ಯುವವಾಹಿನಿ (ರಿ) ಕಂಕನಾಡಿ ಘಟಕದ ಆಶ್ರಯದಲ್ಲಿ ಮಹಿಳೆಯರಿಗಾಗಿ ವೈವಿಧ್ಯಮಯ ಹಾಗೂ ವಿಶಿಷ್ಟ ವಿನ್ಯಾಸದ ಕೇಶ ವಿನ್ಯಾಸ ಕಾರ್ಯಾಗಾರ ದಿನಾಂಕ 18.04.2017 ರಂದು ಜರುಗಿತು.
ಯುವವಾಹಿನಿ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷೆ ಹಾಗೂ ಬ್ಯುಟಿಷೀಯನ್ ಶ್ರೀಮತಿ ವಿದ್ಯಾ ರಾಕೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಾಗಾರ ನಡೆಸಿಕೊಟ್ಟರು. ಹಾಗೂ ಈ ಸಂದರ್ಭದಲ್ಲಿ ಸರಳ ವಿಧಾನಗಳ ಮೂಲಕ ಮಹಿಳೆಯರ ಸೌಂದರ್ಯ ಹೆಚ್ಚಿಸುವ ಮೇಕಪ್ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರಿನ ಗೋರಿಗುಡ್ಡದಲ್ಲಿ ಜರುಗಿದ ಈ ಕಾರ್ಯಾಗಾರದಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಕಾರ್ಯಾಗಾರದ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಕಂಕನಾಡಿ ಯುವವಾಹಿನಿ ಅಧ್ಯಕ್ಷರಾದ ಗೋಪಾಲ.ಎಂ.ಪೂಜಾರಿ,ಕಾರ್ಯದರ್ಶಿ ಮೋಹನ್ ಜಿ.ಅಮೀನ್, ಕೋಶಾಧಿಕಾರಿ ಶ್ರೀಮತಿ ಸುಮಾ ವಸಂತ್, ಜತೆ ಕಾರ್ಯದರ್ಶಿ ಶ್ರೀಮತಿ ಮೈನಾ, ನಿರ್ದೇಶಕರಾದ,ಜನಾರ್ಧನ, ಪ್ರಥ್ವೀರಾಜ್,ಸುರೇಖಾ ಮೋಹನ್,ಮತ್ತಿತರರು ಉಪಸ್ಥಿತರಿದ್ದರು.