ಮಂಗಳೂರು :- ರಾಜ್ಯ ಕಂಡ ಶ್ರೇಷ್ಠ ಮುಖ್ಯಮಂತ್ರಿಗಳಲ್ಲಿ ಒಬ್ಬರಾದ ಹಿಂದುಳಿದ ವರ್ಗಗಳ ಸಮಾಜ ಸುಧಾರಕ ಡಿ. ದೇವರಾಜ್ ಅರಸುರವರ 107ನೇ ಜನ್ಮದಿನಾಚರಣೆಯನ್ನು ದಿನಾಂಕ 29 ಆಗಸ್ಟ್ 2022 ರ ಮಂಗಳವಾರ ಯುವವಾಹಿನಿ ಸಭಾಂಗಣದಲ್ಲಿ ಘಟಕದ ವತಿಯಿಂದ ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಬಂದಂತಹ ಅತಿಥಿಗಳನ್ನು, ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಸಭೆಗೆ ಆದರ ಪೂರ್ವಕವಾಗಿ ಸ್ವಾಗತಿಸಿದರು. ಗತ ಸಭೆಯ ವರದಿಯನ್ನು ಜೊತೆ ಕಾರ್ಯದರ್ಶಿಯವರಾದ ನಾರಾಯಣ ಕರ್ಕೆರರವರು ವಾಚಿಸಿ ಅನುಮೋದನೆ ಪಡಕೊಂಡರು. ಗುರು ಪೂಜೆಯನ್ನು ಘಟಕದ ಮಾಜಿ ಅಧ್ಯಕ್ಷರಾದ ಶ್ರೀಯುತ ಶ್ರೀಧರಪೂಜಾರಿ ಯವರು ನಡೆಸಿಕೊಟ್ಟರು. ವಿಶೇಷ ಅತಿಥಿಯಾದ ನವನೀತ್ ಡಿ. ಹಿಂಗಾಣಿ ಹೈಕೋರ್ಟ್ ವಕೀಲರು ಬೆಂಗಳೂರುರವರ ಪರಿಚಯವನ್ನು ಮಾಜಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿಯವರು ಸಭೆಗೆ ತಿಳಿಸಿದರು ಹಾಗೂ ಅವರನ್ನು ಘಟಕದ ಹಿರಿಯರಾದ ಪರಮೇಶ್ವರ್ ಪೂಜಾರಿಯವರು ಹೂ ನೀಡಿ ಸ್ವಾಗತಿಸಿದರು. ನವನೀತ್ ಹಿಂಗಾಣಿವರು ಮಾತನಾಡುತ್ತಾ, 1972 ರಿಂದ 1980ರವರೆಗೆ ಕರ್ನಾಟಕ ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿ ಯಾಗಿ ಹಿಂದುಳಿದ ವರ್ಗಗಳ ಸುಧಾರಕರಾಗಿ, ಭೂಸುಧಾರಣೆ, ಉಳುವನೇ ಹೊಲದೊಡೆಯ, ಮಿಶಾಲಾತಿ, ಸಂಘಟನೆ, ಮುಂತಾದ ಸಮಾಜ ಸುಧಾರಣೆಗಳನ್ನು ಮಾಡಿದರೆಂದರು. ಘಟಕದ ಅಧ್ಯಕ್ಷರು, ಮಾಜಿಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿ ನವನೀತ್ ಹಿಂಗಾಣಿಯವರನ್ನು, ಶಾಲು ಹೊದಿಸಿ, ಸ್ಮರಣಿಕೆ ಹೂ ನೀಡಿ ಗೌರವಿಸಲಾಯಿತು. ನಾಗೇಶ್ ಅಮೀನ್ ರವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಸುವರ್ಣ ನವರು ಲೋಕ ಮಂತ್ರ ಪಠಿಸುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಎಲ್ಲರಿಗೂ ಶ್ರೀಧರ ಪೂಜಾರಿಯವರು ಒದಗಿಸಿ ಕೊಟ್ಟ ಲಘುಉಪಾಹಾರ ನೀಡಿ ಸತ್ಕರಿಸಲಾಯಿತು.