ಹೆಜಮಾಡಿ : ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಅನೇಕ ಸಾಂಪ್ರದಾಯಿಕ ಆಚರಣೆಗಳಿದ್ದು, ಇಂದಿನ ಆಧುನಿಕ ಯುಗದಲ್ಲಿ ಅನೇಕ ಆಚರಣೆಗಳು ಕಡಿಮೆಯಾಗುತ್ತುದ್ದು, ಅವುಗಳ ಉಳಿವಿಗೆ ಯುವಜನರು ಮತ್ತು ಯುವ ಸಂಘಟನೆಗಳು ಶ್ರಮವಹಿಸಿ, ಸಾಮೂಹಿಕ ಆಚರಣೆಗಳ ಮೂಲಕ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಬಹುದೆಂದು ಭಾರತ್ ಕೋ.ಆಪರೇಟಿವ್ ಬ್ಯಾಂಕ್, ಮುಂಬಯಿಯ ಮಾಜಿ ಅಧ್ಯಕ್ಷ, ಹೆಜಮಾಡಿ ಬಿಲ್ಲವ ಸಂಘದ ನವೀಕರಣದ ರೂವಾರಿ ವಾಸುದೇವ ಆರ್.ಕೋಟ್ಯಾನ್ ತಿಳಿಸಿದರು.
ಅವರು ದಿನಾಂಕ 20.11.2018 ರಂದು ಹೆಜಮಾಡಿ ಬಿಲ್ಲವ ಸಂಘದಲ್ಲಿ ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಜರುಗಿದ ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಕಾರ್ಯಕ್ರಮ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷ ದಿನೇಶ್ ಹೆಜಮಾಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಹೆಜಮಾಡಿಯ ಪುರೋಹಿತರಾದ ಹರಿದಾಸ್ ಭಟ್, ಮುಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರೊ.ಶ್ಯಾಮ್ ಮಾಬೆನ್, ಹೆಜಮಾಡಿ ಎಸ್.ಎಸ್.ರೋಡ್ ಮಸೀದಿಯ ಮುಸ್ಲಿಯಾರ್ ಅಬುಬ್ಬಕ್ಕರ್ ಹೆಜಮಾಡಿ, ಬಿಲ್ಲವ ಸಂಘ ಮುಂಬಯಿ ಸಮಿತಿಯ ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೈದಿಕ ವಿಧಿ ವಿಧಾನಗಳ ಮೂಲಕ ಅರ್ಚಕ ಹರೀಶ್ ಶಾಂತಿ ತುಳಸಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಕಾರ್ಕಳ ಪುರಸಭೆಯ ಚುನಾಯಿತ ಸದಸ್ಯೆ ಭಾರತಿ ಹೆಜಮಾಡಿ ಇವರನ್ನು ಅಭಿನಂದಿಸಲಾಯಿತು. ಹಾಗೂ ರಾಜ್ಯ ಮಟ್ಟದ ಕರಾಟೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯುವವಾಹಿನಿ (ರಿ) ಹೆಜಮಾಡಿ ಘಟಕದ ಮಾಜಿ ಅಧ್ಯಕ್ಷ ಶಿವರಾಮ.ಜಿ.ಅಮೀನ್ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ, ಬಿಲ್ಲವ ಸಂಘದ ಕೋಶಾಧಿಕಾರಿ ಪ್ರಬೋದ್ ಚಂದ್ರ ಪ್ರಸ್ತಾಪವನ್ನು ಮಾಡಿದರು. ಕಾರ್ಯದರ್ಶಿ ಜಯಶ್ರೀ ಸದಾಶಿವ, ನಿರ್ದೇಶಕ ಕಿರಣ್ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕದ ಮಹಿಳಾ ಸದಸ್ಯರು ಪ್ರಾರ್ಥನೆ ಮಾಡಿದರು. ಮನೋಹರ್ ಹೆಜಮಾಡಿ ಹಾಗೂ ಧೀರಜ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.