ಪುತ್ತೂರು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಪುತ್ತೂರು ಘಟಕದ 2024-25 ನೇ ಸಾಲಿನ ಪದಗ್ರಹಣ ಸಮಾರಂಭ ಕಾರ್ಯಕ್ರಮವು ದಿನಾಂಕ 14-12-2024 ನೇ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನ ಬಪ್ಪಳಿಗೆ, ಪುತ್ತೂರು ಇಲ್ಲಿ ನಡೆಯಿತು. ಕಾರ್ಯಕ್ರಮವು ನಾರಾಯಣ ಗುರುಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು.
ಸ್ವಾಗತವನ್ನು ಘಟಕದ ಉಪಾಧ್ಯಕ್ಷರಾದ ಅಣ್ಣಿ ಪೂಜಾರಿರವರು ನೆರವೇರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಕೆಡೆಂಜಿ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜಯರಾಮ.ಬಿ.ಎನ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಶ್ರೀ ಮಹಾಲಿಂಗೇಶ್ವರ ಐ.ಟಿ.ಐ ನ ಉಪನ್ಯಾಸಕರಾದ ಶ್ರೀ ನಾರಾಯಣ ಪೂಜಾರಿ ಪಂಜಳ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕಾರದ ಶ್ರೀ ಜಯಂತ್ ಬರಿಮಾರ್, ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಸಮಿತ್. ಪಿ ಉಪಸ್ಥಿತರಿದ್ದರು.
2023-24ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಮಿತ್. ಪಿ ವಾಚಿಸಿದರು.
ನೂತನ ತಂಡದ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾ ಅಧಿಕಾರಿಯಾದ ಉಮೇಶ್ ಬಾಯರ್ ವಾಚಿಸಿದರು.
ಚುನಾವಣಾ ಅಧಿಕಾರಿಯವರಿಗೆ ಅಧ್ಯಕ್ಷರಾದ ಜಯರಾಮ್.ಬಿ.ಎನ್ ಶಾಲು ಹಾಕಿ ಅಭಿನಂದಿಸಿದರು.
ತಂಡಕ್ಕೆ ಪ್ರತಿಜ್ಞಾ ವಿಧಿಯನ್ನು ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಶ್ರೀ ಲೋಕೇಶ್ ಕೋಟ್ಯಾನ್ ಕೂಳೂರ್ ಬೋಧಿಸಿದರು.
ನೂತನ ಅಧ್ಯಕ್ಷರಾಗಿ ಅಣ್ಣಿ ಪೂಜಾರಿ ಮತ್ತು ತಂಡಕ್ಕೆ ಶುಭಾಶಯ ಕೋರಿದರು.
ನೂತನ ಅಧ್ಯಕ್ಷರಾದ ಅಣ್ಣಿ ಪೂಜಾರಿಯವರು ಮಾತನಾಡಿ ಘಟಕದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಹಾಗೂ ಎಲ್ಲರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ನಮ್ಮ ಘಟಕದ ಮಾಜಿ ಅಧ್ಯಕ್ಷರಾದ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದಕ್ಕೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ನೂತನ ತಂಡಕ್ಕೆ ಮಾಜಿ ಅಧ್ಯಕ್ಷರುಗಳು ಶುಭಾಶಯ ತಿಳಿಸಿದರು. ಘಟಕದ 2023-24 ನೇ ಸಾಲಿನ ಪದಾಧಿಕಾರಿಗಳು/ನಿರ್ದೇಶಕರುಗಳಿಗೆ ಅಧ್ಯಕ್ಷರು ಸ್ಮರಣಿಕೆಯನ್ನು ನೀಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ಜಯರಾಮ್ ಬಿ.ಎನ್ ಮಾತನಾಡಿ ಒಂದು ವರ್ಷದಲ್ಲಿ ಅನೇಕ ಕಾರ್ಯಕ್ರಮ ಮಾಡಿರುವುದು ನಮಗೆ ಹೆಮ್ಮೆಯಿದೆ ಹಾಗೂ ಹಲವು ವರುಷಗಳ ನಂತರ ನಡೆದ ಸಮಾಜ ಬಾಂಧವರಿಗಾಗಿ ಪುತ್ತೂರು ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡಾಕೂಟ ಯಶಸ್ವಿಯಾಗಿ ನಡೆದಿದೆ. ಪ್ರತಿಯೊಂದು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಘಟಕದ ಪದಾಧಿಕಾರಿಗಳಿಗೆ, ನಿರ್ದೇಶಕರುಗಳಿಗೆ, ಸದಸ್ಯರಿಗೆ ಘಟಕದ ಮಾಜಿ ಅಧ್ಯಕ್ಷರುಗಳಿಗೆ ಅಭಿನಂದನೆಗಳನ್ನು ತಿಳಿಸಿ, ಮುಂದಿನ ನೂತನ ತಂಡಕ್ಕೆ ಶುಭಾಶಯ ಕೋರಿ ತನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಘಟಕ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿರ್ದೇಶಕರುಗಳು ಸರ್ವ ಸದಸ್ಯರು ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ನೂತನ ಕಾರ್ಯದರ್ಶಿ ಶರತ್ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು.