ರವಿರಾಜ್ ಅಜ್ರಿ :-ವಿಶುಕುಮಾರ್ ಎಂಬ ಬರಹಗಾರನ ಕಥೆ-9

ತನ್ನ ಕುಟುಂಬದ ಬಗ್ಗೆಯೇ ನಾಟಕದ ರಚನೆ!!! ವಿಶುಕುಮಾರ್ ಹೀಗೊಂದು ನೆನಪು

ವಿಶುಕುಮಾರ್ ತನ್ನ 30 ನೇ ವಯಸ್ಸಿನಲ್ಲಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕ ಗೊಳ್ಳುತ್ತಾರೆ. ಅದು 1965 ನೇ ಇಸವಿ. ಅದಕ್ಕಿಂತ ಮೊದಲು ಅವರು ನಾಡಿನ ಪತ್ರಿಕೆಗಳಿಗೆ ಕಥೆಗಳು, ಲೇಖನಗಳನ್ನು ಬರೆಯುತ್ತಿದ್ದರು. ಈ ನಡುವೆ ಕೆಲವು ನಾಟಕಗಳನ್ನು ಬರೆದು, ನಿರ್ದೇಶಿಸಿ, ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರೂ ಕೂಡ. ಕಥೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಾವು ಹೇಳಿದ್ದೇವೆ. ಈ ಮಾಲೆಯಲ್ಲಿ ನಾಟಕ, ಲೇಖನಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ.ಅವರ ಲೇಖನಗಳು ಹೆಚ್ಚಾಗಿ ತುಳುನಾಡಿನ ಸಂಸ್ಕೃತಿ, ಪುರಾತನ ದೇವಾಲಯಗಳು, ಇತಿಹಾಸವನ್ನು ತಿಳಿಯುವ ಪ್ರಸಿದ್ಧ ಸ್ಥಳಗಳ ಪರಿಚಯದ ವಸ್ತುಗಳಾಗಿವೆ. 1956 ರಲ್ಲಿ ‘ ಪ್ರಜಾಮತ‘ ದಲ್ಲಿ ಒಂದು ಲೇಖನ ಬರೆದಿದ್ದರು. ಯಕ್ಷಗಾನದಲ್ಲಿ ರಾತ್ರಿ ಪ್ರದರ್ಶನ ಮತ್ತು ಅದರಲ್ಲಿ ನೃತ್ಯಕ್ಕಾಗಿ ಮಹಿಳೆಯರನ್ನು ಬಳಸುವುದು ಸರಿಯಲ್ಲವೆಂದು ಕಟುವಾಗಿ ಟೀಕಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈರ್ವರು ಗೋಮಟೇಶ್ವರರು” ( ವೇಣೂರು- ಕಾರ್ಕಳ) ಎಂಬ ಲೇಖನವನ್ನು 6.10.1963 ರಲ್ಲಿ ಪ್ರಜಾವಾಣಿಯಲ್ಲಿ ಬರೆದಿದ್ದರು. ಕಾರ್ಕಳ ಹಾಗೂ ವೇಣೂರಿನ ಇತಿಹಾಸ ಆ ಲೇಖನದಲ್ಲಿ ಪ್ರಕಟವಾಗಿತ್ತು. ‘ ತುಳುವರಾಳಿದ ನೆಲ ಬೇಕಲ- ಕಾಂಞಂಗಾಡು ‘- ಲೇಖನ ಪ್ರಜಾವಾಣಿಯಲ್ಲಿ19.02.1967 ರಲ್ಲಿ ಪ್ರಕಟಗೊಂಡಿತು. ಕಾಂಞಂಗಾಡು ಮತ್ತು ಬೇಕಲದ ಇತಿಹಾಸ ಈ ಲೇಖನ ಬೆಳಕು ಚೆಲ್ಲುತ್ತದೆ. ‘ ಕರ್ನಾಟಕದ ಕೈಲಾಸವಿದು- ಶ್ರೀ ಕಾರಿಂಜೇಶ್ವರ ಶೈಲ ‘ – ಎಂಬ ಲೇಖನವೂ ಈ ಸಮಯದಲ್ಲೇ ಪ್ರಕಟಗೊಂಡಿದೆ.

