ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರವು ದಿನಾಂಕ . 14.06.2019ರ ಶುಕ್ರವಾರ ಮೊರಾರ್ಜಿ ದೇಸಾಯಿ ಶಾಲೆ ಮಿಯ್ಯಾರು ಇಲ್ಲಿ ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ಮಿಯ್ಯಾರು ಬಿಲ್ಲವ ಸಂಘದ ಗ್ರಾಮ ಸಮಿತಿ ಅಧ್ಯಕ್ಷರಾದ ಗಣೇಶ ಪೂಜಾರಿ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಘಟಕದ ಉಪಾಧ್ಯಕ್ಷರಾದ ತಾರಾನಾಥ ಕೋಟ್ಯಾನ್‍ರವರು ವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಹಾಗೂ ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ್ ಕಾರ್ಕಳ ತರಬೇತಿಯನ್ನು ನಡೆಸಿಕೊಟ್ಟರು. ಮೊರಾರ್ಜಿ ದೇಸಾಯಿ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್‍ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜೀವನ ಕೌಶಲ್ಯದ ಅಗತ್ಯತೆಯ ಬಗ್ಗೆ ಅನುಭವಧಾರಿತ ಕಲಿಕೆಯನ್ನು ಚಟುವಟಿಕೆಯಾದರಿತವಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಲಾಯಿತು.
ಘಟಕದ ಸದಸ್ಯರಾದ ಮಂಜುನಾಥ ಕೋಟ್ಯಾನ್, ಸಂತೋಷ್ ಬಂಗೇರಾ, ಭವ್ಯ ಸ್ವರೂಪ್, ವನಿತಾ ಸುಧಾಕರ್, ಸತೀಶ್ ಪೂಜಾರಿ ಕಲತ್ರಪಾದೆ, ಸಂದೀಪ್ ಪೂಜಾರಿ ನಲ್ಲೂರು, ನಾರಾಯಣ ಪೂಜಾರಿ ಈದು, ಶೋಭರಾಜ್ ಹೊಸ್ಮಾರು ಕಾರ್ಯಕ್ರಮಕ್ಕೆ ಸಹಕರಿಸಿದರು. ಕೋಶಾಧಿಕಾರಿ ಅರುಣ್ ಕುಮಾರ್‍ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯದರ್ಶಿ ಗಣೇಶ್ ಸಾಲಿಯಾನ್‍ರವರು ವಂದಿಸಿದರು.
ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಜೀವನ ಕೌಶಲ್ಯ ತರಬೇತಿ ಕಾರ್ಯಾಗಾರವು ದಿನಾಂಕ 21.06.2019ರ ಶುಕ್ರವಾರ ಮೊರಾರ್ಜಿ ದೇಸಾಯಿ ಕಾಲೇಜು ಮಿಯ್ಯಾರು ಇಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಮಿಯ್ಯಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿಲ್ಲವ ಸಮಾಜದ ಹಿರಿಯರು ಆಗಿರುವ ಭೋಜ ಪೂಜಾರಿಯವರು ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಘಟಕದ ಪದಾಧಿಕಾರಿಗಳಾದ ಮಂಜುನಾಥ್ ಕೋಟ್ಯಾನ್‍ರವರು ವಹಿಸಿದ್ದರು. ರಾಷ್ಟ್ರೀಯ ತರಬೇತುದಾರ ಹಾಗೂ ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಸುಧಾಕರ್ ಕಾರ್ಕಳ ಹಾಗೂ ಮತ್ತೊಬ್ಬ ತರಬೇತುದಾರರಾದ ಗೋಪ ಕುಮಾರ್ ಕೇರಳ ಇವರು ತರಬೇತಿಯನ್ನು ನಡೆಸಿಕೊಟ್ಟರು.
ಮೊರಾರ್ಜಿ ದೇಸಾಯಿ ಕಾಲೇಜಿನ ಪ್ರಾಂಶುಪಾಲರಾದ ಈಶ್ವರ್‍ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗುರಿ ನಿರ್ಧಾರದ ಅಗತ್ಯತೆಯ ಬಗ್ಗೆ ಅನುಭವಧಾರಿತ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಲಾಯಿತು. ಘಟಕದ ಉಪಾಧ್ಯಕ್ಷರಾದ ತಾರಾನಾಥ ಕೋಟ್ಯಾನ್ ಮಿಯ್ಯಾರು, ಶೋಭರಾಜ್ ಹೊಸ್ಮಾರು, ರಾಕೇಶ್ ಅಮೀನ್ ಸಾಣೂರು, ವನಿತಾ ಸುಧಾಕರ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಕೋಶಾಧಿಕಾರಿ ಅರುಣ್ ಕುಮಾರ್‍ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸತೀಶ್ ಪೂಜಾರಿಯಯವರು ವಂದಿಸಿದರು.