ಮಂಗಳೂರಿನ ಮರೋಳಿ ಕುಲಶೇಖರ ನಿವಾಸಿಯಾಗಿರುವ ನೇಮಿರಾಜ್ ಓರ್ವ ಉತ್ತಮ ಸಂಘಟಕರು, ಕಲಾಪೋಷಕರಾಗಿ ಬೆಳೆದವರು. ನಾಯಕತ್ವ ಗುಣವನ್ನು ತನ್ನೊಡಲಲ್ಲೇ ತುಂಬಿಕೊಂಡು ಬಂದಿರುವಂತಹ ಶ್ರೀಯುತರು ಯುವವಾಹಿನಿಯ ಸ್ಥಾಪಕ ಸದಸ್ಯರಾಗಿರುವುದರೊಂದಿಗೆ ಪ್ರತಿಯೊಂದು ಕಾರ್ಯಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡವರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಶ್ರೀಯುತರು 2004ರಲ್ಲಿ ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವರು. ಕೇಂದ್ರ ಸಮಿತಿಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ 2006-07ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ.
’ಜೈ ಭಾರತ್‌ಮಾತಾ ಎಜುಕೇಶನ್ ಸೊಸೈಟಿ, ಮಂಡ್ಯ’ ಇದರ ಅಧ್ಯಕ್ಷರಾಗಿ, ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘ (ರಿ) ಮಂಗಳೂರು ಇದರ ಉಪಾಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಮಂಗಳೂರು ಇದರ ಸದಸ್ಯರಾಗಿ, ವೀಣಾಪಾಣಿ ಎಜುಕೇಶನ್ ಟ್ರಸ್ಟ್(ರಿ) ಮಂಗಳೂರು ಇದರ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸಕ್ತ “ಕಂಪ್ಯೂಟ್ರಾಕ್ಸ್ ಸರ್ವಿಸ್” ಮಂಗಳೂರು ಇದರ ನಿರ್ದೇಶಕರಾಗಿದ್ದಾರೆ. ಪತ್ನಿ ಶ್ರೀಮತಿ ಪ್ರತಿಭಾ ನೇಮಿರಾಜ್ ಸ್ನಾತಕೋತ್ತರ ಪದವೀಧರೆಯಾಗಿದ್ದು ಎಂ.ಫಿಲ್ ಪದವಿ ಪಡೆದಿರುತ್ತಾರೆ. ಪ್ರಸಕ್ತ ಎಂ.ಬಿ.ಎ. ಅಭ್ಯಾಸ ಮಾಡುತ್ತಿರುವ ಇವರು ಮಂಗಳೂರಿನ ಆದರ್ಶ ಕಾಲೇಜಿನ ಅಧ್ಯಕ್ಷರಾಗಿರುವರು. ಪುತ್ರಿ ನೇಹಲ್ ಮಂಗಳೂರು ಲೂರ್ಡ್ಸ್ ಪದವಿಪೂರ್ವ ಕಾಲೇಜಿನಲ್ಲಿ I PUC ವಿದ್ಯಾರ್ಥಿನಿಯಾಗಿದ್ದು, ಅಂತರ್‌ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಪಟುವಾಗಿರುವ ಬಹುಮುಖ ಪ್ರತಿಭಾವಂತೆ. ಕೂಚಿಪುಡಿ ನೃತ್ಯವನ್ನು ಸ್ಕೇಟಿಂಗ್‌ಗೆ ಅಳವಡಿಸಿ ಪ್ರಸ್ತುತ ಪಡಿಸುವ ಅಪೂರ್ವ ಕಲಾವಿದೆ.
ನೇಮಿರಾಜರ ಅಧ್ಯಕ್ಷ ಅವಧಿಯಲ್ಲಿ ಜರುಗಿದ ಚಟುವಟಿಕೆಗಳು: ವಿದ್ಯೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಾಜದ ದಾನಿಗಳಿಂದ ಸಂಗ್ರಹಿಸಿದ ಮತ್ತು ಬಿಲ್ಲವಾಸ್ ದುಬಾಐ ವತಿಯಿಂದ ಕೊಡಲ್ಪಟ್ಟ ದೇಣಿಗೆಗಳನ್ನು ಸಮಾಜದ ಅರ್ಹ ಬಡ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ವಿವಿಧ ಘಟಕಗಳ ಮುಖಾಂತರವೂ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯ ಸಹಾಯ ಧನವನ್ನು ವಿತರಿಸಲಾಯಿತು. ಯುವಜನತೆಗಾಗಿ ಉಡುಪಿಯ ತರಬೇತಿ ಸಂಸ್ಥೆ ಮತ್ತು ಸ್ವ- ಉದ್ಯೋಗ ಮಾಹಿತಿ ಕೇಂದ್ರದ ವತಿಯಿಂದ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉಡುಪಿ ಜಿಲ್ಲಾ ಮಟ್ಟದ ಗುರು ಸಂದೇಶ ಜಾಥಾದಲ್ಲಿ ಯುವವಾಹಿನಿ ಸಕ್ರಿಯವಾಗಿ ಭಾಗವಹಿಸಿ ಜಾಥಾ ಮತ್ತು ಸಮಾವೇಶ ಯಶಸ್ವಿಯಾಗುವಲ್ಲಿ ಸಹಕರಿಸಿದೆ.
ವಿಳಾಸ : ತೇಜೋಗ್ರಹ, ಲಾಲ್‌ಬಹದ್ದೂರು ಶಾಸ್ತ್ರಿ ನಗರ, ಕುಲಶೇಖರ ಅಂಚೆ, ಮರೋಳಿ, ಮಂಗಳೂರು – 575005 ಮೊಬೈಲ್: 9448132243