20.08.1966 ರಲ್ಲಿ ಕರ್ಮವೀರದಲ್ಲಿ ಪ್ರಕಟಗೊಂಡ ‘ ಸಾವಿರಾರು ದೇವರುಗಳಿಗಿದು ಆಶ್ರಯ ಸ್ಥಾನ ‘ – ಲೇಖನದಲ್ಲಿ ಕಟೀಲು ದುರ್ಗಾಪರಮೇಶ್ವರಿ ; ಕುಡುಪು ಅನಂತಪದ್ಮನಾಭ ; ಮೂಡಬಿದರೆಯ ಸಾವಿರ ಕಂಬದ ಬಸದಿ ; ಕುಕ್ಕೆ ಸುಬ್ರಹ್ಮಣ್ಯ ; ಕದ್ರಿ ಮಂಜುನಾಥ – ಮುಂತಾದ ದೇವಾಲಯಗಳ ಪರಿಚಯವಿದೆ. ಹಾಗೇ 30.04.1969 ರಲ್ಲಿ ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ” ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಕೊಲ್ಲೂರಿನ ಮುಕಾಂಬಿಕೆ ” ಲೇಖನ ಪ್ರಕಟಗೊಂಡಿತು. ಐತಿಹಾಸಿಕ ಹಿನ್ನಲೆ, ಸ್ಥಳ ಪುರಾಣ ಬರೆದಿದ್ದಾರೆ. 1971 ರ ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ” ಅಳಿದುಳಿದ ಬಾರಕೂರು ” ಪ್ರಕಟಗೊಂಡಿತು.

ನಾಟಕಗಳ ಬಗ್ಗೆ …

ಶಾಲಾ ದಿನಗಳಲ್ಲೇ ವಿಶುಕುಮಾರ್ ಅವರು ನಾಟಕ ರಚನೆ ಮಾಡುತ್ತಿದ್ದರು. ಅಭಿನಯ ತಂದೆಯಿಂದ ಬಂದ ಬಳುವಳಿ. ಅವರು ಸಣ್ಣ ವಯಸ್ಸಿನಲ್ಲೇ ಯಕ್ಷಗಾನದಲ್ಲಿ ಕೋಡಂಗಿ, ದೇವಬಾಲ, ಬಾಲಗೋಪಾಲ, ಸಣ್ಣವಯಸ್ಸಿನ ಕೋಟಿ- ಚೆನ್ನಯರ ವೇಷ ಹಾಕಿ, ಅಭಿನಯಿಸಿದ್ದರು. ಯಾಕೋ ಏನೋ ಯಕ್ಷಗಾನ ಕಡೆಗಿದ್ದ ಅಭಿಮಾನ ಕ್ರಮೇಣ ಬರವಣಿಗೆ, ನಾಟಕ, ಕಾದಂಬರಿಗಳ ಕಡೆ ಹರಿಯಿತು.

ಶಾಲೆಯಲ್ಲಿ ‘ ಶಕುಂತಲಾ- ದುಷ್ಯಂತ‘- ನಾಟಕ ರಚಿಸಿ, ನಿರ್ದೇಶಿಸಿ- ಅದರಲ್ಲಿ ದುಷ್ಯಂತನ ಪಾತ್ರನಿರ್ವಹಿಸಿ ಬಹುಮಾನ ಕೂಡ ಪಡೆದಿದ್ದರು.ವಿಶುಕುಮಾರ್ ಅವರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ವಿ. ಜಿ. ಪಾಲ್ ( ವೇಣುಗೋಪಾಲ್) ಅವರೂ ಒಬ್ಬರು. ಅವರಿಬ್ಬರೂ ಬಾಲ್ಯ ಸ್ನೇಹಿತರು. ವಿಶುಕುಮಾರ್ ರ ಒಡನಾಟ, ನಾಟಕ, ರಂಗಭೂಮಿಯ ಬಗ್ಗೆ ಅನುಭವ ನಮ್ಮೊಡನೆ ಹಂಚಿಕೊಂಡದ್ದು ಹೀಗೆ :

