ಉಪ್ಪಿನಂಗಡಿ :- ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳ ಬೆಳಕಿನಡಿಯಲ್ಲಿ ಕಳೆದ 35 ವರ್ಷಗಳಿಂದ ಸಮಾಜಮುಖಿ ಚಿಂತನೆಗಳೊಂದಿಗೆ ಸಾಗುತ್ತಿರುವ ಯುವವಾಹಿನಿಯ ಯುವಸಮುದಾಯಕ್ಕೆ ಗುರುಗಳ ಪ್ರೇರಣೆಯೇ ದಾರಿದೀಪ ಎಂದು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ ತಿಳಿಸಿದರು. ಅವರು ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಇವರ ಮನೆಯಲ್ಲಿ ದಿನಾಂಕ 19 ನವೆಂಬರ್2022 ರಂದು ಜರಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಜಯವಿಕ್ರಮ್ ದಂಪತಿಗಳನ್ನು ಮಾತಪಿತರಾದ ದೇವರಾಜ್ ಕಲ್ಲಾಪು ದಂಪತಿಗಳೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಜಯವಿಕ್ರಮ್ ಕಲ್ಲಾಪು ತಾನು ಯಾವುದೇ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳಲು ಮೂಲ ಕಾರಣ ಯುವವಾಹಿನಿ ಸಂಸ್ಥೆ, ಇದರಿಂದಾಗಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶ ದೊರಕಿತು ಎಂದರು. ಹಾಗೆಯೇ ತಮ್ಮ ಅಧ್ಯಕ್ಷವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ಮತ್ತೊಮ್ಮೆ ನೆನೆಪಿಸಿದರು.. ಈ ಸಂದರ್ಭದಲ್ಲಿ ನಮ್ಮ ಸಮಾಜದ ನಿವೃತ್ತ ಯೋಧ ರೋಹಿತ್ ಸುಣ್ಣಾಜೆ ಮತ್ತು ಬಾಲಪ್ರತಿಭೆ ಸೃಜನಾ ಅವರನ್ನು ಗುರುತಿಸಲಾಯಿತು. ಘಟಕದ ಗೌರವ ಸಲಹೆಗಾರರಾದ ವರದರಾಜ್. ಎಂ, ಘಟಕದ ಅಧ್ಯಕ್ಷರಾದ ಕುಶಾಲಪ್ಪ ಹತ್ತು ಕಳಸೆ, ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಡಾ. ರಾಜರಾಮ್ ಕೆ.ಬಿ , ಮಾಜಿ ಅಧ್ಯಕ್ಷರಾದ ಗುಣಕರ್ ಅಗ್ನಾಡಿ , ಕೃಷ್ಣಪ್ಪ ಪೂಜಾರಿ , ಚಂದ್ರಶೇಖರ್ ಸನೀಲ್, ಜಯಾನಂದ ಕಲ್ಲಾಪು, ರವೀಂದ್ರ ದಲ್ಕಾಜೆ, ಗುಣಕರ ಮುಗ್ಗಗುತ್ತು, ಶೇಖರ್ ಗೌಂಡತ್ತಿಗೆ, ಜನಾರ್ಧನ ನೂಜ, ಯುವ ಬ್ರಿಗೇಡ್ ನ ಪವನ್ ಸಾಲ್ಯಾನ್, ಹಿರಿಯರಾದ ಉಮಾನಾಥ ಕೋಟ್ಯಾನ್, ಜಯ ಬಂಗೇರ ಪಾಂಡವರಕಲ್ಲು, ವಿಶ್ವನಾಥ ಸುಣ್ಣಾಜೆ, ಗಿರಿಧರ ಪೂಜಾರಿ ಫುದ್ದೋಟ್ಟು, ವೆಂಕಪ್ಪ ಪೂಜಾರಿ, ದೇವಪ್ಪ ದಾಸ್, ಕಿಶೋರ್ ಚಂದ್, ವಿನಯ್ ಕುಮಾರ್, ಪವಿತ್ರ ಪ್ರಕಾಶ್, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ,ಜೊತೆ ಕಾರ್ಯದರ್ಶಿ ಅನಿತಾ ಸತೀಶ್ , ಘಟಕದ ಉಪಾಧ್ಯಕ್ಷರಾದ ಮನೋಹರ್ ಆಟಲ್ , ಮನೋಜ್ ಸಾಲಿಯಾನ್ ಪದಾಧಿಕಾರಿಗಳಾದ ಉಮೇಶ್ , ತುಳಸೀಧರ್ ಬೆನೆಪ್ಪು, ಮನೋಹರ್ ಕೆಳಗಿನಮನೆ, ಮಾಧವ ಪೂಜಾರಿ, ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಪಾಡಿಯ ಅಧ್ಯಕ್ಷರಾದ ವಸಂತ್ ಪೂಜಾರಿ, ಘಟಕದ ಸದಸ್ಯರಾದ ರಮ್ಯಾ ರಾಜರಾಮ್,ನಯನ ಮನೋಹರ್, ರೂಪಲತಾ ಚಂದ್ರಶೇಖರ್, ಗಂಗಾಧರ್ ಪುರಿಯ,ವಿಕ್ರಮ್ ಪೂಜಾರಿ, ಮೇಷಾ,ಕು.ಅಕ್ರತಿ,ಧೃಣಿತಾ,ವಿನುತಾ,ಆರ್ಥಿಕ್,ರಿತೀಶಾ,ಧ್ರುವಿ,ಅನುಜ್ಞಾ,ಅಭಿಜ್ಞಾ,ವನಿತಾ,ಸ್ನೇಹ,ಅಂಬಿಕಾ,ಸುಶ್ಮಿತಾ, ಸಂತೋಷ್ ಕೆಳಗಿನಮನೆ , ಚೇತನ್ ಪೊಲ್ಲಕೋಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಘಟಕದ ಉಪಾಧ್ಯಕ್ಷರಾದ ಮನೋಜ್ ಸಾಲ್ಯಾನ್ ಧನ್ಯವಾದ ಸಮರ್ಪಿಸಿದರು. ಘಟಕದ ಉಪಾಧ್ಯಕ್ಷರಾದ ಮನೋಹರ್ ಆಟಲ್ ಕಾರ್ಯಕ್ರಮ ನಿರೂಪಿಸಿದರು.