ಯುವವಾಹಿನಿ ಉಪ್ಪಿನಂಗಡಿ ಘಟಕ ಮತ್ತು ಮುಗ್ಗಗುತ್ತು ಕಟುಂಬಸ್ಥರ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ತುಳುನಾಡ ತುಡರ್ ಪರ್ಬ ಮುಗ್ಗಗುತ್ತು ತರವಾಡು ಮನೆಯಲ್ಲಿ ನಡೆಯಿತು. ಬಲೀಂದ್ರ ಪೂಜೆಯನ್ನು ನೆರವೇರಿಸಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಬಲೀಂದ್ರ ಪೂಜೆಯ ಹಿನ್ನಲೆ ಮತ್ತು ಮಹತ್ವವನ್ನು ಶೇಖರ್ ಪೂಜಾರಿ ಶಿಬಾರ್ಲ ತಿಳಿಸಿಕೊಟ್ಟರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಶ್ರೀ ಕೆ. ಜಿ ಬಂಗೇರ ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಆಶಿತ್ ಎಂ. ವಿ ವಹಿಸಿದ್ದರು..
ಮುಖ್ಯ ಅತಿಥಿಗಳಾಗಿ ಶ್ರೀ ಕೆ ವಸಂತ ಬಂಗೇರ ಮಾಜಿ ಶಾಸಕರು, ಪ್ರಭಾಕರ ಬಂಗೇರ ಮಾಜಿ ಶಾಸಕರು, ನರೇಶ್ ಕುಮಾರ್ ಸಸಿಹಿತ್ಲು ಅಧ್ಯಕ್ಷರು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು, ಡಾಕ್ಟರ್ ರಾಜಾರಾಮ್ ಕೆ.ಬಿ, ವರದರಾಜ್ ಎಂ ಮತ್ತು ಇತರ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಗ್ಗಗುತ್ತು ಅಣ್ಣಿ ಪೂಜಾರಿ ದಂಪತಿಗಳು, ಮುಗ್ಗಗುತ್ತು ಮನೆಯ ಹಿರಿಯ ಮುತ್ಸದ್ಧಿ ಕೆ.ಜಿ.ಬಂಗೇರ ಮತ್ತು ಪದ್ಮನಾಭ ಮಾಣಿ೦ಜ ಇವರನ್ನು ಸನ್ಮಾನಿಸಲಾಯಿತು.
ಯುವವಾಹಿನಿ ಉಪ್ಪಿನಂಗಡಿ ಘಟಕ (ರೂಪಾಯಿ10000) ಮತ್ತು ಶ್ರೀ ಕೆ ವಸಂತ ಬಂಗೇರ ಮಾಜಿ ಶಾಸಕರು,(ರೂಪಾಯಿ 9000) ಇವರ ಸಹಕಾರದಿಂದ ಆರ್ಥಿಕವಾಗಿ ಹಿಂದುಳಿದ *ಜಯಂತಿ ಮತ್ತು ಜನಾರ್ಧನ ಪೂಜಾರಿ ಇವರಿಗೆ ಸಹಾಯ ಧನ ವನ್ನು ವಿತರಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ 2019 ಪಡೆದ ನರೇಶ್ ಕುಮಾರ ಸಸಿಹಿತ್ಲು ಇವರನ್ನು ಅಭಿನಂದಿಸಲಾಯಿತು..
ಕುಮಾರಿ ಕವಿತಾ ಕೋಟ್ಯಾನ್ ಮತ್ತು ತೇಜಸ್ವಿನಿ ಪ್ರಾರ್ಥಿಸಿದರು. ಡಾಕ್ಟರ್ *ಆಶಿತ್ ಎಂ ವಿ ಸ್ವಾಗತಿಸಿ, ಪುನೀತ್ ದಾಸರಮೂಲೆ ವಂದಿಸಿದರು. ಲೋಕೇಶ್ ಬೆತೋಡಿ, ಮನೋಹರ್ ಕುಮಾರ್ ಮತ್ತು ಅಶೋಕ್ ಪಡ್ಪು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರುವಲ್ಲಿ ಗುಣಕರ ಅಗ್ನಡಿ ಮುತುವರ್ಜಿಯಲ್ಲಿ, ಯುವವಾಹಿನಿ ಸದಸ್ಯರು, ಮುಗ್ಗಗುತ್ತು ಕುಟುಂಬಸ್ಥರು, ಹಾಗೂ ಊರವರು ಸಹಕರಿಸಿದರು.