” ಬೋಳೂರಿನಲ್ಲಿ ವಿಶುಕುಮಾರ್ ರ ತಂದೆ ‘ ನಿಸರ್ಗ ಫಲಾಹಾರ ಮಂದಿರ ‘ ಹೋಟೆಲ್ ನಡೆಸುತ್ತಿದ್ದರು. ತಿಂಡಿ ಮಾಡುವ ಜಾಗದಿಂದ ಸ್ವಲ್ಪ ದೂರದಲ್ಲಿ ಸಣ್ಣ ಖಾಲಿ ಮೈದಾನವಿದೆ. ನಮ್ಮ ನಾಟಕ ‘ ರಿಹರ್ಸಲ್ ‘ ಅಲ್ಲೇ ನಡೆಯುತ್ತಿತ್ತು. ನಾವು ‘ ಯುನೈಟೆಡ್ ಸ್ಪೋಟ್ಸ್ ಕ್ಲಬ್ ‘ ಮಾಡಿಕೊಂಡಿದ್ದೇವು. ಅದರಲ್ಲಿ ವಿಶುಕುಮಾರ್ ರ ಇತರ ಸ್ನೇಹಿತರಾದ ದಿ| ಸೋಮಶೇಖರ್ ಪುತ್ರನ್, ನಾನು, ವಿಶುಕುಮಾರ್ ರ ಸಹೋದರರಾದ ಮಧುಕುಮಾರ್ ಇರುತ್ತಿದ್ದೇವು ” ಎನ್ನುತ್ತಾರೆ ವಿ.ಜಿ.ಪಾಲ್. ಮತ್ತೆ ಅವರು ಮಾತು ಮುಂದುವರಿಸಿದರು: ” ವಿಶುಕುಮಾರ್ ರ ‘ ಕಲ್ಜಿಗದ ಕರುಕ್ಷೇತ್ರ ‘ ತುಳುನಾಟಕ ( ನಿರ್ದೇಶನ ಸೋಮಶೇಖರ್ ಪುತ್ರನ್) ಅದರಲ್ಲಿ ನಾನೊಂದು ಪಾತ್ರ ಮಾಡಿದ್ದೆ. 1961 ರಲ್ಲಿ ಆ ನಾಟಕದ ರಂಗಪ್ರವೇಶ ” ಎಂದು ಹೇಳಿದರು. ವಿಶುಕುಮಾರ್ ರು ಸಮಾಜದ ಅಸಂಗತದ ಮುಖಗಳನ್ನು ರಂಗಕ್ಕೆ ತರುವ ಪ್ರಯತ್ನ ಮಾಡುತ್ತಿದ್ದರು.

ವಿಶುಕುಮಾರ್ ರು ಒಟ್ಟು 16 ನಾಟಕಗಳನ್ನು ಬರೆದಿದ್ದಾರೆ. 12 ನಾಟಕಗಳು ಕನ್ನಡದಲ್ಲೂ, 4 ತುಳುವಿನಲ್ಲೂ ರಚಿಸಿದ್ದಾರೆ. 1) ಶಕುಂತಲಾ- ದುಷ್ಯಂತ ;2) ಬಲಾತ್ಕಾರದ ಬಯಲಿನಲ್ಲಿ; 3) ಮನೆಯಿಂದ ಮಸಣಕ್ಕೆ ; 4) ಸಾಮ್ರಾಟ್ ;5) ಮಿಯಾಂಕಾಮತ್ ; 6) ಡೊಂಕುಬಾಲದ ನಾಯಕರು ;7) ಅಸ್ತಮಾನ ;8) ಹೆಗಲಿಗೆ ಹೆಗಲು ;9) ಕುರುಕ್ಷೇತ್ರ ;10) ಬೀದಿಭ್ರಮರ; 11) ರಾಜದ್ರೋಹಿ ; 12) ತರಂಗ ತರಂಗ ಅಂತರಂಗ– ಇವು ಕನ್ನಡ ನಾಟಕಗಳು.

