ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ಸಂಪಾದಕೀಯ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ 24 ಕ್ರಿಯಾಶೀಲ ಘಟಕಗಳು ಹಾಗೂ ಕೇಂದ್ರ ಸಮಿತಿ ನಿರಂತರವಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಈ ಎಲ್ಲಾ ಕಾರ್ಯಕ್ರಮಗಳನ್ನು ಜಗತ್ತಿಗೆ ತಿಳಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದ ಅನುಕೂಲತೆಯನ್ನು ಬಳಸಿಕೊಂಡು yuvavahini.in ವೆಬ್ಸೈಟ್ ಅನಾವರಣಗೊಳಿಸಲಾಗಿದೆ.
ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೂ ಯುವವಾಹಿನಿಯಲ್ಲಿ ಘಟಿಸುವ, ಸಭೆ, ಸಮಾರಂಭ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಚಟುವಟಿಕೆಗಳ ಮಾಹಿತಿಯನ್ನು ಯಥಾವತ್ತಾಗಿ ನಿಮ್ಮ ಮುಂದಿಡುವ ಉದ್ದೇಶ yuvavahini.in ಸಂಪಾದಕೀಯ ಮಂಡಳಿಗಿದೆ
ವೆಬ್ಸೈಟ್ ಕ್ಷಣ ಕ್ಷಣದ ಬೆಳವಣಿಗೆಯಲ್ಲಿ ಸೂಕ್ತ ಸಲಹೆ ಸೂಚನೆ ಮಾರ್ಗದರ್ಶನ ನೀಡುತ್ತಿರುವ ಗೌರವ ಸಂಪಾದಕರಾದ ಪದ್ಮನಾಭ ಮರೊಳಿ, ಉಪಸಂಪಾದಕರಾದ ಗಂಗಾಧರ ಪೂಜಾರಿ, ಸದಸ್ಯರಾದ ನರೇಶ್ ಕುಮಾರ್ ಸಸಿಹಿತ್ಲು, ದಿನಕರ ಡಿ. ಬಂಗೇರ, ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರುಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು.
ಆರ್ಥಿಕ ನೆರವು ದಾನಿಗಳು ಹಾಗೂ ಜಾಹೀರಾತುದಾರರಿಗೆ ತುಂಬು ಹೃದಯದ ನಮನಗಳು.
ಜಾಲತಾಣದ ಬೆಳವಣಿಗೆಯಲ್ಲಿ ತಮ್ಮ ಬೆಂಬಲ ನಿರೀಕ್ಷಿಸುತ್ತಿದ್ದೇನೆ. ಮಾಹಿತಿ, ಸಲಹೆಗಳಿಗೆ ಸದಾ ಸ್ವಾಗತ.
ಇಂತೀ ನಿಮ್ಮವ
ರಾಜೇಶ್ ಸುವರ್ಣ
ಸಂಪಾದಕರು
yuvavahini.in