ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ನಾರಾಯಣಗುರುಗಳ ತತ್ವಸಂದೇಶ ಸಾರ್ವಕಾಲಿಕ ಹಾಗೂ ಅಜರಾಮರ : ಜಯಂತ್ ನಡುಬೈಲು.

ಪಣಂಬೂರು:- ಹಿಂದುಳಿದ ವರ್ಗಗಳಿಗೆ ದೈರ್ಯ ತುಂಬಿ ಅವರ ಬದುಕಿನಲ್ಲಿ ಭರವಸೆ ಬೆಳಕು ಕಾಣಲು ಕಾರಣರಾಗಿದ್ದ ಬ್ರಹ್ಮಶ್ರೀನಾರಾಯಣಗುರುಗಳ ತತ್ವ ಸಂದೇಶ ಸಾರ್ವಕಾಲಿಕ ಮತ್ತು ಅಜರಾಮರವಾಗಿದ್ದು, ಇಂದಿನ ದಿನಗಳಲ್ಲಿ ತತ್ವ ಸಂದೇಶಗಳನ್ನು ಮನೆ ಮನೆಗೆ ತಲುಪಿಸಿ, ಯುವಕರಲ್ಲಿ ಜಾಗ್ರತಿಯನ್ನು ಮೂಡಿಸಿ ಮುಂದಿನ ಪೀಳಿಗೆಗೆ ತತ್ವ ಸಂದೇಶಗಳನ್ನು ತಿಳಿಸಿ ಹೇಳುವ ಕಾರ್ಯಕ್ರಮಗಳನ್ನು ಸಂಯೋಜಿಸಿದ ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕದ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂದು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಹೇಳಿದರು.
ದಿನಾಂಕ 18.11.2018ನೇ ರವಿವಾರದಂದು ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಸಭಾಂಗಣದಲ್ಲಿ ಕುಳಾಯಿ ಸುಬ್ಬಮನೆ ಲಿಂಗಪ್ಪ ಕರ್ಕೇರ ವೇದಿಕೆಯಲ್ಲಿ ಬಿಲ್ಲವ ಸಮಾಜ ಹಾಗೂ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯುವವಾಹಿನಿ (ರಿ) ಪಣಂಬೂರು ಘಟಕವು ಇನ್ನು ಮುಂದೆ ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಎಂದು ಕರೆಯಲ್ಪಡುವ ವಿಷಯವಾಗಿ ಸಂತಸ ವ್ಯಕ್ತಪಡಿಸಿದರು. ಯುವವಾಹಿನಿ ಕಾರ್ಯಕ್ರಮಗಳಲ್ಲಿ ಕೆಲವೊಂದು ಪ್ರಥಮಗಳನ್ನು ನೀಡಿದ ಘಟಕವು ನಡೆಸಿದ ಈ ನೂತನ ಕಾರ್ಯಕ್ರಮವು ಯವವಾಹಿನಿಗೆ ಒಂದು ಹೊಸ ಮೈಲಿಗಲ್ಲಾಗಿದ್ದು ಎಲ್ಲಾ ಘಟಕಗಳಲ್ಲಿಯೂ ಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಪ್ರಚಾರ ಪ್ರತೀ ಮನೆ ಮನೆಗೆ ತಲುಪಿಸುವ ಕೆಲಸವಾದರೆ ಉತ್ತಮವೆಂದರು. ಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನ ನಿರ್ದೇಶಕರಾದ ಪಣಂಬೂರು ಘಟಕದ ಸಂಜೀವ ಸುವರ್ಣ ದಿನಕ್ಕೊಂದರಂತೆ ಗುರು ಸಂದೇಶವನ್ನು ವಾಟ್ಸಾಪ್ ಮುಖೇನ ಕಳುಹಿಸುತ್ತಿರುವುದು ಬಹಳ ಉಪಯುಕ್ತವಾಗಿದೆ ಎಂದು ಅಬಿನಂದಿಸಿದರು.

ಯುವವಾಹಿನಿ (ರಿ) ಪಣಂಬೂರು – ಕುಳಾಯಿ ಘಟಕದ ಅಧ್ಯಕ್ಷ ಜಗದೀಶ್ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.


