ಯುವವಾಹಿನಿ (ರಿ.) ಶಕ್ತಿನಗರ ಘಟಕ ಮತ್ತು ನಾರಾಯಣಗುರು ಮಂದಿರ ಕುಂಟಲ್ಪಾಡಿ ಇದರ ವತಿಯಿಂದ ಗುರು ಪೂಜೆಯು ದಿನಾಂಕ 18-01-2024 ರ ಗುರುವಾರದಂದು ಸಂಜೆ 8:30ಕ್ಕೆ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕರಾದ ಜಯರಾಮ್ ಪೂಜಾರಿ ಅವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿಯವರನ್ನು ಗೌರವಿಸಲಾಯಿತು. ಕೇಂದ್ರ ಸಮಿತಿಯ ಕೋಶಾಧಿಕಾರಿಗಳಾದ ಹರೀಶ್ ವಿ ಪಚ್ಚನಾಡಿ, ಪ್ರಚಾರ ನಿರ್ದೇಶಕರಾದ ಪೃಥ್ವಿರಾಜ್ ಎಂ ಕಂಕನಾಡಿ, ಘಟಕದ ಮಾಜಿ ಅಧ್ಯಕ್ಷರಾದ ಭಾರತಿ ಜಿ.ಅಮೀನ್, ಕೇಂದ್ರ ಸಮಿತಿಯ ನಾಮನಿರ್ದೇಶನ ಸದಸ್ಯರಾದ ತುಕಾರಾಂ ಕುಂಟಲ್ಪಾಡಿ ಉಪಸ್ಥಿತರಿದ್ದರು, ಘಟಕದ ಅಧ್ಯಕ್ಷರಾದ ವಿಶ್ವನಾಥ್ ಕುಂದರ್ ಕಾರ್ಯಕ್ರಮವನ್ನು ನೆರವೇರಿಸಿದರು.