ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಕಿಡ್ನಿ ವೈಫಲ್ಯ, ಕಿಡ್ನಿ ಸಂಬಂಧಿ ರೋಗಗಳು ಹಾಗೂ ತಡೆಗಟ್ಟುವರೇ ಮುಂಜಾಗ್ರತಾ ಕ್ರಮಗಳು – ಇದರ ಬಗ್ಗೆ ಆರೋಗ್ಯ ಮಾಹಿತಿ ಶಿಬಿರವು ದಿನಾಂಕ 03/04/2017 ಸೋಮವಾರ ಸಂಜೆ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿಯಲ್ಲಿ ಜರುಗಿತು.
ನಿರಂತರ. ಒತ್ತಡದಿಂದ ಕೂಡಿದ ಕೆಲಸ ಕಾರ್ಯಗಳು, ಆಧುನಿಕ ಜೀವನ ಕ್ರಮದಿಂದ ಶರೀರಕ್ಕೆ ಸಿಗದ ಸರಿಯಾದ ವ್ಯಾಯಾಮ ಹಾಗೂ ಆಹಾರ ಸೇವನಾ ಕ್ರಮ, ಇಂತಹ ಕಾರಣಗಳಿಂದ ಕಿಡ್ನಿ ವೈಫಲ್ಯ, ಕಿಡ್ನಿಯಲ್ಲಿ ಕಲ್ಲು ಇಂತಹ ಸಮಸ್ಯೆಗಳು ತಲೆದೋರುತ್ತವೆ.
ಆದರೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹಾಗೂ ಸರಿಯಾದ ಪ್ರಮಾಣದಲ್ಲಿ ನೀರು ಸೇವನೆಯಿಂದ ಇಂತಹ ಅನಾರೋಗ್ಯದ ಸಮಸ್ಯೆಗಳಿಂದ ಮುಕ್ತಿ ಸಾಧ್ಯ ಎಂಬುದಾಗಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ಮೂತ್ರರೋಗ ತಜ್ಞರಾದ ಡಾ.ಸದಾನಂದ ಪೂಜಾರಿಯವರು ತಿಳಿಸಿದರು.
ಅವರು ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ಸಂಬಂಧಿ ರೋಗಗಳ ಬಗ್ಗೆ ಸುದೀರ್ಘ ಸುಮಾರು ಒಂದೂವರೆ ಗಂಟೆಗಳ ಕಾಲ ಮಾಹಿತಿ ನೀಡಿ, ಯಾವ ರೀತಿಯ ಆಹಾರ ಕ್ರಮ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದಾಗಿ ಶಿಬಿರದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಡ ವಿದ್ಯಾರ್ಥಿ ಮೋಹಿತ್ ಗೆ ವಿದ್ಯಾನಿಧಿಯ ವತಿಯಿಂದ ರೂ.10,000/- ವನ್ನು ಪಣಂಬೂರು ಘಟಕದ ಮುಖೇನ ನೀಡಲಾಯಿತು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು, ಪಣಂಬೂರು ಯುವವಾಹಿನಿ ಕಾರ್ಯದರ್ಶಿ ಶ್ರೀ ಉದಯ ಆರ್.ಯುವವಾಹಿನಿ ಸದಸ್ಯರುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಮತ್ತು ಶಿಬಿರದ ಪ್ರಯೋಜನ ಪಡೆದರು.
ಘಟಕದ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ ಯವರು ಸ್ವಾಗತಿಸಿ ವಂದಿಸಿದರು.
It was a good programme. Dr. Sadananda Poojary with his vast experience made the people to understand how important the existence of kidney is and how one can save it. Contribution of Dr. Sadananda Poojary to Yuvavahini is appreciable and never forgetable.