ಉಡುಪಿ: ಯುವವಾಹಿನಿ (ರಿ) ಉಡುಪಿ ಘಟಕದ ಅತ್ಯಂತ ಪ್ರಶಂಸನೀಯ ಯೋಜನೆಗಳಲ್ಲಿ ಒಂದಾದ ತಲೆಗೊಂದು ಸೂರು ಯೋಜನೆಯಡಿ ನಿರ್ಮಾಣಗೊಂಡ ಅಂದಾಜು ಹತ್ತು ಲಕ್ಷ ವೆಚ್ಚದ ಮನೆಯನ್ನು ದಿನಾಂಕ 23-11-2024 ರಂದು ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಹರೀಶ್.ಕೆ.ಪೂಜಾರಿಯವರ ಗೌರವ ಉಪಸ್ಥಿತಿಯಲ್ಲಿ ಫಲಾಕಾಂಕ್ಷಿಗೆ ಹಸ್ತಾಂತರಿಸಲಾಯಿತು.
ಉದ್ಯಾವರ ಸಂಪಿಗೆ ನಗರದ ನಿವಾಸಿ, ಇಬ್ಬರು ಹೆಣ್ಣು ಮಕ್ಕಳ ತಾಯಿ ಶ್ರೀಮತಿ ಲತಾ ಸುರೇಶ್ ಈ ಬಾರಿಯ ಫಲಾಕಾಂಕ್ಷಿ. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರವೀಣ್.ಎಂ.ಪೂಜಾರಿಯವರು ಗಣ್ಯಾತಿ ಗಣ್ಯರ, ದಾನಿಗಳ, ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳ, ಯುವವಾಹಿನಿ (ರಿ) ಉಡುಪಿ ಘಟಕದ ಸದಸ್ಯರ, ಮಾಜಿ ಅಧ್ಯಕ್ಷರುಗಳ, ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮನೆಯ ಕೀಲಿಕೈಯನ್ನು ಶ್ರೀಮತಿ ಲತಾ ಸುರೇಶ ಅವರಿಗೆ ಹಸ್ತಾಂತರಿಸಿದರು.
ಲೋಕಾಯುಕ್ತ ಇಲಾಖೆಯ ಇನ್ಸ್ಪೆಕ್ಟರ್ ಶ್ರೀ ಮಂಜುನಾಥ್, ತಲೆಗೊಂದು ಸೂರು ಯೋಜನೆಯ ಸಂಚಾಲಕರಾದ ರಘುನಾಥ್ ಮಾಬಿಯಾನ್, ಘಟಕದ ಅಧ್ಯಕ್ಷರಾದ ಶ್ರೀಮತಿ ಅಮಿತಾಂಜಲಿ ಕಿರಣ್ ಉಪಸ್ಥಿತರಿದ್ದರು.