ಯುವವಾಹಿನಿ (ರಿ) ಬಂಟ್ವಾಳ ಘಟಕ : ಗುರುತತ್ವವಾಹಿನಿ ಮಾಲಿಕೆ 11

ಗುರುಗಳು ಶೋಷಿತ ವರ್ಗದ ಆಶಾಕಿರಣ : ಪ್ರಶಾಂತ್ ಏರಮಲೆ

ಬಂಟ್ವಾಳ : ಬ್ರಹ್ಮಶ್ರೀ ನಾರಾಯಣ ಗುರುಗಳು 1908 ರಲ್ಲಿ ತಲಶ್ಶೇರಿಯಲ್ಲಿ ನಿರ್ಮಾಣವಾದ ಶ್ರೀ ಜಗನ್ನಾಥ ದೇವಾಲಯದ ವಿಚಾರದಲ್ಲಿ ನಡೆಸಿದ ಹೋರಾಟದಂತೆ, ಅಂದು ನಡೆಸಿದ ಮೌನ ಕ್ರಾಂತಿಯ ಹೋರಾಟವು ಮನುಕುಲದ ಬದುಕಿನಲ್ಲಿ ಮೂಡಿದ ಆಶಾಕಿರಣವು ಪ್ರಸ್ತುತ ಕಾಲಘಟ್ಟದಲ್ಲಿಯೂ ಸಕಾಲಿಕವಾಗಿದೆ ಎಂದು ಪ್ರಶಾಂತ್ ತಿಳಿಸಿದರು.

ಅವರು ದಿನಾಂಕ 12-09-2024 ನೇ ಗುರುವಾರ ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಶಿವಾನಂದ ಎಂ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 11 ನೇ ಮಾಲಿಕೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ನಾರಾಯಣ ಪಲ್ಲಿಕಂಡ, ನಾರಾಯಣ ಗುರು ತತ್ವ ಪ್ರಚಾರ ಮತ್ತುಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರುಗಳಾದ
ಮಹೇಶ್ ಬೊಳ್ಳಾಯಿ,ಹರಿಣಾಕ್ಷಿ ನವೀಶ್ ನಾವುರ, ಕಿರಣ್ ರಾಜ್ ಪೂಂಜರೆಕೋಡಿ, ಮಾಜಿ ಅಧ್ಯಕ್ಷರಾದ, ಪ್ರೇಮನಾಥ್ ಕರ್ಕೇರ, ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ರಾಜೇಶ್ ಸುವರ್ಣ, ಸದಸ್ಯರಾದ ಸುನೀಲ್ ಸಾಲ್ಯಾನ್ ಮರ್ದೋಳಿ, ಜೈದೀಪ್ ಏಲಬೆ, ನಾಗೇಶ್ ಪೂಜಾರಿ ಏಲಬೆ,ಚಿನ್ನ ಕಲ್ಲಡ್ಕ, ಜಗನ್ನಾಥ್ ಕಲ್ಲಡ್ಕ, ಯತೀಶ್ ಬೊಳ್ಳಾಯಿ, ಯಶೋಧರ್ ಕಟ್ಟತ್ತಿಲ, ಯತೀಶ್ ಕರ್ಕೇರ,ಹರೀಶ್ ಅಜೆಕಲ, ಸೂರಜ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!