ಧನಾತ್ಮಕ ಚಿಂತನೆಯಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ, ಕೆಟ್ಟದನ್ನು ತ್ಯಜಿಸಿ ಒಳ್ಳೆಯದನ್ನು ಮೈಗೂಡಿಸಿಕೊಂಡು ಬಂದಂತೆಲ್ಲಾ ಸಮಾಜದಲ್ಲಿ ಗೌರವ ಅರಸಿಕೊಂಡು ಬರುತ್ತದೆ. ಎಂದು ಜೇಸಿಐ ರಾಷ್ತ್ರೀಯ ತರಬೇತುದಾರರಾದ ಅರುಣಾ ಎಸ್. ಐತಾಳ್ ತಿಳಿಸಿದರು
ದಿನಾಂಕ 15.10.2017 ರಂದು ಯುವವಾಹಿನಿ (ರಿ) ಕೊಲ್ಯ ಘಟಕದ ಆಶ್ರಯದಲ್ಲಿ ,ಕೊಲ್ಯ ನಾರಾಯಣಗುರು ಸೇವಾ ಸಂಘ, ಕೊಲ್ಯ ರೋಟರಿ ಸಸಮುದಾಯ ದಳ ,ಹಾಗು ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘ ಇದರ ಸಹಯೋಗದೊಂದಿಗೆ ಕೊಲ್ಯ ನಾರಾಯಣಗುರು ಸಭಾಂಗಣದಲ್ಲಿ ಜರುಗಿದ ನಾಯಕತ್ವ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ಸುರೇಶ್ , ಕೊಲ್ಯ ಬಿಲ್ಲವ ಸಂಘದ ಅಧ್ಯಕ್ಷರಾದ ಈಶ್ವರ ಕನೀರುತೋಟ , ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಗಟ್ಟಿ , ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಂಘದ ಅಧ್ಯಕ್ಷರಾದ ಹೇಮಲತಾ ಎಸ್ .ಕರ್ಕೇರಾ, ಯುವವಾಹಿನಿ ಕೊಲ್ಯ ಘಟಕದ ಸಲಹೆಗಾರರಾದ ತುಕಾರಾಮ್ ಎನ್ ಮತ್ತಿತರರು ಉಪಸ್ಥಿತರಿದ್ದರು