ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ಸಭಾಂಗಣದಲ್ಲಿ ದಿನಾಂಕ 29-06-2024 ರಂದು ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಮಹಿಳಾ ಸಂಚಾಲಕಿ, ಸಮಾಜ ಸೇವಕಿ ಹಾಗೂ ಮಂಗಳೂರು ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯಾದ ವಿದ್ಯಾ ರಾಕೇಶ್ ಹಾಗೂ ತಂಡದವರಾದ ಡಾ. ರಾಕೇಶ್ ಕುಮಾರ್, ಹರೀಶ್ ಅಡ್ಕ ಹಾಗೂ ಶ್ರೀ ಶ್ರೀಧರ್ ಕುಂಬಳೆ ಇವರು ತಾರಸಿ ತೋಟ ಹಾಗೂ ಅಣಬೆ ಕೃಷಿ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ದೀಪ ಪ್ರಜ್ವಲನೆ ಹಾಗೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಯಾವುದೇ ಔಪಚಾರಿಕ ಸಭಾ ಕಾರ್ಯಕ್ರಮವಿಲ್ಲದೆ ಎಲ್ಲರನ್ನೂ ಸ್ವಾಗತಿಸಿ, ವೇದಿಕೆಯನ್ನು ಸಂಪನ್ಮೂಲ ವ್ಯಕ್ತಿಗಳಿಗೆ ಬಿಟ್ಟುಕೊಡಲಾಯಿತು.
ಕೃಷಿಯಲ್ಲಿ ಆಸಕ್ತರು, ತೋಟಗಾರಿಕೆಯಲ್ಲಿ ಆಸಕ್ತರು ಹಾಗೂ ಕೃಷಿಕರು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಮಂದಿ ಭಾಗವಹಿಸಿದ ಈ ಕಾರ್ಯಗಾರದಲ್ಲಿ ಸಾವಯವ ಕೃಷಿ, ತಾರಸಿ ಮತ್ತು ಮನೆಯಂಗಳದಲ್ಲಿ ಹೂ ಹಣ್ಣು ತರಕಾರಿ ಗಿಡಗಳನ್ನು ಬೆಳೆಸುವ ರೀತಿ, ಕಸಿ ಕಟ್ಟುವುದು, ಅಣಬೆ ಕೃಷಿ ಇತ್ಯಾದಿ ಇನ್ನೂ ಅನೇಕ ವಿಷಯಗಳನ್ನು ತಿಳಿಸಿಕೊಡಲಾಯಿತು. ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಗಿಡಗಳನ್ನು ಹಂಚಲಾಯಿತು.
ಘಟಕದ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.