ಪ್ರಥಮವಾಗಿ ಪ್ರಾರ್ಥನೆಯೊದಿಗೆ ಪ್ರಾರಂಭವಾಗಿ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಇದರ ಉಪಾಧ್ಯಕ್ಷರಾದ ಸೋಮಪ್ಪ ಡಿ ಪಾಲನ್ ಇವರು ಸಭಾ ಕಾರ್ಯಕ್ರಮವನ್ನು ನಾರಾಯಣಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಯುವವಾಹಿನಿಯ ನೂತನ ಚಿಂತನೆ ಮತ್ತು ಕಾರ್ಯಕ್ರಮಕ್ಕೆ ಸಂತಸ ವ್ಯಕ್ತಪಡಿಸಿದರು. ನಾರಾಯಣಗುರುಗಳ ತತ್ವಾದರ್ಶದಲ್ಲಿ ಮುನ್ನಡೆದರೆ ಮನಃಶಾಂತಿ , ಸಾಮರಸ್ಯ ಹಾಗೂ ಯಶಸ್ಸು ಲಭಿಸುವುದೆಂದು ತಿಳಿಸಿದರು. ಘಟಕದ ಸರ್ವ ಸದಸ್ಯರನ್ನು ಅಭಿನಂದಿಸುತ್ತಾ ಎಲ್ಲರಿಗೂ ಶ್ರೇಯಸ್ಸಾಗಲೆಂದು ಹರಸಿದರು.
ಈ ಕಾರ್ಯಕ್ರಮದ ಅಂಗವಾಗಿ ಮನೆ ಮನೆ ಬೇಟಿ ನಡೆಸಿದ್ದು ಶ್ರೀ ಗುರುಗಳ ಭಾವಚಿತ್ರವೇ ಇರದ 150 ಮನೆಗಳಿಗೆ ಶ್ರೀ ಗುರುಗಳ ಭಾವಚಿತ್ರವನ್ನು ನೀಡುವ ನಿರ್ಣಯಕ್ಕೆ ಅನುಗುಣವಾಗಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಬಿಡುಗಡೆಯನ್ನು ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಜಯಂತ್ ನಡುಬೈಲು ನೆರವೇರಿಸಿದರು. ಸಾಂಕೇತಿಕವಾಗಿ 10 ಮನೆಯವರಿಗೆ ಭಾವಚಿತ್ರವನ್ನು ವಿತರಿಸಿದರು.
ಕ್ರೀಡಾ ಕ್ಷೇತ್ರದ ಪ್ರತಿಭಾವಂತ ವಿಧ್ಯಾರ್ಥಿಗಳಾದ ಕು.ಪ್ರೇಕ್ಷಾ ಪಿ ಕ್ರಕೇರ, ಕು. ಅನನ್ಯ ಸನಿಲ್, ಕು. ದೇವಿಕಾ ಜಿ.ಕೆ ಮತ್ತು ಮಾ ಶಶಾಂಕ್ ಇವರನ್ನು ಪುರಸ್ಕರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ಣಾಟಕ ಸರಕಾರದ ದಾರ್ಮಿಕ ಪರಿಷತ್ತು ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡಿ ಶ್ರೀಗುರುಗಳ ಆದರ್ಶ ಮಾರ್ಗದರ್ಶನವನ್ನು ಮಾನವರೆಲ್ಲರೂ ಅರ್ಥೈಸಿಕೊಳ್ಳಬೇಕು. ಈ ತತ್ವಾದರ್ಶಗಳು ಅಜರಾಮರವಾಗಿದ್ದು ಮಾನವನ ಆಧುನಿಕ ಬದುಕಿಗೆ ಅತಿ ಅವಶ್ಯವಾಗಿದೆ. ಈ ದಿಸೆಯಲ್ಲಿ ಸಂಘಗಳಿಗೆ, ವಿವಿಧ ದಾರ್ಮಿಕ ಸಂಸ್ಥೆಗಳಿಗೆ ಕರ್ಣಾಟಕ ಸರಕಾರದ ವತಿಯಿಂದ ತನ್ನ ಅಧಿಕಾರದ ಅವದಿಯಲ್ಲಿ ಈಗಾಗಲೇ ಸುಮಾರು 3.8 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು ಇನ್ನು ಕೂಡ ಅನುದಾನ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಕುಳಾಯಿ ಪರಿಸರದ 7 ಮಂದಿ ಶಿಕ್ಷಕಿಯರಾದ ಮಮತಾ, ಸುಜಾತ ಕೇಶವ, ಸುರೇಖಾ, ಚಿತ್ರಾ ಜಗದೀಶ್, ಸುಜಾತ, ಜಯಲಕ್ಮಿ ಮತ್ತು ನಿಶಿತಾ ಆರ್ ಕರ್ಕೇರ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಊರಿನ ಪ್ರಮುಖರಾದ ಎಂ ಟಿ ಸಾಲ್ಯಾನ್ ರವರು ಅಭಿಪ್ರಾಯವನ್ನು ಮಂಡಿಸುತ್ತಾ ಯುವವಾಹಿನಿಯವರು ಹಮ್ಮಿಕೊಡ ಈ ಕಾರ್ಯಕ್ರಮದಡಿ ಶ್ರೀ ಗುರುಗಳ ಆದರ್ಶ, ಅವರ ಸಾಧನೆ, ಬೋದನೆಗಳನ್ನು ಸಮಾಜದ ಮನೆ ಮನೆಗೆ ತಲುಪಿಸುವ ಪುಣ್ಯದ ಕೆಲಸವಾಗಿದೆ. ತನ್ನ ಮನೆಯ ವಠಾರದಲ್ಲಿಯೂ ಈ ಕಾರ್ಯಕ್ರಮ ನಡೆದು ಸುತ್ತ ಮುತ್ತಲಿನ ನಮ್ಮ ಸಮಾಜ ಬಾಂಧವರಿಗೆ ಶ್ರೀ ಗುರುಗಳ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಲಾಗಿದೆ. ಇದು ಒಂದು ಅತ್ಯಂತ ಮುಖ್ಯವಾದ ಮತ್ತು ಫಲಪ್ರದ ಕಾರ್ಯಕ್ರಮವಾಗಿ ಮೂಡಿ ಬಂದಿರುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಾಗೂ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದ ಸರಣಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ರಾಜೀವ ಪೂಜಾರಿ ನಾರಾಯಣಗುರುಗಳ ತತ್ವ ಧ್ಯೇಯದ ಬಗ್ಗೆ ತಿಳಿಸಿ ಹೇಳಿದರು.
ಕೇಂದ್ರ ಸಮಿತಿಯ ತತ್ವಾದರ್ಶಗಳ ಪ್ರಚಾರ ನಿರ್ದೇಶಕರಾದ ಸಂಜೀವ ಸುವರ್ಣರವರು ಮಾತನಾಡಿ ನಾರಾಯಣಗುರುವರ್ಯರ ತತ್ವ ಸಂದೇಶವನ್ನು ದಿನದಲ್ಲಿ ಒಂದು ಸಲ ಮಕ್ಕಳಿಗೆ ತಿಳಿಯ ಪಡಿಸಬೇಕು ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಘಟಕದ ಕಾರ್ಯದರ್ಶಿ ರಾಜೇಶ್, ಸಂಚಾಲಕರಾದ ಸದಾಶಿವ ಅಂಚನ್ ಸ್ಥಳಿಯರಾದ ದೀಪಕ್ ಕುಳಾಯಿ, ತುಕಾರಾಮ ಕರ್ಕೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷರಾದ ಜಗದೀಶ ಸುವರ್ಣ ಸ್ವಾಗತಿಸಿ ಎಲ್ಲರನ್ನೂ ಅಭಿನಂದಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿಯವರು ಪ್ರಸ್ತಾವನೆಗೈದರು. ಸದಸ್ಯರಾದ ಸಂದೀಪ್. ಬಿ. ವಂದಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ರವಿಚಂದ್ರ ಮತ್ತು ವಿಶ್ವನಾಥ. ಕೆ. ಕಾರ್ಯಕ್ರಮ ನಿರೂಪಿಸಿದರು.

One thought on “ನಾರಾಯಣಗುರುಗಳ ತತ್ವಸಂದೇಶ ಸಾರ್ವಕಾಲಿಕ ಹಾಗೂ ಅಜರಾಮರ : ಜಯಂತ್ ನಡುಬೈಲು.

  1. ಗುರುಗಳ ಸಂದೇಶ ನಿರಂತರ ಪ್ರತಿಯೊಬ್ಬರಿಗೂ ತಲುಪಲಿ….

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!