವೇರಿಸಿ ಯುವವಾಹಿನಿ ಹಳೆಯಂಗಡಿ ಘಟಕವು ಮಾತೃ ಸಂಸ್ಥೆಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದರಿಂದ ಘಟಕವು ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ ಎಂದು ಬಿಲ್ಲವ ಸಂಘ ಅಧ್ಯಕ್ಷರು ಚಂದ್ರಶೇಖರ್ ನಾನಿಲ್ ಶುಭ ಹಾರೈಸಿದರು.
ಬಿಲ್ಲವ ಸಂಘದ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಮಾರ್ಗದರ್ಶನದಲ್ಲಿ ಯುವವಾಹಿನಿ ಘಟಕವನ್ನು ಮುನ್ನಡೆಸುವುದಾಗಿ ನೂತನ ಅಧ್ಯಕ್ಷರು ಹಿತಾಕ್ಷಿ ನಾರಾಯಣ್ ಹೇಳಿದರು.
ಸಮಾರಂಭದ ಅಧ್ಯಕ್ಷರು ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷರು ಕಿರಣ್ ಕುಮಾರ್ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.
ಸಂಘದ ಕೋಶಾಧಿಕಾರಿ ರಮೇಶ್ ಬಂಗೇರ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪೂರ್ಣಿಮಾ ಅಭಿನಂದನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ಹಿಮಕರ್ ಟಿ ಸುವರ್ಣ ಕಲ್ಲಾಡಿ ನಿರೂಪಿಸಿದರು.