ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ಪದಗ್ರಹಣ ಸಮಾರಂಭವು 11-12-2024ರಂದು ಬ್ರಹ್ಮಶ್ರೀ ಸಭಾಭವನ ಪೊನ್ನುಟ್ಟು ವಿಟ್ಲದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜೇಶ್ ವಿಟ್ಲ ವಹಿಸಿದರು.
ಮಾಧವ ಪೂಜಾರಿ ಪಟ್ಲ ಉದ್ಘಾಟಿಸಿದರು.
ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಯಶವಂತ ಇವರು ಪ್ರಕಟಿಸಿದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ
ಶ್ರೀ ಹರೀಶ್ ಕೆ ಪೂಜಾರಿಯವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಮರುವಳ ಹಾಗೂ ತಂಡದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಾಣಿಲ ಕುಕ್ಕಾಜೆ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿಯವರು ನೊಂದವರನ್ನು ಮೇಲೆತ್ತುವ ಕಾರ್ಯ ಬಿಲ್ಲವ ಸಂಘಗಳಿಂದ ನಡೆಯಬೇಕು. ಧರ್ಮಯುಕ್ತ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು. ಸಮಾಜದ ಬಂಧುಗಳಲ್ಲಿ ಮೇಜ ಸ್ಥಿತಿ ಅಭಿಮಾನವಿಡಬೇಕು, ಪ್ರತಿ ಬಿಲ್ಲವ ಮನೆಗಳಿಗೂ ಭೇಟಿ ನೀಡಿ ಸಂಘಟನೆಯ ಬಲ ವೃದ್ಧಿಸಬೇಕಾಗಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಜಯಂತ ನಡುಬೈಲು ಅಧ್ಯಕ್ಷರು ಅಕ್ಷಯ ಕಾಲೇಜ್ ಪುತ್ತೂರು, ಶ್ರೀ ಸಂಜೀವ ಪೂಜಾರಿ ಗುರುಕೃಪ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸಂಘ, ಡಾ.ರಾಜಾರಾಮ್ ಕೆ.ಬಿ. ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ದೇಜಪ್ಪ ಪೂಜಾರಿ ನಿಡ್ಯಾ, ತಾರನಾಥ ಬೋಳಿಗದ್ದೆ ಇವರುಗಳು ಶುಭ ಹಾರೈಸಿದರು.
ಬಿಲ್ಲವ ಮಹಿಳಾ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ವಿದುಷಿ ನಯನ ಸತ್ಯನಾರಾಯಣ, ಸಂಗೀತ ಪಾಣೆ ಮಜಲು, ಹರೀಶ್ ಸಿ ಎಚ್, ಕೃಷ್ಣಪ್ಪ ಪೂಜಾರಿ ಪಾಂಡೇಲು, ಹರೀಶ್ ಕೆ ಪೂಜಾರಿ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಿರ್ಗಮನ ಅಧ್ಯಕ್ಷ ಶ್ರೀ ರಾಜೇಶ್ ವಿಟ್ಲ ಮತ್ತು ಕಾರ್ಯದರ್ಶಿ ಶೋಭಾ ಇವರನ್ನು ಸನ್ಮಾನಿಸಲಾಯಿತು.
ಪದಗ್ರಹಣದ ಬಳಿಕ ಲಲಿತಾ ಕಲಾಸದನದ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಕುಂಡಡ್ಕ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸದಸ್ಯರಿಂದ ಕಾರ್ಯಕ್ರಮ ನಡೆಯಿತು.
ಉದಯ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಜೊತೆ ಕಾರ್ಯದರ್ಶಿ ನಿರ್ಮಲ ವಂದಿಸಿದರು.
ಚೈತನ್ಯ, ವೀಕ್ಷಣ್ಯ, ಆಶಿಕ ಪ್ರಾರ್ಥಿಸಿದರು.