ವೇಣೂರು :- ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಯುವವಾಹಿನಿ ಮಾಣಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 09 ಅಕ್ಟೋಬರ್ 2022ರಂದು ಜರಗಿದ ಕೆಸರ್ ಡೊಂಜಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತೀ ಹೆಚ್ಚು ವಿಭಾಗದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಹೆಚ್ಚು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶಸ್ತಿ ವಿತರಿಸಿದರು.
ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಶ್ರೀನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ಗೌರವ ಅಧ್ಯಕ್ಷರಾದ ಜಯಂತ ನಡುಬೈಲ್, ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಮ್ , ಧಾರ್ಮಿಕ ಪರಿಷತ್ ಸದಸ್ಯರಾದ ಶೈಲೇಶ್ , ಜಯಂತ್ ಕೋಟ್ಯಾನ್ , ಬೆಳ್ತಂಗಡಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಚಿದಾನಂದ ಎಲ್ದಕ್ಕ , ಗುರುದೇವ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ , ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ, ಉಪಾಧ್ಯಕ್ಷ ರುಗಳಾದ ರಾಜೇಶ್ ಬಂಟ್ವಾಳ, ಹರೀಶ್ ಪೂಜಾರಿ ಮಂಗಳೂರು, ಕೋಶಾಧಿಕಾರಿ ಜಗದೀಶ್ಚಂದ್ರ ಡಿ.ಕೆ , ಜಯವಿಕ್ರಂ ಕಲ್ಲಾಪು, ಯುವ ವಕೀಲರಾದ ಮನೋಹರ ಅಟಾಲ್ ಮತ್ತಿತರು ಉಪಸ್ಥಿತರಿದ್ದರು.
ವಿಜೇತರ ವಿವರ
1.ಪುರುಷ ರ ಉಪ್ಪು ಮೂಟೆ ಪ್ರಥಮ — ಪಡುಬಿದ್ರೆ ಘಟಕ
ದ್ವಿತೀಯ — ಕಡಬ ಘಟಕ
2.ಪುರುಷರ — ರಿಲೇ ಪ್ರಥಮ — ಮಾಣಿ ಘಟಕ
ದ್ವಿತೀಯ — ಹೆಜಮಾಡಿ ಘಟಕ
3. ಪುರುಷ ರ 5 ಕಾಳಿನ ಓಟ ಪ್ರಥಮ– ಮಾಣಿ ಘಟಕ
ದ್ವಿತೀಯ — ಕಡಬ ಘಟಕ
4. ಪುರುಷರ100 ಮೀಟರ್ ಓಟ ಪ್ರಥಮ– ಪಡುಬಿದ್ರೆ ಘಟಕ
ದ್ವಿತೀಯ — ಮಾಣಿ ಘಟಕ
5. ಪುರುಷರ ಕಬಡ್ಡಿ ಪ್ರಥಮ— ಮಾಣಿ ಘಟಕ
ದ್ವಿತೀಯ — ಬೆಳ್ತಂಗಡಿ ಘಟಕ
6. ಪುರುಷರ ವಾಲಿಬಾಲ್ ಪ್ರಥಮ– ಬಜಪೆ ಘಟಕ
ದ್ವಿತೀಯ — ಪಡುಬಿದ್ರೆ ಘಟಕ
7.ಪುರುಷರ ಹಗ್ಗ ಜಗ್ಗಾಟ ಪ್ರಥಮ– ಹೆಜಮಾಡಿ ಘಟಕ
ದ್ವಿತೀಯ — ಮಂಗಳೂರು ಘಟಕ
===0==0==0====0======0==
1.ಮಹಿಳೆಯರ ಉಪ್ಪಿನ ಮೂಟೆ ಓಟ ಪ್ರಥಮ — ಮೂಡಬಿದ್ರೆ ಘಟಕ
ದ್ವಿತೀಯ — ಬೆಳ್ತಂಗಡಿ ಘಟಕ
2. ಮಹಿಳೆಯರ ರಿಲೇ ಪ್ರಥಮ — ಪಡುಬಿದ್ರೆ ಘಟಕ
ದ್ವಿತೀಯ — ಮೂಡಬಿದ್ರೆ ಘಟಕ
3. ಮಹಿಳೆಯರ ತ್ರೋ ಬಾಲ್ ಪ್ರಥಮ– ಬೆಳ್ತಂಗಡಿ ಘಟಕ
ದ್ವಿತೀಯ — ಮೂಡಬಿದ್ರೆ ಘಟಕ
4. ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ– ಬೆಳ್ತಂಗಡಿ ಘಟಕ
ದ್ವಿತೀಯ — ಅಡ್ವೆ ಘಟಕ
5. ಮಹಿಳೆಯರ 100 ಮೀಟರ್ ಓಟ ಪ್ರಥಮ– ಮಾಣಿ ಘಟಕ
ದ್ವಿತೀಯ — ಮೂಡಬಿದ್ರೆ ಘಟಕ