ತುಳುನಾಟಕಗಳು: 1) ಮಿಸ್ಟರ್ ಬಾಂಬೆ ; 2) ಕಲ್ಜಿಗದ ಕುರುಕ್ಷೇತ್ರ; 3) ಗರ್ವದ ಎಣ್ಣೆ ; 4) ಕೋಟಿ- ಚೆನ್ನಯ. ಇವುಗಳಲ್ಲಿ 1) ಕೋಟಿ- ಚೆನ್ನಯ ( ತುಳು) ,2) ಹೆಗಲಿಗೆ ಹೆಗಲು, 3) ತರಂಗ ತರಂಗ ಅಂತರಂಗ, 4) ಡೊಂಕುಬಾಲದ ನಾಯಕರು- ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಉಳಿದವುಗಳು ಅಪ್ರಕಟಿತ.

1960 ರಲ್ಲಿ ಮೈಸೂರು ಸಂಗೀತ ನಾಟಕ ಅಕಾಡಮಿಯವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ‘ ಕುರುಕ್ಷೇತ್ರ’ ನಾಟಕ ಬಹುಮಾನ ಪಡೆದಿದೆ. ಹಳ್ಳಿ ಬದುಕಿನ ಮನೆಯಲ್ಲಿ ನಡೆಯುವ ಕಲಹವನ್ನು ತೋರಿಸುವ ಆ ನಾಟಕದ ಕಥಾವಸ್ತು.

‘ ಹೆಗಲಿಗೆ ಹೆಗಲು’ ನಾಟಕ 14.10.1969ರಂದು ಪ್ರಥಮ ರಂಗಪ್ರವೇಶ ಕಂಡಿತು. ಈ ನಾಟಕದ ಕಥಾವಸ್ತು ” ತನ್ನ ಮನೆಯ ಸೋಮಾರಿಗಳ ಮೇಲೆಯೇ ನಾಟಕ ಬರೆದಿದ್ದೇನೆ ” ಎಂದು ವಿಶುಕುಮಾರ್ ಹೇಳುತ್ತಾರೆ. ” ಕುಟುಂಬವೊಂದರಲ್ಲಿ ತಂದೆ-ಮಕ್ಕಳು, ಸೊಸೆಯಂದಿರನ್ನು ತಮ್ಮ ಭ್ರಮೆಯಿಂದ ಹೊರತು ಪಡಿಸಿ ಸೋಮಾರಿತನ ಹೋಗಲಾಡಿಸುವುದೇ ನಾಟಕದ ತಿರುಳು ಆಗಿರುತ್ತದೆ” .

