ವೇಣೂರು :- ಯುವವಾಹಿನಿ (ರಿ.) ವೇಣೂರು ಘಟಕ ಮತ್ತು ಬ್ರಹ್ಮ ಶ್ರೀಗುರು ನಾರಾಯಣ ಸೇವಾ ಸಂಘ (ರಿ) ವೇಣೂರು ಇದರ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇಲ್ಲಿ ದೇವಾಲಯದ ಜೀರ್ಣೋದ್ಧಾರ ಕೆಲಸ ಕಾರ್ಯಗಳ ನಿಮಿತ್ತ ದಿನಾಂಕ 29 ಜೂನ್ 2022ನೇ ಬುಧವಾರ ಸಂಜೆ ಗಂಟೆ 6 ರಿಂದ ಕರ ಸೇವೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವೇಣೂರು ಘಟಕದ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು, ಯುವವಾಹಿನಿ ಕೇಂದ್ರ ಸಮಿತಿ (ರಿ.) ಮಂಗಳೂರು ಇದರ ಕ್ರೀಡಾ ಮತ್ತು ಅರೋಗ್ಯ ನಿರ್ದೇಶಕರಾದ ನವೀನ್ ಪೂಜಾರಿ ಪಚ್ಚೇರಿ, ವೇಣೂರು ಘಟಕದ ಉಪಾಧ್ಯಕ್ಷರಾದ ಸತೀಶ್ ಪಿ ಯನ್, ನಿಕಟ ಪೂರ್ವ ಅಧ್ಯಕ್ಷರಾದ ಅರುಣ್ ಪೂಜಾರಿ,ಬೆಳ್ತಂಗಡಿ ಯುವ ಬಿಲ್ಲವ ಅಧ್ಯಕ್ಷರಾದ ನಿತೀಶ್ ಯಚ್, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕುಮಾರ್ ಪೊಕ್ಕಿ, ವೇಣೂರು ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಕ್ಕೇಡಿ ಹಾಗೂ ಘಟಕದ ಸರ್ವ ಸದಸ್ಯರು ಕರಸೇವಾ ಕೆಲಸದಲ್ಲಿ ಭಾಗಿಯಾಗಿದ್ದರು. ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ರಾವ್ ಎಲ್ಲರಿಗೂ ಧನ್ಯವಾದಗೈದರು.