ಮಂಗಳೂರು:- ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಸುಮಾರು 26 ಜನ ಯಾತ್ರಾರ್ಥಿಗಳು, 2 ಜನ ಟೂರ್ ಮ್ಯಾನೇಜರ್, 3 ಜನ ಬಾಣಸಿಗರನ್ನು ಒಳಗೊಂಡ 31 ಜನರ ತಂಡವು ಸಪ್ಟೆಂಬರ್ 8ರಿಂದ ಸೆಪ್ಟೆಂಬರ್ 19ರವರೆಗೆ 11 ದಿವಸಗಳ ಚಾರುಧಾಮ ಕೇದರನಾಥ ಯಾತ್ರೆ ಮಂಗಳೂರಿನಿಂದ ಹೊರಟಿತು. ದೆಹಲಿ, ಹರಿದ್ವಾರ, ಗಂಗಾ ಆರತಿ, ಯಮುನೋತ್ರಿ, ಉತ್ತರ ಕಾಶಿ ವಿಶ್ವನಾಥ ಮಂದಿರ, ಗಂಗಾ ನದಿ, ಸೀತಾಪುರ, ಕೇದಾರನಾಥ ದೇವಾಲಯ, ಬದರಿನಾಥ ದೇವಾಲಯ, ಭೀಮನ ಸೇತುವೆ, ಗಣೇಶ ಗುಹೆ, ವ್ಯಾಸ ಗುಹೆ, ಪಿಪಿಎಲ್ ಕೋಟು, ಋಷಿಕೇಶ, ಮುಂತಾದ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಕೊಂಡು ಸೆಪ್ಟೆಂಬರ್ 19ರಂದು ವಾಪಸ್ ಮಂಗಳೂರು ತಲುಪಿತು. ಸೆಪ್ಟೆಂಬರ್ 15ರಂದು ಕಾಲ್ನಡಿಗೆಯಲ್ಲಿ ಕೇದಾರನಾಥ ಕ್ಷೇತ್ರಕ್ಕೆ ಹೊರಟ ಯಾತ್ರಿ ತಂಡವು ವಿಶ್ವದ ಎತ್ತರದ ಸ್ಥಳವಾದ ಕೇದಾರನಾಥ ಕ್ಷೇತ್ರದಲ್ಲಿ ಯುವವಾಹಿನಿಯ ಹಾಗೂ ಪರಶುರಾಮ ಸೃಷ್ಟಿ ತುಳುನಾಡಿನ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಿ, ಹೊಸ ಇತಿಹಾಸ ಬರೆಯಿತು. ಘಟಕದ ಪ್ರವಾಸ ಸಂಚಾಲಕರಾದ ಪ್ರವೀಣ್ ಸಾಲ್ಯಾನ್ ಕೀರೋಡಿ ಮತ್ತು ಲೋಹಿತ್ ಕಲ್ಪನೆ ಯವರ ಮುಂದಾಳುತ್ವದಲ್ಲಿ 31 ಜನರ ಯಾತ್ರಿ ತಂಡವು ಶಿಸ್ತು ಬದ್ಧವಾಗಿ, ಅತ್ಯಂತ ಯಶಸ್ವಿಯಾಗಿ ಪ್ರವಾಸವನ್ನು ಮುಗಿಸಿದ್ದು, ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ಮತ್ತು ಸದಸ್ಯರು ಯಾತ್ರಾರ್ಥಿಗಳನ್ನು ಅಭಿನಂದಿಸಿದರು. ಬೊಳ್ಳಿ ಟೂರಿಸಂನ ಮಾಲಕರಾದ ಅರುಣ್ ಮತ್ತು ಅವರ ಸಿಬ್ಬಂದಿ ವರ್ಗದವರು ಸಂಪೂರ್ಣ ಸಹಕಾರವನ್ನು ನೀಡಿದರು. ಪ್ರಸಿದ್ಧ ವಾಸ್ತುತಜ್ಞರಾದ ರಾಜ್ ಕುಮಾರ್, ಕೇಂದ್ರ ಸಮಿತಿ ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಯಶವಂತ್ ಪೂಜಾರಿ, ಎಸ್ ಪಿವೈಎಸ್ಎಸ್ ನ ಯೋಗಗುರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ, ರಾಜೇಶ್ ಅಮೀನ್, ಯೋಗೀಶ್ ಕುಮಾರ್, ಸದಾನಂದ ಕುಳಾಯಿ ದಂಪತಿಗಳು, ಗೋಪಾಲ ಪೂಜಾರಿ ರೇಖಾ ದಂಪತಿಗಳು, ಮತ್ತಿತರ ಬಂಧುಗಳು ಈ ಚಾರುಧಾಮ ಯಾತ್ರೆಯಲ್ಲಿ ಬಾಗವಹಿಸಿದ್ದರು