ವಿಶುಕುಮಾರ್ ಅವರಿಗೆ ಹೆಸರು ತಂದ ನಾಟಕ ‘ ಕೋಟಿ- ಚೆನ್ನಯ ‘( ತುಳು) .ಅದು 10.03.1963 ರಲ್ಲಿ ಬಾಂಬೆಯಲ್ಲಿ ಮೊದಲ ಪ್ರಯೋಗ ನಡೆಯಿತು. ಬಾಂಬೆಯ ಬಂಗ್ವಾಡಿ ಥಿಯೇಟರ್ ನಲ್ಲಿ ನಾಟಕದ ಪ್ರದರ್ಶನ ಏರ್ಪಡಿಸಲಾಗಿತ್ತು. ಇದನ್ನು ನಿರ್ದೇಶಿಸಿದವರು ಸೋಮಶೇಖರ್ ಪುತ್ರನ್. ಇವರು ರಂಗಭೂಮಿಯ ಕಲಾವಿದ. ಸಿನಿಮಾ ನಟ- ಕೆಲವು ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಪಾತ್ರವರ್ಗದಲ್ಲಿ: ಸೋಮಶೇಖರ್, ಕೆ.ಬಿ.ವಾಮನ್, ನಾರಾಯಣ ರಾವ್, ಭೋಜರಾಜ್ ಅಭಿನಯಿಸಿದ್ದರು. ‘ ಕೋಟಿ- ಚೆನ್ನಯ ‘ ತುಳು ಪಾಡ್ದನದ ಕತೆ. ಇದು ನೈಜ ಕತೆ. ಅವಳಿ ವೀರರ ಕಥೆ. ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೀರ ರಸ ಪ್ರಧಾನ ನಾಟಕ.

ವಿಶುಕುಮಾರ್ ಅವರಿಗೆ ಮತ್ತೊಂದು ಹೆಸರು ತಂದ ನಾಟಕ ‘ ಅಸ್ತಮಾನ’. 1964ರಲ್ಲಿ ಮಂಗಳೂರಿನ ನವೋದಯ ಕಲಾವೃಂದದವರು ಅಭಿನಯಿಸಿದ್ದರು. ‘ ಮನೆಯಿಂದ ಮಸಣಕ್ಕೆ’ ನಾಟಕ ಕೂಡಾ ಜನಪ್ರಿಯತೆ ತಂದು ಕೊಟ್ಟಿತು. ಈ ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಅಭಿನಯಿಸಿದ್ದರು. ‘ ಮದರ್ ‘ ಕಾದಂಬರಿ ನಾಟಕ ರೂಪದಲ್ಲಿ ಬಂದು, 1966 ರಲ್ಲಿ ಬಾಂಬೆಯ ಭಾರತಿ ವಿದ್ಯಾಭವನದವರು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು.

ತುಘಲಕ್ ‘ ನಾಟಕದಲ್ಲಿ ವಿಶುಕುಮಾರ್ ಅವರು ‘ ತುಘಲಕ್ ‘ ನ ಪಾತ್ರಮಾಡಿ ಅಪಾರ ಜನಮನ್ನಣೆ ಪಡೆದರು. ಈ ನಾಟಕ ಪ್ರದರ್ಶನ ಬೆಂಗಳೂರು ಹಾಗೂ ಉಡುಪಿಯಲ್ಲಿ ಕೂಡ ನಡೆಯಿತು. ಹಾಗೇ ನಾ. ಕಸ್ತೂರಿಯವರ ‘ ಗಗ್ಗಯ್ಯನ ಗಡಿಬಿಡಿ‘ ನಾಟಕದಲ್ಲೂ ಅಭಿನಯಿಸಿದ್ದರು.

ಕಾದಂಬರಿ ರಚನೆಯಲ್ಲಿ …

1958 ರಲ್ಲೇ ತನ್ನ ಮೊದಲ ಕಾದಂಬರಿ ‘ ನೆತ್ತರಗಾನ ‘ ವಿಶುಕುಮಾರ್ ಬರೆದಿದ್ದರು. ಆದರೆ ಅದು ಪುಸ್ತಕ ರೂಪದಲ್ಲಿ ಬಂದದ್ದು ಮಾತ್ರ 1966 ರಲ್ಲಿ! ಎಂಟು ವರ್ಷಗಳ ನಂತರ. ಈ ಕಾದಂಬರಿಯನ್ನು ಮಾವಿನಕೆರೆ ರಂಗನಾಥ್ ಅವರು ‘ ಪುರೋಗಾಮಿ’ ಸಾಹಿತ್ಯ ಸಂಘದ ಮೂಲಕ ಪ್ರಕಟಿಸಿದ್ದಾರೆ.

