ಕನ್ನಡ ಮಾಧ್ಯಮದಲ್ಲಿ ಶಿಕ್ಷಣ. NITKಯಲ್ಲಿ ಇಲೆಕ್ಟ್ರಾನಿಕ್ ಹಾಗೂ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ-ಬಿಟ್ಸ್ ಪಿಲಾನಿ (ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿರುವ ತಂತ್ರಜ್ಞಾನ ತಜ್ಞರನ್ನು ರೂಪಿಸುವ ಸುಪ್ರಸಿದ್ಧ ಸಂಸ್ಥೆ)ಯಲ್ಲಿ ಪ್ರೊಫೆಸರ್! ಎಲ್ಲಿಂದ ಎಲ್ಲಿಗೆ ಪಯಣ ಅತ್ಯಾಶ್ಚರ್ಯಕರ, ನಂಬಲಸಾಧ್ಯ. ಆದರೆ ಇದು ನಿಜ. ಮೈನವಿರೇಳಿಸುವ ಸಾಧನೆ!!
ಕನ್ನಡ ಮಾಧ್ಯಮದಲ್ಲಿ ಕಲಿತವರು ಹಿಂದೆ ಬೀಳುತ್ತಾರೆ ಎಂಬ ಹೆಚ್ಚಿನ ಜನರ ಅಭಿಪ್ರಾಯವನ್ನು ಸಂಪೂರ್ಣ ನಿರಾಧಾರ ಎಂದು ನಿರೂಪಿಸಿದ ಜ್ವಲಂತ ನಿದರ್ಶನ ಡಾ| ಶಶಿಧರ ಎಂ.ಕೋಟ್ಯಾನ್. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸುಂಕದಕಟ್ಟೆ ನಿರಂಜನ ಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಪಡೆದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಮುಗಿಸಿ ನಂತರ ನಂಬಲಸಾಧ್ಯವಾದ NITKಯಲ್ಲಿ ಇಂಜಿನಿಯರಿಂಗ್ ಸೀಟ್ ಗಳಿಸಿ BE ಮತ್ತು Power energy system ವಿಷಯದಲ್ಲಿ M.Tech ಸ್ನಾತಕೋತ್ತರ ಪದವಿ ಪಡೆದುದು ಮಾತ್ರವಲ್ಲ ಎಲ್ಲ ಹಂತಗಳಲ್ಲಿ ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗಿ ಇತಿಹಾಸ ನಿರ್ಮಿಸಿದ್ದಾರೆ. ಇದೂ ಸಾಲದೆಂಬಂತೆ M.Tech ನಲ್ಲಿ ಚಿನ್ನದ ಪದಕ ಗಳಿಸಿದ ಕೀರ್ತಿ ಇವರದ್ದು.
ನಮ್ಮ ಸಮುದಾಯದ ಹೆಮ್ಮೆಯ ಕುವರ, ಮೈನವಿರೇಳಿಸುವ ಸಾಧನೆ ಮಾಡಿದ ಸಾಧಕ, ವಿದ್ಯಾರ್ಥಿಗಳ ತಂತ್ರಜ್ಞಾನಿಗಳ ಮಾರ್ಗದರ್ಶಕ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಅವಿಷ್ಕಾರಗಳ ಮಾರ್ಗದರ್ಶಕರಾಗಿ ಹಲವು ಡಾಕ್ಟರೇಟ್ ವಿದ್ಯಾರ್ಥಿಗಳ ಆಶಾಕಿರಣ ಡಾ| ಕೋಟ್ಯಾನ್ ಆಗಲಿ. ಅವರಿಗೆ ನಮ್ಮ Grand salute ಮತ್ತು All the best ಎಂದು ಹಾರೈಸುತ್ತಾ ಯುವವಾಹಿನಿಯು ಗೌರವ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.