ಯಕ್ಷಗಾನ ಕಲಾವಿದನ ಬದುಕಿನ ಸುತ್ತ ಹೆಣೆದ ಕಾದಂಬರಿ. ಈ ಕಾದಂಬರಿಯ ಹಸ್ತಪ್ರತಿಯನ್ನು ಆತ್ಮೀಯರು, ಹಿರಿಯರು ಓದಿದ ನಂತರ ಕೆಲವು ಕಡೆ ಬದಲಾವಣೆ ಮಾಡಿದ್ದಾರೆ ವಿಶುಕುಮಾರ್ ಅವರು. ತನ್ನ ಬರವಣಿಗೆಯಲ್ಲಿ ಅಪ್ರಬುದ್ಧತೆಯಿತ್ತು ಒಪ್ಪಿಕೊಂಡ ಅವರು- ಆದರೆ ವಿಶುಕುಮಾರ್ ಅವರ ಸಾಹಿತ್ಯ ಜೀವನದಲ್ಲಿ ‘ ನೆತ್ತರಗಾನ’ ಒಂದು ಮೈಲಿಗಲ್ಲು. ಈ ಕಾದಂಬರಿಗೆ ಒಳ್ಳೆಯ ಪ್ರತಿಕ್ರಿಯೆ – ಪತ್ರಿಕೆ ವಿಮರ್ಶೆ ಕೂಡ ಉತ್ತಮ ರೀತಿಯಲ್ಲಿ ಬಂದಿದೆ. ಇದಕ್ಕೆ ಬಲಿಪ ನಾರಾಯಣ ಭಾಗವತರು ಮುನ್ನುಡಿ ಬರೆದಿದ್ದಾರೆ.

ಮೂವತ್ತರ ಹರೆಯದ ಒಳಗೆ ವಿಶುಕುಮಾರರು ಬರೆದ ನಾಟಕ, ಕಥೆಗಳು, ಲೇಖನಗಳು, ಕಾದಂಬರಿಗಳಲ್ಲಿ ಅಂಥ ರೊಚ್ಚಿಗೆಬ್ಬಿಸುವ ಯಾವ ಸುದ್ದಿಗಳು ಕಾಣದಿದ್ದರೂ, ಅವರ ಸೂಕ್ಷ್ಮ ಭಾವನೆಗಳನ್ನು ಇಲ್ಲಿ ತಿಳಿಯಬಹುದು. ನೇರ- ನಡೆ ನುಡಿಯ ಅವರು, ಇರುವುದನ್ನು ನೇರವಾಗಿ ಹೇಳುವ ಗುಣ ಅವರದು . ನಾವು ಬೇರೆಯವರಿಗೆ ಹೇಳಬೇಕಾದರೆ, ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕಾಗಿದೆ. ಅದಕ್ಕೆ ಅವರ ‘ ಹೆಗಲಿಗೆ ಹೆಗಲು’ ಒಂದು ಉತ್ತಮ ಉದಾಹರಣೆ. ತಮ್ಮ ಮನೆಯವರ ಬಗ್ಗೆಯೇ ನಾಟಕ ಬರೆಯಲು ವಸ್ತುವನ್ನು ಆಯ್ಕೆ ಮಾಡಿಕೊಂಡರು.

ತುಳುನಾಡಿನ ಇತಿಹಾಸ, ಪ್ರಕೃತಿ-ಪರಿಸರ, ಪ್ರೀತಿ- ಪ್ರೇಮ, ಅಸಮಾನತೆ ಬಗ್ಗೆ ಮಾತ್ರ ಈ ತನಕದ ಬರವಣಿಗೆಯಲ್ಲಿ ಅವರ ವಸ್ತುಗಳಾಗಿದ್ದವು. ಮುಂದೆ ಹಂತ ಹಂತವಾಗಿ ಅವರ ಬರವಣಿಗೆಯಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!